ಪ್ರೇಮಾನಂದ ಮಹಾರಾಜ್‌ರಿಂದ ವಿವಾದಾತ್ಮಕ ಹೇಳಿಕೆ: ‘100ರಲ್ಲಿ 2-4 ಹುಡುಗಿಯರು ಮಾತ್ರ ಶುದ್ಧ!’

ವಿರಾಟ್ ಕೊಹ್ಲಿ (Virat Kohli) ಹಾಗೂ ಅನುಷ್ಕಾ ಶರ್ಮಾ (Anushka Sharma) ಗುರು, ಉತ್ತರ ಪ್ರದೇಶ ವೃಂದಾವನದ ಪ್ರಸಿದ್ಧ ಸಂತ ಪ್ರೇಮಾನಂದ ಮಹಾರಾಜ್ (Premanand Maharaj) ವಿವಾದಾತ್ಮಕ ಹೇಳಿಕೆ ಈಗ ವೈರಲ್ ಆಗಿದೆ. ಯುವಕರ ಜೀವನ ಶೈಲಿಯನ್ನು ಪ್ರಮೇನಂದ ಮಹಾರಾಜರು ಖಂಡಿಸಿದ್ದು, ಇದು ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಖಾಸಗಿ ಸಂಭಾಷಣೆ ಸಂದರ್ಭದಲ್ಲಿಇಂದಿನ ಕಾಲದಲ್ಲಿ, 100 ರಲ್ಲಿ ಕೇವಲ ಎರಡರಿಂದ ನಾಲ್ಕು ಹುಡುಗಿಯರು ಮಾತ್ರ ಪ್ಯೂರ್. ಉಳಿದವರು ಬಾಯ್ ಫ್ರೆಂಡ್, ಗರ್ಲ್ ಫ್ರೆಂಡ್ ಹೊಂದಿರ್ತಾರೆ ಅಂತ ಪ್ರೇಮಾನಂದ ಮಹಾರಾಜರು ಹೇಳಿಕೆ ನೀಡಿದ್ದಾರೆ.
ಪ್ರೇಮಾನಂದ ಮಹಾರಾಜ್ ಹೇಳಿದ್ದೇನು? : ಒಬ್ಬ ಯುವಕ 4 ಹುಡುಗಿಯರೊಂದಿಗೆ ಸಂಬಂಧ ಹೊಂದಿದ್ದರೆ, ಅವನು ತನ್ನ ಹೆಂಡತಿಯೊಂದಿಗೆ ತೃಪ್ತನಾಗಿರಲು ಸಾಧ್ಯವಾಗುವುದಿಲ್ಲ. ಏಕೆಂದರೆ ಅವನಿಗೆ ಇದು ಅಭ್ಯಾಸವಿರುತ್ತದೆ. ಅದೇ ರೀತಿ, 4 ಪುರುಷರೊಂದಿಗೆ ಸಂಬಂಧ ಹೊಂದಿರುವ ಹುಡುಗಿಗೆ ಗಂಡನನ್ನು ಸ್ವೀಕರಿಸುವ ಧೈರ್ಯ ಇರುವುದಿಲ್ಲ. 100 ರಲ್ಲಿ ಕೇವಲ ಎರಡರಿಂದ ನಾಲ್ಕು ಹುಡುಗಿಯರು ಮಾತ್ರ ಶುದ್ಧ ಜೀವನವನ್ನು ನಡೆಸುವ ಮತ್ತು ಒಬ್ಬ ಪುರುಷನಿಗೆ ಸಮರ್ಪಿತರಾಗಿರುತ್ತಾರೆ ಎಂದು ಪ್ರೇಮಾನಂದ ಮಹಾರಾಜ್ ಹೇಳಿದ್ದಾರೆ.
ಯುವಕರ ಸಂಬಂಧಗಳ ಬಗ್ಗೆ ಕಳವಳ : ಪ್ರೇಮಾನಂದ ಮಹಾರಾಜ್ ತಮ್ಮ ಹೇಳಿಕೆಯಲ್ಲಿ ಇಂದಿನ ಯುವಕರ ಸಂಬಂಧಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಆ ಮಕ್ಕಳು ನಿಜವಾದ ಗಂಡಂದಿರಾಗಲು ಅಥವಾ ನಿಜವಾದ ಸೊಸೆಯಂದಿರಾಗಲು ಸಾಧ್ಯವಿಲ್ಲ ಎಂದಿದ್ದಾರೆ. ಭಕ್ತರೊಬ್ಬರು, ಮಕ್ಕಳಿಗೆ ಒಳ್ಳೆ ಸಂಗಾತಿಯನ್ನು ತರೋದು ಹೇಗೆ ಅಂತ ಕೇಳಿದ್ದರು. ಅದಕ್ಕೆ ಉತ್ತರ ನೀಡಿದ ಪ್ರೇಮಾನಂದ್ ಮಹಾರಾಜ್, ಈಗಿನ ಮಕ್ಕಳು ಪವಿತ್ರವಾಗಿಲ್ಲ ಅಂದ್ಮೇಲೆ ಒಳ್ಳೆಯವರು ಹೇಗೆ ಸಿಗ್ತಾರೆ ಅಂತ ಮರು ಪ್ರಶ್ನೆ ಕೇಳಿದ್ದಾರೆ. ನಮ್ಮ ಪಾಲಕರು, ಅಜ್ಜ- ಅಜ್ಜಿ ಹೇಗಿರ್ತಾ ಇದ್ರು. ಆದ್ರೆ ಈಗಿನ ಹೆಣ್ಣು ಮಕ್ಕಳ ಬಟ್ಟೆ ಹೇಗಿರುತ್ತೆ, ಅವರು ಏನು ಆಚರಣೆ ಮಾಡ್ತಿದ್ದಾರೆ. ಒಬ್ಬ ಹುಡುಗನ ಜೊತೆ ಬ್ರೇಕ್ ಅಪ್ ಇನ್ನೊಬ್ಬನ ಜೊತೆ ವ್ಯವಹಾರ. ನಂತ್ರ ಎರಡನೇಯವನಿಗೂ ಬ್ರೇಕ್ ಅಪ್ ನೀಡಿ ಮೂರನೇಯವನನ್ನು ಹುಡುಕ್ತಾರೆ. ಇದ್ರಿಂದ ಅವರ ವಿಚಾರದಲ್ಲಿ ಬದಲಾವಣೆ ಆಗ್ತಿದೆ. ಅವರು ಹೇಗೆ ಶುದ್ದವಾಗಿರ್ತಾರೆ. ನಾಲ್ಕು ಹೊಟೇಲ್ ಊಟ ಮಾಡಿದ್ರೆ ಮನೆ ಊಟ ಹೇಗೆ ಹಿಡಿಸುತ್ತೆ ಅಂತ ಪ್ರೇಮಾನಂದ ಮಹಾರಾಜರು ಕೇಳಿದ್ದಾರೆ. ಪ್ಯೂರ್ ಸೊಸೆ, ಅಳಿಯ ಸಿಗೋದು ಇಂದಿನ ದಿನಗಳಲ್ಲಿ ಕಷ್ಟವಾಗಿದೆ ಎಂದು ಪ್ರೇಮಾನಂದ್ ಮಹಾರಾಜ್ ಹೇಳಿದ್ದಾರೆ.
ಯುವಕರು ವಿದೇಶಿ ಸಂಸ್ಕೃತಿಯನ್ನು ಪಾಲಿಸಲು ಶುರು ಮಾಡಿದ್ದಾರೆ. ಲಿವ್ ಇನ್ ರಿಲೇಷನ್ ಭಾರತಕ್ಕೆ ಪ್ರವೇಶ ಮಾಡಿದೆ. ಇದು ಅತ್ಯಂತ ಕೆಟ್ಟ ಪದ್ಧತಿ. ಆದ್ರೆ ನಮ್ಮ ಯುವಜನತೆ ಇದ್ದನ್ನೇ ಪಾಲನೆ ಮಾಡ್ತಿದೆ. ಇದ್ರಿಂದ ನಮ್ಮ ಸಂಸ್ಕೃತಿ ಸಂಪೂರ್ಣ ನಾಶವಾಗ್ತಿದೆ ಎಂದು ಪ್ರೇಮಾನಂದ ಮಹಾರಾಜ್ ಹೇಳಿದ್ದಾರೆ.
ಅಷ್ಟೇ ಅಲ್ಲ ಈಗಿನ ಮಕ್ಕಳು ಧರ್ಮನಿಷ್ಠರಾಗಿಲ್ಲ, ಅವರು ಧರ್ಮನಿಷ್ಠರಾಗಿದ್ದರೆ, ಅದನ್ನು ದೇವರ ವರವೆಂದು ಪರಿಗಣಿಸಿ. ಬಾಲ್ಯದಲ್ಲಿ ಏನೇ ತಪ್ಪುಗಳನ್ನು ಮಾಡಿದರೂ ಅದನ್ನು ಕ್ಷಮಿಸ್ತೇವೆ ಆದ್ರೆ ಮದುವೆ ಆದ್ಮೇಲಾದ್ರೂ ನಿಮ್ಮನ್ನು ಸುಧಾರಿಸಿಕೊಳ್ಳಿ ಎಂದು ಪ್ರೇಮಾನಂದ್ ಮಹಾರಾಜ್ ಹೇಳಿದ್ದಾರೆ.
ಜನರ ಪ್ರತಿಕ್ರಿಯೆ : ಪ್ರೇಮಾನಂದ್ ಮಹಾರಾಜರ ಈ ಹೇಳಿಕೆಗೆ ಪರ – ವಿರೋಧಗಳು ಶುರುವಾಗಿವೆ. ಅನೇಕರು ಪ್ರೇಮಾನಂದ ಮಹಾಜಾರ್ ಹೇಳಿಕೆಯನ್ನು ಖಂಡಿಸಿದ್ದಾರೆ. ಮಹಿಳೆಯರ ವಿರುದ್ಧ ಅವಮಾನಕರ ಹೇಳಿಕೆ ನೀಡಿದ್ದಾರೆ. ಅವರದ್ದು ಸಂಕುಚಿತ ಮನಸ್ಥಿತಿ, ಇದ್ರಿಂದ ಮಹಿಳೆ ಮೇಲಿನ ಗೌರವ ಕಡಿಮೆ ಆಗುತ್ತದೆ ಎಂದು ಕೆಲವರು ಆರೋಪ ಮಾಡಿದ್ದಾರೆ.
