Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ರಣ್‌ಬೀರ್ ಕಪೂರ್ ವಿರುದ್ಧ ದೂರು: ಆರ್ಯನ್ ಖಾನ್ ನಿರ್ದೇಶನದ ವೆಬ್ ಸೀರೀಸ್‌ನಲ್ಲಿ ಇ-ಸಿಗರೇಟ್ ಸೇದಿದ್ದಕ್ಕೆ ಕಾನೂನು ಸಂಕಷ್ಟ

Spread the love

ಬಾಲಿವುಡ್ (Bollywood) ಸ್ಟಾರ್ ನಟ ರಣ್​​ಬೀರ್ ಕಪೂರ್ ಸಂಕಷ್ಟಕ್ಕೆ ಸಿಲುಕಿದ್ದಾರೆ. ಶಾರುಖ್ ಖಾನ್ ಪುತ್ರ ‘ಸಹವಾಸ’ ಮಾಡಿದ್ದಕ್ಕೆ ಅವರ ವಿರುದ್ಧ ದೂರು ದಾಖಲಾಗಿದೆ. ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ‘ಬ್ಯಾಡ್ಸ್​ ಆಫ್ ಬಾಲಿವುಡ್’ ಹೆಸರಿನ ವೆಬ್ ಸರಣಿ ಒಂದನ್ನು ನಿರ್ದೇಶನ ಮಾಡಿದ್ದಾರೆ. ಈ ವೆಬ್ ಸರಣಿ ಇತ್ತೀಚೆಗಷ್ಟೆ ಬಿಡುಗಡೆ ಆಗಿದೆ. ವೆಬ್ ಸರಣಿಯಲ್ಲಿ ರಣ್​​ಬೀರ್ ಕಪೂರ್ ಸಹ ನಟಿಸಿದ್ದಾರೆ. ಇದೇ ಕಾರಣಕ್ಕೆ ರಣ್​​ಬೀರ್ ವಿರುದ್ಧ ಹಾಗೂ ವೆಬ್ ಸರಣಿ ನಿರ್ಮಾಣ ಸಂಸ್ಥೆ ಮತ್ತು ಒಟಿಟಿ ವಿರುದ್ಧವೂ ದೂರು ದಾಖಲಾಗಿದೆ.

‘ಬ್ಯಾಡ್ಸ್​ ಆಫ್ ಬಾಲಿವುಡ್’ ವೆಬ್ ಸರಣಿಯ ಕೊನೆಯ ಎಪಿಸೋಡ್​​ನಲ್ಲಿ ರಣ್​​ಬೀರ್ ಕಪೂರ್ ಕಾಣಿಸಿಕೊಂಡಿದ್ದಾರೆ. ರಣ್​​ಬೀರ್ ಕಪೂರ್ ಅವರ ಸೀನ್​​ನಲ್ಲಿ ಇ ಸಿಗರೇಟು ಸೇದುತ್ತಿರುತ್ತಾರೆ. ಅಸಲಿಗೆ ಭಾರತದಲ್ಲಿ ಇ-ಸಿಗರೇಟುಗಳು ಬ್ಯಾನ್ ಆಗಿವೆ. ಇದೇ ಕಾರಣಕ್ಕೆ ಇದೀಗ ರಣ್​​ಬೀರ್ ಕಪೂರ್ ವಿರುದ್ಧ ದೂರು ದಾಖಲಾಗಿದೆ. ಮಾನವ ಹಕ್ಕು ಸಂಘಟನೆಯು, ಈ ಕುರಿತು ಮಾಹಿತಿ ಮತ್ತು ಪ್ರಸಾರ ಖಾತೆ ಇಲಾಖೆಗೆ ದೂರು ದಾಖಲು ಮಾಡಿದೆ.

ನಿಷೇಧಿತ ಇ-ಸಿಗರೇಟು ಸೇದಿರುವುದು ಮಾತ್ರವಲ್ಲದೆ, ಆ ದೃಶ್ಯ ಪ್ರಸಾರ ಆಗುವಾಗ ಎಚ್ಚರಿಕೆ ಸಂದೇಶವನ್ನು ಸಹ ಅವರು ಪ್ರಕಟ ಮಾಡಿಲ್ಲ. ಜನಪ್ರಿಯ ನಟರೊಬ್ಬರು ನಟಿಸಿ ನಿಷೇಧಿತ ವಸ್ತುಗಳಿಗೆ ಪ್ರಚಾರ ನೀಡಿದ್ದಾರೆ. ವೆಬ್ ಸರಣಿ ನೋಡುವ ಯುವಕರು ಇ-ಸಿಗರೇಟು ಬಳಸಲು ಉತ್ಸುಕರಾಗುವ ಅಪಾಯ ಇದೆ. ಹಾಗಾಗಿ ಈ ಬಗ್ಗೆ ಸೂಕ್ತ ಕ್ರಮವನ್ನು ಕೈಗೊಳ್ಳಬೇಕು ಎಂದು ಮಾನವ ಹಕ್ಕು ಸಂಘಟನೆಯು ತನ್ನ ದೂರಿನಲ್ಲಿ ಹೇಳಿದೆ.

‘ಬ್ಯಾಡ್ಸ್​ ಆಫ್ ಬಾಲಿವುಡ್’ ವೆಬ್ ಸರಣಿ ನೆಟ್​​ಫ್ಲಿಕ್ಸ್​​ನಲ್ಲಿ ಬಿಡುಗಡೆ ಆಗಿದ್ದು, ಇದೀಗ ನಟ ರಣ್​​ಬೀರ್ ಕಪೂರ್, ನಿರ್ಮಾಣ ಸಂಸ್ಥೆಯಾದ ರೆಡ್ ಚಿಲ್ಲೀಸ್, ನಟ ರಣ್​​ಬೀರ್ ಕಪೂರ್ ವಿರುದ್ಧ ದೂರು ದಾಖಲಾಗಿದೆ. ‘ಬ್ಯಾಡ್ಸ್​ ಆಫ್ ಬಾಲಿವುಡ್’ ವೆಬ್ ಸರಣಿಯನ್ನು ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ನಿರ್​ದೇಶನ ಮಾಡಿದ್ದು, ಶಾರುಖ್ ಖಾನ್ ಅವರೇ ನಿರ್ಮಾಣ ಮಾಡಿದ್ದಾರೆ.

‘ಬ್ಯಾಡ್ಸ್​ ಆಫ್ ಬಾಲಿವುಡ್’ ವೆಬ್ ಸರಣಿಯು, ಬಾಲಿವುಡ್ ಬಗೆಗಿನ ವೆಬ್ ಸರಣಿಯಾಗಿದ್ದು, ಶಾರುಖ್ ಖಾನ್, ಸಲ್ಮಾನ್ ಖಾನ್, ಆಮಿರ್ ಖಾನ್, ರಣ್ವೀರ್ ಸಿಂಗ್, ಕರಣ್ ಜೋಹರ್, ಬಾದ್​​ಶಾ ಸೇರಿದಂತೆ ಇನ್ನೂ ಹಲವಾರು ಮಂದಿ ಬಾಲಿವುಡ್ ದಿಗ್ಗಜರು ವೆಬ್ ಸರಣಿಯ ಅತಿಥಿ ಪಾತ್ರಗಳಲ್ಲಿ ನಟಿಸಿದ್ದಾರೆ. ಖ್ಯಾತ ನಿರ್ದೇಶಕ ರಾಜಮೌಳಿ ಸಹ ಈ ವೆಬ್ ಸರಣಿಯಲ್ಲಿ ನಟಿಸಿದ್ದಾರೆ. ವೆಬ್ ಸರಣಿ ನೆಟ್​ಫ್ಲಿಕ್ಸ್​​ನಲ್ಲ ಬಿಡುಗಡೆ ಆಗಿದ್ದು ಉತ್ತಮ ಪ್ರದರ್ಶನ ಕಾಣುತ್ತಿದೆ.


Spread the love
Share:

administrator

Leave a Reply

Your email address will not be published. Required fields are marked *