ತವರಿನಲ್ಲೇ ಸಿ ಎಸ್ ಕೆ ಗೆ ಶಾಕ್: ಆರ್ ಸಿ ಬಿಯಿಂದ ಹೀನಾಯ ಸೋಲು!

ಚೆಪಾಕ್ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 18ನೇ ಆವೃತ್ತಿಯ ಪಂದ್ಯದಲ್ಲಿ ಆರ್ಸಿಬಿ ಮತ್ತು ಸಿಎಸ್ಕೆ ತಂಡಗಳು ಮುಖಾಮುಖಿಯಾಗಿ ಸೆಣಸಾಡಿತು. ಆರ್ಸಿಬಿ ನೀಡಿದ್ದ 197 ಗುರಿಯನ್ನು ಬೆನ್ನಟ್ಟಿದ ಸಿಎಸ್ಕೆ, ಆರಂಭಿಕ ಹಂತದಲ್ಲೇ ವಿಕೆಟ್ ಕಳೆದುಕೊಂಡು ಗುರಿಯನ್ನು ತಲುಪುವಲ್ಲಿ ಎಡವಿತು.
ಅಂತಿಮವಾಗಿ ತವರಿನಲ್ಲೇ ಎರಡನೇ ಪಂದ್ಯ ಸೋತ ಚೆನ್ನೈ ಪಡೆಗೆ ಭಾರೀ ಮುಖಭಂಗ ಉಂಟಾಯಿತು.
ಐಪಿಎಲ್ ಇತಿಹಾಸದಲ್ಲಿ ಬದ್ಧ ವೈರಿ ತಂಡಗಳು ಎಂದೇ ಗುರುತಿಸಿಕೊಂಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಪಂದ್ಯ ರೋಚಕತೆಗೆ ತಿರುಗದೆ ಕೇವಲ ಒನ್ ಸೈಡ್ ಪಂದ್ಯವಾಗಿದ್ದು ಕ್ರಿಕೆಟ್ ಅಭಿಮಾನಿಗಳಲ್ಲಿ ನಿರಾಶೆ ಮೂಡಿಸಿತು. ಮೊದಲು ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ಸಿಎಸ್ಕೆ, ಆರ್ಸಿಬಿಗೆ ಬ್ಯಾಟ್ ಮಾಡಲು ಆಹ್ವಾನಿಸಿತು.
ಮೊದಲು ಬ್ಯಾಟ್ ಮಾಡಿದ ಆರ್ಸಿಬಿ ಪಡೆ, 20 ಓವರ್ ಅಂತ್ಯಕ್ಕೆ 7 ವಿಕೆಟ್ ಕಳೆದುಕೊಂಡು 196 ರನ್ ಕಲೆಹಾಕಲಷ್ಟೇ ಶಕ್ತವಾಯಿತು. ತಂಡದ ಪರ ನಾಯಕ ರಜತ್ ಪಟಿದಾರ್ (51 ರನ್) ಅಬ್ಬರದ ಬ್ಯಾಟಿಂಗ್ ನಡೆಸಿ, ಆಕರ್ಷಕ ಅರ್ಧಶತಕ ಗಳಿಸಿದರೆ, ಫಿಲ್ ಸಾಲ್ಟ್ (32 ರನ್), ಟಿಮ್ ಡೇವಿಡ್ ಮತ್ತು ವಿರಾಟ್ ಕೊಹ್ಲಿ (31 ರನ್) ಕೂಡ ಉತ್ತಮ ರನ್ ಕೊಡುಗೆಯನ್ನು ನೀಡಿದರು. ಈ ಗುರಿಯನ್ನು ಬೆನ್ನಟ್ಟಿದ ಸಿಎಸ್ಕೆಗೆ ಆರಂಭದಲ್ಲೇ ಭಾರೀ ಆಘಾತ ಎದುರಾಯಿತು.
ಕ್ಯಾಪ್ಟನ್ ರುತುರಾಜ್ ಗಾಯಕ್ವಾಡ್, ರಾಹುಲ್ ತ್ರಿಪಾಠಿ ತಮ್ಮ ಜವಾಬ್ದಾರಿಯನ್ನು ಮರೆತು ಹೋಗಿದ್ದೇ ತಂಡ ಸಂಕಷ್ಟಕ್ಕೆ ಸಿಲುಕುವಂತಾಯಿತು. ನಂತರದಲ್ಲಿ ಕ್ರೀಸ್ಗೆ ಅಂಟಿ ನಿಂತ ರಚಿನ್ ರವೀಂದ್ರ, 31 ಎಸೆತದಲ್ಲಿ 41 ರನ್ ಸಿಡಿಸಿ ತಂಡದ ಮೊತ್ತವನ್ನು ಕೊಂಚ ಏರಿಸಿದರು. ಆದರೆ, ಅದು ಫಲಿಸಲಿಲ್ಲ. ಅಂತಿಮವಾಗಿ ಗೆಲುವಿನಿಂದ ದೂರ ಉಳಿದ ಸಿಎಸ್ಕೆ ಪರ ಜಡೇಜಾ ಮತ್ತು ಮಹೇಂದ್ರ ಸಿಂಗ್ ಧೋನಿ ಹೆಚ್ಚುವರಿ ರನ್ ಕೊಡುಗೆ ನೀಡಿದರು.
50 ರನ್ಗಳ ಅಂತದಲ್ಲಿ ಸಿಎಸ್ಕೆಯನ್ನು ಬಗ್ಗುಬಡಿದ ಆರ್ಸಿಬಿ, ಪ್ರಸ್ತುತ ಐಪಿಎಲ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನವನ್ನು ಅಲಂಕರಿಸಿದೆ. ಆರ್ಸಿಬಿ ನಂತರದಲ್ಲಿ ಲಖನೌ ಸೂಪರ್ ಜೈಂಟ್ಸ್, ಪಂಜಾಬ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳಿವೆ.