ದೇಶಾದ್ಯಂತ ಸದ್ದು ಮಾಡಿದ ದೂರು: ‘ಬೆಳಗ್ಗೆ ಪತ್ನಿ, ರಾತ್ರಿಯಾದರೆ ಹಾವಾಗಿ ಬದಲಾಗುತ್ತಾಳೆ, ಕಚ್ಚಲು ಬರುತ್ತಾಳೆ’ ಎಂದು ಪತಿಯ ಅಳಲು!

ಸಿತಾಪುರ : ಪತಿ ಹಾಗೂ ಪತಿ ನಡುವಿನ ಜಗಳ, ಸಂಬಂಧ, ಮನಸ್ತಾಪ ಕುರಿತು ಪ್ರತಿ ದಿನ ಹಲವು ದೂರುಗಳು ದಾಖಲಾಗುತ್ತಿದೆ. ಈ ಪೈಕಿ ಕೆಲ ದೂರು ಭಾರಿ ಸದ್ದು ಮಾಡುತ್ತಿದೆ. ಪೈಕಿ ಮಿರಾಜ್ ಅನ್ನೋ ಪತಿ ದಾಖಲಿಸಿದ ದೂರು ಇದೀಗ ದೇಶಾದ್ಯಂತ ಸದ್ದು ಮಾಡುತ್ತಿದೆ. ಬೆಳಗ್ಗೆ ಹೆಂಡತಿಯಾಗಿರುತ್ತಾಳೆ, ರಾತ್ರಿಯಾದರೆ ಹಾವಾಗಿ ಪರಿವರ್ತನೆಯಾಗುತ್ತಾಳೆ, ಕಚ್ಚಲು ಬರುತ್ತಾಳೆ. ನನಗೆ ನೆಮ್ಮದಿಯಾಗಿ ಇರಲು ಬಿಡುತ್ತಿಲ್ಲ ಎಂದು ಪತಿ ದೂರು ದಾಖಲಿಸಿದ ಘಟನೆ ಉತ್ತರ ಪ್ರದೇಶದ ಸಿತಾಪುರದಲ್ಲಿ ನಡೆದಿದೆ.

ಸಮಾಧಾನ ದಿವಸ ಕಾರ್ಯಕ್ರಮದಲ್ಲಿ ಕಾರ್ಯಕ್ರಮದಲ್ಲಿ ದೂರು
ಉತ್ತರ ಪ್ರದೇಶದಲ್ಲಿ ಸಮಾಧಾನ ದಿವಸ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಕಾರ್ಯಕ್ರಮಕ್ಕೆ ಆಗಮಿಸಿದ ಮಿರಾಜ್ ತನ್ನ ದೂರು ಸಲ್ಲಿಸಿದ್ದಾನೆ. ನನ್ನ ಪತ್ನಿ ನಸೀಮುನ್ ಜೊತೆಗೆ ಇರಲು ಸಾಧ್ಯವಾಗುತ್ತಿಲ್ಲ. ಬೆಳಗ್ಗೆ ಪತ್ನಿಯಾಗಿರುತ್ತಾಳೆ, ಕತ್ತಲಾಗುತ್ತಿದ್ದಂತೆ ಹಾವಾಗಿ ಬದಲಾಗುತ್ತಾಳೆ. ಹಾವಿನಂತೆ ವರ್ತಿಸುತ್ತಾಳೆ, ಕಚ್ಚಲು ಪ್ರಯತ್ನಿಸುತ್ತಾಳೆ. ನನಗೆ ನ್ಯಾಯ ಕೊಡಿಸಿ, ನಾನು ಪತ್ನಿ ಜೊತೆಗೆ ಇರಲು ಸಾಧ್ವಾಗುತ್ತಿಲ್ಲ ಎಂದು ಅಧಿಕಾರಿಗಳ ಬಳಿ ಗೋಳೋ ಎಂದು ಅತ್ತಿದ್ದಾನೆ. ನನ್ನ ಪತ್ನಿ ನನ್ನ ಮೇಲೆ ದಾಳಿ ಮಾಡುತ್ತಾಳೆ. ಹಲವು ಬಾರಿ ಈ ಮಾತು ಹೇಳಿದ್ದಾಳೆ. ಗಂಭೀರ ಪ್ರಕರಣದಲ್ಲಿ ಸಿಕಿಸುವುದಾಗಿ ಹೇಳುತ್ತಿದ್ದಾಳೆ. ನನಗೆ ಬದಕಲು ಸಾಧ್ಯವಾಗುತ್ತಿಲ್ಲ. ಪೊಲೀಸರು ರಕ್ಷಣೆ ಕೊಡಬೇಕು ಎಂದು ಅಳಲು ತೋಡಿಕೊಂಡಿದ್ದಾನೆ.
ಪೊಲೀಸರಿಗೆ ವರ್ಗಾಯಿಸಿದ ದೂರು
ಅಧಿಕಾರಿಗಳ ಬಳಿ ತನ್ನ ಅಳಲು ತೋಡಿಕೊಂಡ ಮೀರಾಜ್‌ಗೆ ಸಮಾಧಾನ ಹೇಳಿದ್ದಾರೆ. ಬಳಿಕ ಮಿರಾಜ್ ದೂರನ್ನು ಅಧಿಕಾರಿಗಳು ಪೊಲೀಸರಿಗೆ ವರ್ಗಾಯಿಸಿದ್ದರೆ. ಈ ಕುರಿತು ಗಮನಹರಿಸುವಂತೆ ಸೂಚಿಸಿದ್ದಾರೆ. ಪೊಲೀಸರು ಮಿರಾಜ್ ಬಳಿಯಿಂದ ಮಾಹಿತಿ ಪಡೆದುಕೊಂಡಿದ್ದಾರೆ. ಇತ್ತ ಮಿರಾತ್ ಪತ್ನಿ ನಸೀಮುನ್ ಕರೆಸಿ ವಿಚಾರಣೆ ನಡೆಸಲು ನಿರ್ಧರಿಸಿದ್ದಾರೆ.
ನೆಟ್ಟಿಗರ ಸಲಹೆ
ಈ ಪ್ರಕರಣ ಸೋಶಿಯಲ್ ಮೀಡಿಯಾದಲ್ಲಿ ಬಹಿರಂಗವಾಗುತ್ತಿದ್ದಂತೆ ಹಲವರು ಪೊಲೀಸರಿಗೆ ಸಲಹೆ ಕೊಟ್ಟಿದ್ದಾರೆ. ಇವರಿಬ್ಬರಲ್ಲಿ ಒಬ್ಬರಿಗೆ ಅಥವಾ ಇಬ್ಬರಿಗೂ ಅಕ್ರಮ ಸಂಬಂದ ಇದೆ ಎಂದು ಮೇಲ್ನೋಟಕ್ಕೆ ಕಾಣುತ್ತಿದೆ. ಹೀಗಾಗಿ ಈ ಸಮಸ್ಯೆ ಉದ್ಭವಾಗಿರುವಂತಿದೆ. ಹೀಗಾಗಿ ಪೊಲೀಸರು ಈ ಕುರಿತು ಗಮನ ಹರಿಸಬೇಕು ಎಂದು ಸಲಹೆ ನೀಡಿದ್ದಾರೆ. ಈ ಪ್ರಕರಣದಲ್ಲಿ ಏನೋ ರಹಸ್ಯ ಅಡಗಿದೆ. ಹೀಗಾಗಿ ಈ ರೀತಿ ಚಿತ್ರ ವಿಚಿತ್ರ ದೂರು ಹೊರಬಂದಿದೆ ಎಂದು ನೆಟ್ಟಿಗರು ಸಲಹೆ ನೀಡಿದ್ದಾರೆ.
ಪತಿ ಪತ್ನಿ ನಡುವಿನ ದೂರು ಪ್ರಮಾಣ ಹೆಚ್ಚಳ
ಪತಿ ಹಾಗೂ ಪತ್ನಿ, ಸಂಬಂಧ ನಡುವೆ ಇತ್ತೀಚೆಗೆ ದಾಖಲಾಗುತ್ತಿರುವ ದೂರಿನ ಪ್ರಮಾಣ ಹೆಚ್ಚಳವಾಗುತ್ತಿದೆ. ಮದುವೆಯಾದ ಬೆನ್ನಲ್ಲೇ ದೂರು, ವಿಚ್ಚೇದನ ಪ್ರಕರಣಗಳು ಹೆಚ್ಚಾಗುತ್ತಿದೆ. ಇದರ ಜೊತೆಗೆ ಹಲವು ವಿಚಿತ್ರ ಪ್ರಕರಣಗಳು ಬೆಳಕಿಗೆ ಬರುತ್ತಿದೆ.