Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಹಾಸ್ಯ ರತ್ನಾಕರ, ಕಾಮಿಡಿ ಕಿಂಗ್ ಬಿರುದುಗಳ ಸರದಾರ:  ರಂಗನಾಯಕ ರಾಜು ತಾಳಿಕೋಟೆ ನಿಧನಕ್ಕೆ ಬಿಕ್ಕಳಿಸಿದ ಸಹ ಕಲಾವಿದರು

Spread the love

ನಗುವಿನ ನಶೆಯಲ್ಲಿ ತೇಲಿಸಿ, ನಮ್ಮನ್ನು ನಕ್ಕು ನಗಿಸುತ್ತಿದ್ದ ಕಲಿಯುಗದ ಕುಡುಕ ಎಂದೇ ಖ್ಯಾತಿ ಗಳಿಸಿದ್ದ ವಿಜಯಪುರದ ರಾಜು ತಾಳಿಕೋಟೆ ಮಿಂಚಿ ಮರೆಯಾಗಿದ್ದಾರೆ. ನಿನ್ನ ಹಠಾತ್ತನೆ ಸಂಭವಿಸಿದ ಹೃದಯಾಘಾತದಿಂದ ಸಾವನಪ್ಪಿದ್ದು ಇಡೀ ಹಾಸ್ಯ ರಂಗಕ್ಕೆ ಬರಸಿಡಿಲು ಬಡಿದಂತಾಗಿದೆ. ಇಡೀ ಚಿತ್ರರಂಗ ಸೇರಿ, ವೃತ್ತಿ ರಂಗ ಭೂಮಿ ಇವರಿಗೆ ಅಂತಿಮ ನಮನ ಸಲ್ಲಿಸಲಾಯಿತು.

ರಂಗನಾಯಕ ಡಾ. ರಾಜು ತಾಳಿಕೋಟೆ ಇನ್ನಿಲ್ಲ ಎಂಬುದು ಇಡೀ ನಾಟಕರಂಗಕ್ಕೆ ಬರಸಿಡಿಲು ಬಡಿದಂತಾಗಿದೆ. ʻಕಲಿಯುಗದ ಕುಡುಕʼನೇಎಂದೇ ಖ್ಯಾತಿಗಳಿಸಿದ್ದ ಹಿರಿಯ ನಟ, ನಿರ್ದೇಶಕ ಡಾ. ರಾಜು ತಾಳಿಕೋಟೆ ಬದುಕಿನ ನಾಟಕಕ್ಕೆ ವಿದಾಯ ಹೇಳಿದ್ದಾರೆ. ವಿಶಿಷ್ಟ ಶೈಲಿಯ ಮಾತುಗಾರ ರಾಜು ನಿನ್ನೆ ಹೃದಯಘಾತದಿಮದ ನಿಧನರಾಗಿದ್ದರೆ. ನಿನ್ನೆ ಶೈನ್ ಶೆಟ್ಟಿ ನಟನೆಯ ಶಂಕರಾಭರಣ ಸಿನಿಮಾ ಚಿತ್ರೀಕರಣದಲ್ಲಿ ಭಾಗಿಯಾಗಿ ಸಂಜೆ ವಿಶ್ರಾಂತಿ ಪಡೆಯುವ ವೇಳೆ ಹಠತ್‌ನೆ ಹೃದಯಾಘಾತ ಸಂಭವಿಸಿ ಕೊನೆ ಉಸಿರೆಳೆದಿದ್ದಾರೆ.

ರಾಜು ತಾಳಿಕೋಟೆ ಜೀವನವೇ ಒಂದು ಅಚ್ಚರಿಯ ಬದುಕು. ಬಹಳ ಸರಳ ಸಹಜವಾಗಿ ಬದುಕಿದ್ದ ರಾಜುಕೋಟೆಯ ನಿಜ ನಾಮ ರಾಜೇಸಾಬ್ ಮುಕ್ತಂ ಸಾಬ್ ಯಂಕಂಚಿ. ಮುಕ್ತಂ ಮತ್ತು ಮೆಹಬೂಬ್ ದಂಪತಿಯ ಪುತ್ರ. ಇಸ್ಲಾಂ ಧರ್ಮದವರಾದರೂ, ರಾಜು ಎಂದೇ ಪ್ರಖ್ಯಾತಿ ಪಡೆದಿದ್ದರು. ಇದೀಗ ಇಬ್ಬರು ಪತ್ನಿಯರು, ಐವರು ಮಕ್ಕಳನ್ನು ತ್ಯಜಿಸಿ ಹೊರಟಿದ್ದಾರೆ.

ಪಾರ್ಥಿವ ಶರೀರದ ಮುಂದೆ ಬಿಕ್ಕಳಿಸಿದ ಸಹ ಕಲಾವಿದರು
ಯುವ ಪೀಳಿಗೆಗೆ ನಾಟಕದ ಅಭಿರುಚಿ ಹೆಚ್ಚಿಸಲು ಸ್ವತಃ ರಂಗಮಂದಿರವನ್ನು ಕಟ್ಟಿದವರು. ಧಾರವಾಡದ ರಂಗಾಯಣದ ನಿರ್ದೇಶಕರಾಗಿದ್ದ ರಾಜು ತಾಳಿಕೋಟೆ ಇಡೀ ರಾಜ್ಯಾದ್ಯಂತ ಸುತ್ತಿ ಹೊಸ ತಂಡವನ್ನ ರಚಿಸಿ ನಾಟಕ ಅಭಿನಯ ಮಾಡಿಸುತ್ತಿದ್ದವರು. ಇವರು ಕೇವಲ ರಂಗಭೂಮಿ ಅಷ್ಟೇ ಅಲ್ಲದೆ ಸಿನಿಮಾ ರಂಗದಲ್ಲೂ ಅಭಿಮಯಿಸಿ ಸೈ ಎನಿಸಿಕೊಂಡಿದ್ದವರು. (ಸಿನಿಮಾ ಡೈಲಾಗ್ ಪ್ಲೋ) ಇವರ ನಟನೆಗೆ ಹಾಸ್ಯ ರತ್ನಾಕರ, ಹಾಸ್ಯ ಸಾಮ್ರಾಟ, ಕಾಮಿಡ್ ಕಿಂಗ್, ಕೆಸೇಟ್ ಕಿಂಗ್ ಎಂಬೆಲ್ಲಾ ಬಿರುದುಗಳನ್ನು ಮುಡಿಗೇರಿಸಿಕೊಂಡಿದ್ದವರು.


Spread the love
Share:

administrator

Leave a Reply

Your email address will not be published. Required fields are marked *