ಗರ್ಲ್‌ಫ್ರೆಂಡ್‌ಗಾಗಿ ಐಫೋನ್ ಕೊಡುವ ಹುಚ್ಚು ಆಸೆ: ಕಿಡ್ನಿ ಮಾರಿದ ಯುವಕ

ತಾನು ಇಷ್ಟಪಡುವ ಹುಡುಗಿಗೆ ಐಫೋನ್ ಗಿಫ್ಟ್ ಕೊಡಬೇಕು ಎಂದು ಹುಡುಗನೊಬ್ಬ ತನ್ನ ಕಿಡ್ನಿಯನ್ನೇ ಮಾರಿದ್ದಾನೆ. ಈ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.

ಪ್ರೀತಿ ಕುರುಡೋ ಅಥವಾ ಪ್ರೀತಿಸುವವರು ಕುರುಡರಾಗಿರುತ್ತಾರೋ, ಗೊತ್ತಿಲ್ಲ. ಪ್ರೀತಿ ಸಿಗಲು ಕೆಲವರು ಏನು ಬೇಕಿದ್ರೂ ಮಾಡ್ತಾರೆ, ಇನ್ನೂ ಕೆಲವರು ಪ್ರೀತಿ ಸಿಕ್ಕಿಲ್ಲ ಅಂತ ಏನು ಬೇಕಿದ್ರೂ ಮಾಡಿಕೊಳ್ತಾರೆ. ಇಲ್ಲೋರ್ವ ಹುಡುಗ ತನ್ನ ಗರ್ಲ್‌ಫ್ರೆಂಡ್‌ನ್ನು ಇಂಪ್ರೆಸ್ ಮಾಡಲು ಐಫೋನ್ ಗಿಫ್ಟ್ ಕೊಡಬೇಕು ಅಂತ ಅಂದುಕೊಂಡಿದ್ದನು. ಹಣ ಇಲ್ಲ ಅಂತ ಈಗ ಕಿಡ್ನಿಯನ್ನೇ ಮಾರಿದ್ದಾನೆ. ಈಗ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.
ಇದು ನಿಜವೋ? ನಾಟಕವೋ?
ಹದಿಹರೆಯದ ಹುಡುಗನೊಬ್ಬ ತನ್ನ ಗೆಳತಿಗೆ ಹೊಸದಾಗಿ ರಿಲೀಸ್ ಆಗಿರೋ ಐಫೋನ್ 16 ಪ್ರೊ ಮ್ಯಾಕ್ಸ್ ಖರೀದಿ ಮಾಡಲು ಕಿಡ್ನಿ ಕೊಟ್ಟ ಘಟನೆ ನಿಜಕ್ಕೂ ತೀವ್ರ ಆಘಾತಕಾರಿಯಾಗಿದೆ. ಐಫೋನ್ 16 ಪ್ರೊ ಮ್ಯಾಕ್ಸ್ ಖರೀದಿಸಲು ಭಾರತದಲ್ಲಿ ₹ 135,900 ರೂಪಾಯಿ ಬೇಕಿದೆ. ಎರಡು ಮೂತ್ರಪಿಂಡಗಳಲ್ಲಿ ಆ ಹುಡುಗ ಒಂದು ಕಿಡ್ನಿ ಮಾರಾಟ ಮಾಡಿದ್ದಾನೆ ಎಂದು ಹೇಳಲಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ವಿಡಿಯೋವೊಂದು ವೈರಲ್ ಆಗ್ತಿದೆ. ಆದರೆ ಇದು ನಿಜವೋ? ಇಲ್ಲವೋ ಎಂಬ ಬಗ್ಗೆ ಅಧಿಕೃತ ಮಾಹಿತಿ ಇಲ್ಲ.
