‘ಹಸುವನ್ನು ಪೂಜಿಸುವ ಕಳ್ಳರು’ ಹಿಂದೂ ಧರ್ಮದ ವಿರುದ್ಧ ಬ್ರಿಟಿಷ್ ವ್ಲಾಗರ್ ಅವಹೇಳನ

ಬ್ರಿಟಿಷ್ ವ್ಲಾಗರ್ ಭಾರತ, ಹಿಂದೂ ಧರ್ಮ ಮತ್ತು ಭಾರತೀಯರ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದಾರೆ. ಗೋವು ಪೂಜೆ ಮತ್ತು ಭಾರತೀಯರನ್ನು ಕಳ್ಳರೆಂದು ಕರೆದಿದ್ದಕ್ಕೆ ವ್ಯಾಪಕ ಟೀಕೆ ಎದುರಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿದೆ.
ಭಾರತದಲ್ಲಿ 140 ಕೋಟಿ ಸಮಸ್ಯೆಗಳಿವೆ.

ನನಗೆ ಆ ದೇಶ ಇಷ್ಟವಿಲ್ಲ. ಅಲ್ಲಿ ಮನುಷ್ಯರ ಬದಲು ಹಸುವನ್ನು (ಗೋವು) ಪೂಜಿಸುತ್ತಾರೆ. ಭಾರತೀಯರೆಲ್ಲ ಕಳ್ಳರು’ ಎಂದ ಬ್ರಿಟನ್‌ನ ವ್ಲಾಗರ್ ನೀಡಿರುವ ಹೇಳಿಕೆ ಆಕ್ರೋಶಕ್ಕೆ ಕಾರಣವಾಗಿದೆ.
ಗೋವನ್ನು ಪೂಜಿಸುವ ಹಿಂದೂಗಳು ಮತ್ತು ಅವರ ಆಚರಣೆಗಳ ಬಗ್ಗೆ ಅವಹೇಳನಕಾರಿಯಾಗಿ ಬ್ರಿಟನ್‌ನ ವ್ಲಾಗರ್ ಟೀಕೆ ಮಾಡಿದ್ದಾನೆ. ಈ ಟೀಕೆಗಳಿಗೆ ಭಾರತೀಯರು ತಿರುಗೇಟು ನೀಡಿದ್ದಾರೆ. ಭಾರತೀಯರ ಮೇಲೆ ವ್ಲಾಗರ್ ಕಳ್ಳತನದ ಆರೋಪವನ್ನು ಮಾಡಿದ್ದಾನೆ.

ಮೈಲ್ಸ್ ರೂಟ್ಲೆಡ್ಜ್ ಎಂಬಾತನಿಗೆ ದುಬೈನಲ್ಲಿ ಕಳೆದುಕೊಂಡಿದ್ದ ಏರ್‌ಪಾಡ್ ಒಂದು ವರ್ಷದ ಬಳಿಕ ಸಿಕ್ಕಿತ್ತು. ಆಗ ಅದನ್ನು ಕದ್ದ ಆರೋಪವನ್ನು ಭಾರತೀಯರ ಮೇಲೆ ಹೊರಿಸಿರಿರುವ ಆತ, ‘ಅನೇಕ ಭಾರತೀಯರು ಭ್ರಷ್ಟ ವ್ಯವಸ್ಥೆಯಿಂದ ಬಂದವರು. ಅವರು ಮನುಷ್ಯನ ಬದಲು ಹಸುವನ್ನು ಪೂಜಿಸುತ್ತಾರೆ, ಅದಕ್ಕಾಗಿಯೇ ಭಾರತೀಯರು ಮನುಷ್ಯರೇ ಅಲ್ಲ ಎಂಬುದು ನನ್ನ ಅಭಿಪ್ರಾಯ.
ಕೋಣೆ ಸ್ವಚ್ಛಗೊಳಿಸುವ ನೆಪದಲ್ಲಿ ಬಂದು ನನ್ನ ಏರ್‌ಪಾಡ್ಸ್ ಕದ್ದು ಪಾಕಿಸ್ತಾನಿಗೆ ಮಾರಿ ನಂಬಿಕೆದ್ರೋಹ ಮಾಡಿದ್ದಾರೆ’ ಎಂದು ಬಾಯಿಗೆ ಬಂದಂತೆ ಮಾತನಾಡಿದ್ದಾನೆ.ಈತನ ವಿರುದ್ಧ ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ಟೀಕೆ ವ್ಯಕ್ತವಾಗುತ್ತಿದೆ.
ಈ ವಿವಾದಾತ್ಮಕ ಯೂಟ್ಯೂಬರ್ ಮೈಲ್ಸ್ ರೂಟ್ಲೆಡ್ಜ್ X ನಲ್ಲಿ 333K ಕ್ಕೂ ಹೆಚ್ಚು ಫಾಲೋವರ್ಸ್ ಮತ್ತು YouTube ನಲ್ಲಿ 178K ಕ್ಕೂ ಹೆಚ್ಚು ಚಂದಾದಾರರನ್ನು ಹೊಂದಿದ್ದಾನೆ. ತನ್ನ ಏರ್‌ಪಾಡ್‌ಗಳನ್ನು ಕದ್ದ ವ್ಯಕ್ತಿಯನ್ನು ದುಬೈನಲ್ಲಿ ಕಳ್ಳತನದ ಆರೋಪದ ಮೇಲೆ ಬಂಧಿಸಲಾಗಿದೆ ಎಂದು ಹೇಳಿಕೊಂಡಿದ್ದಾನೆ.
