ಗೋವಿಗೆ ಮದ್ಯ ಕುಡಿಸಿ ಬಂಡಿ ಎಳೆಯುವಂತೆ ಹಿಂಸೆ; ಸೋಶಿಯಲ್ ಮೀಡಿಯಾದಲ್ಲಿ ಕಿಡಿಗೇಡಿಗಳ ವಿಡಿಯೋ ವೈರಲ್.

ಹರಿಯಾಣ: ಹೋಳಿ(Holi) ಹಬ್ಬದ ಆಚರಣೆ ಸಂದರ್ಭದಲ್ಲಿ ಕುಡಿದ ಮತ್ತಿನಲ್ಲಿದ್ದ ಪುರುಷರು ಗೋಮಾತೆಗೆ ಬಲವಂತವಾಗಿ ಮದ್ಯಪಾನ ಮಾಡಿಸಿರುವ ವಿಡಿಯೋ ವೈರಲ್ ಆಗಿದೆ. ಅಷ್ಟೇ ಅಲ್ಲದೆ ಗೋವಿಗೆ ಮದ್ಯ ಕುಡಿಸಿದ ಬಳಿಕ ಗಾಡಿಯ ಮೇಲೆ ಜನರು ನಿಂತುಕೊಂಡು ಆ ಹಸುವಿಗೆ ಗಾಡಿಯನ್ನು ಎಳೆಯುವಂತೆ ಒತ್ತಾಯಿಸಲಾಯಿತು. ಇದರಲ್ಲಿ ಬಂಡಿಯ ಮೇಲೆ ಕುಳಿತಿದ್ದ ಪುರುಷರ ಗುಂಪನ್ನು ಹಸುವೊಂದು ಎಳೆಯುತ್ತಿರುವುದನ್ನು ತೋರಿಸಲಾಗಿದೆ.ಇಬ್ಬರು ಪುರುಷರು ಆ ಗೋವಿನ ಬಾಯಿಯನ್ನು ಬಲವಂತವಾಗಿ ತೆರೆದು ಅದಕ್ಕೆ ಮದ್ಯ ಕುಡಿಸುತ್ತಿರುವುದನ್ನು ಕಾಣಬಹುದು. ಇತರ ಜನರು ಈ ಕೃತ್ಯವನ್ನು ವೀಕ್ಷಿಸುತ್ತಿರುವುದನ್ನು ಕಾಣಬಹುದು. ‘StreetdogsofBombay’ ಎಂಬ ಇನ್‌ಸ್ಟಾಗ್ರಾಂ ಪುಟದಲ್ಲಿ ಪೋಸ್ಟ್ ಮಾಡಲಾದ ವೀಡಿಯೊ ಅಪ್‌ಲೋಡ್ ಮಾಡಿದ ಕೇವಲ ಒಂದು ಗಂಟೆಯೊಳಗೆ 36.8 ಸಾವಿರಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ. ಹೋಳಿ ಹಬ್ಬವನ್ನು ಧುಲೇತಿ, ಧುಲಂಡಿ ಅಥವಾ ರಂಗ್ವಾಲಿ ಹೋಳಿ ಎಂದೂ ಕರೆಯುತ್ತಾರೆ.ಹಿಂದೂ ಕ್ಯಾಲೆಂಡರ್ ಪ್ರಕಾರ ಹೋಳಿ ಹಬ್ಬದ ದಿನಾಂಕಗಳು ಪ್ರತಿ ವರ್ಷ ಬದಲಾಗುತ್ತವೆ. ಸಂಪ್ರದಾಯದ ಪ್ರಕಾರ, ಈ ವರ್ಷ ಹೋಳಿಕಾ ದಹನ್ ಅನ್ನು ಮಾರ್ಚ್ 2 ರಂದು ಆಚರಿಸಲಾಗುತ್ತದೆ ಮತ್ತು ಹೋಳಿಯನ್ನು ಮಾರ್ಚ್ 3 ಮಂಗಳವಾರೆ ಆಚರಿಸಲಾಗುತ್ತದೆ.ಹೋಳಿ ಹಿಂದೂ ಧರ್ಮದ ಅತಿದೊಡ್ಡ ಹಬ್ಬಗಳಲ್ಲಿ ಒಂದಾಗಿದೆ ಮತ್ತು ಕೆಟ್ಟದ್ದರ ಮೇಲೆ ಒಳ್ಳೆಯದರ ವಿಜಯವನ್ನು ಸಂಕೇತಿಸುತ್ತದೆ. ಈ ಹಬ್ಬವನ್ನು ಬಣ್ಣಗಳು, ಸಂಗೀತ ಮತ್ತು ಗುಜಿಯಾ, ಮಾಲ್ಪುವಾ ಮತ್ತು ಥಂಡೈ ಮುಂತಾದ ಸಾಂಪ್ರದಾಯಿಕ ಖಾದ್ಯಗಳೊಂದಿಗೆ ಸಂತೋಷದಿಂದ ಆಚರಿಸಲಾಗುತ್ತದೆ.
