ಸಿಆರ್‌ಪಿಎಫ್ ಯೋಧನಿಗೆ ಅವಮಾನ; ವಿವಾದಕ್ಕೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಿದ ಹೆಚ್‌ಡಿಎಫ್‌ಸಿ ಬ್ಯಾಂಕ್

ನವದೆಹಲಿ: ಸಿಆರ್‌ಪಿಎಫ್ ಯೋಧನಿಗೆ ಅವಮಾನಿಸಿದ ಪ್ರಕರಣ ಸಂಬಂಧ ಮಹತ್ವದ ಬೆಳವಣಿಗೆಯಾಗಿದೆ. ಸಾಲದ ಬಡ್ಡಿ ಪ್ರಶ್ನಿಸಿದ್ದ ಯೋಧನಿಗೆ, ಹೆಚ್‌ಡಿಎಫ್‌ಸಿ ಮಹಿಳಾ ಉದ್ಯೋಗಿ ಎನ್ನಲಾದ ಮಹಿಳೆ ಭಿಕ್ಷುಕ, ನೀನು ಶಿಕ್ಷಿತನಾಗಿದ್ದರೆ ಪ್ರತಿಷ್ಠಿತ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದೆ.

ಹೀಗಾಗಿ ನೀನು ಗಡಿ ಕಾಯುತ್ತಿದ್ದಿಯಾ ಎಂದು ನಿಂದಿಸಿದ ಆಡಿಯೋ ಒಂದು ಭಾರಿ ವೈರಲ್ ಆಗಿತ್ತು. ಈ ವೈರಲ್ ಆಡಿಯೋ ವಿರುದ್ದ ಭಾರಿ ಆಕ್ರೋಶ ವ್ಯಕ್ತವಾಗಿತ್ತು. ಇದರ ಬೆನ್ನಲ್ಲೇ ಹೆಚ್‌ಡಿಎಫ್‌ಸಿ ಬ್ಯಾಂಕ್ ಸ್ಪಷ್ಟನೆ ನೀಡಿದೆ. ಈ ಯೋಧನಿಗೆ ಅವಮಾನಿಸಿದ ಪ್ರಕರಣದ ಆಡಿಯೋದಲ್ಲಿ ನಿಂದನೆ ಮಾಡಿದ ಮಹಿಳೆ ಹೆಚ್‌ಡಿಎಫ್‌ಸಿ ಉದ್ಯೋಗಿ ಎಂದು ತಪ್ಪಾಗಿ ವರದಿಯಾಗುತ್ತಿದೆ. ಆಕೆ ಹೆಚ್‌ಡಿಎಫ್‌ಸಿ ಉದ್ಯೋಗಿಯಲ್ಲ ಎಂದು ಸ್ಪಷ್ಟನೆ ನೀಡಿದೆ.
ಹೆಚ್‌ಡಿಎಫ್‌ಸಿ ನೀಡಿದ ಸ್ಪಷ್ಟನೆ ಏನು?
ಮಹಿಳೆಯೊಬ್ಬರು ಸಿಆರ್‌ಪಿಎಫ್ ಯೋಧನಿಗೆ ಅವಮಾನ ಮಾಡಿರುವ ಆಡಿಯೋ ಕ್ಲಿಪ್ ಹರಿದಾಡುತ್ತಿರುವ ಕುರಿತು ಸ್ಪಷ್ಚೀಕರಣ. ಈ ಆಡಿಯೋದಲ್ಲಿ ಮಹಿಳೆ ಯೋಧನ ನಿಂದಿಸುತ್ತಿರುವುದು ಬೆಳಕಿಗೆ ಬಂದಿದೆ. ಹಲವು ವರದಿಗಳಲ್ಲಿ ಯೋಧನ ನಿಂದಿಸಿದ ಮಹಿಳೆ ಹೆಚ್‌ಡಿಎಫ್‌ಸಿ ಉದ್ಯೋಗಿ ಎಂದು ಉಲ್ಲೇಖಿಸಲಾಗಿದೆ. ಈ ಮೂಲಕ ನಾವು ಸ್ಪಷ್ಟಪಡಿಸುವುದೇನೆಂದರೆ, ಈ ಆಡಿಯೋ ಕ್ಲಿಪ್‌ನಲ್ಲಿರುವ ಮಹಿಳೆ ಹೆಚ್‌ಡಿಎಫ್‌ಸಿ ಬ್ಯಾಂಕ್ ಉದ್ಯೋಗಿಯಲ್ಲ. ಆಡಿಯೋ ಕ್ಲಿಪ್‌ನಲ್ಲಿ ಮಹಿಳೆ ಆಡಿದ ಮಾತುಗಳು ಒಪ್ಪುವಂತದಲ್ಲ, ಇಷ್ಟೇ ಅಲ್ಲ ಅದು ನಮ್ಮ ಸಂಸ್ಥೆಯ ನೀತಿ, ಮೌಲ್ಯಗಳಿಗೆ ಒಳಪಟ್ಟಿಲ್ಲ ಎಂದು ಸ್ಪಷ್ಟನೆ ನೀಡಿದೆ.
ಸಾಲ ಮೇಲಿನ ಬಡ್ಡಿ ಪ್ರಶ್ನಿಸಿದ ಯೋಧ
ಸಾಲದ ವಿಭಾಗಕ್ಕೆ ಕರೆ ಮಾಡಿದ್ದ ಸಿಆರ್‌ಪಿಎಫ್ ಯೋಧ, ಪಡೆದುಕೊಂಡಿದ್ದ ಸಾಲದ ಬಡ್ಡಿ ಹೆಚ್ಚಾಗಿರುವ ಕುರಿತು ಪ್ರಶ್ನಿಸಿದ್ದಾರೆ. ಈ ಪ್ರಶ್ನೆಗೆ ಗರಂ ಆದ ಮಹಿಳೆ ಯೋಧನ ನಿಂದಿಸಿದ್ದಾಳೆ. ನೀನು ಅನಕ್ಷರಸ್ಥನಾಗಿದ್ದಿ. ನಿನ್ನ ಶಕ್ಷಿಣಕ್ಕೆ ಅನುಸಾರ ನೀನು ಗಡಿ ಕಾಯುತ್ತಿದ್ದೀಯಾ. ಉತ್ತಮ ಶಿಕ್ಷಣ ಪಡೆದಿದ್ದರೆ, ಯಾವಾದಾದರು ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೆ. ನಿಮ್ಮಂತವರಿಗೆ ವಿಶೇಷ ಚೇತನ ಮಕ್ಕಳು ಹುಟ್ಟುತ್ತಾರೆ ಎಂದು ನಿಂದಿಸಿದ್ದಾಳೆ.
ಕ್ಷಮೇ ಕೇಳಿರುವ ಆಡಿಯೋ ಪೋಸ್ಟ್
ಈ ಆಡಿಯೋ ಸೋಶಿಯಲ್ ಮೀಡಿಯಾ ಮೂಲಕ ವೈರಲ್ ಆಗುತ್ತಿದ್ದಂತೆ ಭಾರಿ ಆಕ್ರೋಶ ವ್ಯಕ್ತವಾಗಿತ್ತು.ಮಹಿಳೆ ವಿರುದ್ದ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದರು. ಇದರ ಬೆನ್ನಲ್ಲೇ ಮಹಿಳೆ ಕ್ಷಮೆ ಕೇಳಿರುವ ಆಡಿಯೋ ಒಂದು ವೈರಲ್ ಆಗಿದೆ. ಯೋಧರಿಗೆ ಅವಮಾನ ಉದ್ದೇಶ ಇರಲಿಲ್ಲ. ಆದರೆ ನನ್ನಿಂದ ಆ ರೀತಿಯ ಮಾತುಗಳು ಬಂದಿದೆ. ಮಾತುಗಳು ಆಡಿ ಆಗಿದೆ. ಇದೀಗ ನಾನು ಕೈಮುಗಿದು ಕ್ಷಮೆ ಕೇಳುತ್ತೇನೆ ಅನ್ನೋ ವಿಡಿಯೋ ಹರಿದಾಡುತ್ತಿದೆ.
