ದೆಹಲಿಯಲ್ಲಿ ಕೋವಿಡ್ ಆತಂಕ: ಆಸ್ಪತ್ರೆಗಳಿಗೆ ತುರ್ತು ಸಿದ್ಧತೆ ಆದೇಶ

ನವದೆಹಲಿ: ಭಾರತದಲ್ಲಿ ಹೆಚ್ಚುತ್ತಿರುವ ಕೊವಿಡ್ -19 ಕಳವಳಗಳ ಮಧ್ಯೆ ದೆಹಲಿ ಸರ್ಕಾರವು ಆಸ್ಪತ್ರೆಗಳಿಗೆ ಹೊಸ ಸಲಹೆಯನ್ನು ನೀಡಿದೆ. ಕೊವಿಡ್ ಕೇಸುಗಳು ಹೆಚ್ಚುತ್ತಿದ್ದು, ಆಸ್ಪತ್ರೆಗಳು ಸಂಪೂರ್ಣವಾಗಿ ಸಿದ್ಧರಾಗಿರುವಂತೆ ಸೂಚಿಸಿದೆ. ಗುರುಗ್ರಾಮ್‌ನಲ್ಲಿ ಎರಡು ಮತ್ತು ಫರಿದಾಬಾದ್‌ನಲ್ಲಿ ಒಂದು ಶಂಕಿತ ಪ್ರಕರಣಗಳು ಪತ್ತೆಯಾದ ನಂತರ ಈ ನಿರ್ದೇಶನ ನೀಡಲಾಗಿದೆ. ದೆಹಲಿ ಸರ್ಕಾರವು ಆಸ್ಪತ್ರೆಗಳು ಮತ್ತು ಆರೋಗ್ಯ ಕೇಂದ್ರಗಳಿಗೆ ಸಲಹೆಯನ್ನು ನೀಡಿದ್ದು, ಕೋವಿಡ್ -19ಗಾಗಿ ಸಿದ್ಧತೆಯನ್ನು ಹೆಚ್ಚಿಸುವಂತೆ ಸೂಚಿಸಿದೆ. ಹಲವಾರು ಭಾರತೀಯ ರಾಜ್ಯಗಳಲ್ಲಿ ವರದಿಯಾಗುತ್ತಿರುವ ಕೋವಿಡ್ ಪ್ರಕರಣಗಳಲ್ಲಿ ಗಮನಾರ್ಹ ಏರಿಕೆಯ ನಡುವೆ ಆರೋಗ್ಯ ಇಲಾಖೆಯಿಂದ ಈ ಸಲಹೆ ಬಂದಿದೆ.
ಈ ಸಲಹೆಯಲ್ಲಿ, ವೆಂಟಿಲೇಟರ್‌ಗಳು, ಆಮ್ಲಜನಕ ವ್ಯವಸ್ಥೆ, ಬೈ-ಪಿಎಪಿ ಯಂತ್ರಗಳು ಮತ್ತು ಪಿಎಸ್‌ಎ ಸ್ಥಾವರಗಳಂತಹ ಉಪಕರಣಗಳ ಸರಿಯಾದ ಕಾರ್ಯನಿರ್ವಹಣೆಯೊಂದಿಗೆ ಹಾಸಿಗೆಗಳು, ಆಮ್ಲಜನಕ, ಲಸಿಕೆಗಳು ಮತ್ತು ಅಗತ್ಯ ಔಷಧಿಗಳ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಆಸ್ಪತ್ರೆಗಳಿಗೆ ನಿರ್ದೇಶನ ನೀಡಲಾಗಿದೆ.