ಕಾಕ್‌ಟೇಲ್‌ನ ಬೆಂಕಿಗೆ ಮುಖ ಸುಟ್ಟು ಹೋಗಿದ್ದ ಪ್ರಕರಣ
ಬೆಂಗಳೂರು: ಬೆಂಗಳೂರಿನ ಬ್ರಿಗೇಡ್ ರಸ್ತೆಯಲ್ಲಿರುವ ಪಬ್‌ನಲ್ಲಿಸೌಮ್ಯ ಮತ್ತು ಅವರ ಸ್ನೇಹಿತರು 2021 ರ ನವೆಂಬರ್ 20 ರಂದು ಸಂಜೆ, ಪಬ್‌ಗೆ ಭೇಟಿ ನೀಡಿದ್ದರು, ಈ ವೇಳೆ ಸ್ಪೆಷಲ್ ಖ್ಯಾದಗಳ ಸೇವನೆಗೆ ಸೌಮ್ಯ ಮತ್ತು ಅವರ ಸ್ನೇಹಿತರು ಕಾಯುತ್ತಿದ್ದರು. ಪಬ್ ಮ್ಯಾನೇಜರ್ ಅವರ ಬಳಿ ಬಂದು ಕಾಕ್ ಟೇಲ್ (ಶಾಟ್) ಪ್ರಯತ್ನಿಸುವಂತೆ ಹೇಳಿದ್ದಾರೆ. ಬೇಡವೆಂದರೂ, ಮ್ಯಾನೇಜರ್ ಒತ್ತಾಯ ಮಾಡಿದ್ದಾರೆ. ನಂತರ ಸೌಮ್ಯ ಮತ್ತು ಅವರ ಸ್ನೇಹಿತರು ಅದನ್ನು ಪ್ರಯತ್ನಿಸಿದ್ದಾರೆ. ಶಾಟ್ ಕುಡಿಯುವ ಮುನ್ನ ಅದಕ್ಕೆ ಬೆಂಕಿ ಹಾಕಿ ಸುಡುತ್ತಾರೆ. ಕಾಕ್ ಟೇಲ್ ಸುಡುವುದು ಬೇಡ, ಎಂದು ಸೌಮ್ಯ ಮತ್ತು ಅವರ ಗೆಳೆಯರು ಹೇಳಿದ್ದಾರೆ. ಅದರೂ ಪಬ್ ಸಿಬ್ಬಂದಿ ಇಲ್ಲ ಮೇಡಂ ಇದು ಮಜಾ ಸಿಗುತ್ತೇ ಎಂದು ಬಲವಂತವಾಗಿ ಕಾಕ್ ಟೇಲ್ಗೆ ಬೆಂಕಿ ಹಾಕಿದ್ದಾರೆ.

ಸೌಮ್ಯಾ ಅವರ ದೂರಿನ ಪ್ರಕಾರ, ಕಾಕ್ ಟೇಲ್ಗೆ ಬೆಂಕಿ ಹಾಕುವುದನ್ನು ಸರಿಯಾಗಿ ನಿರ್ವಹಿಸಿಲ್ಲ ಎಂದು ಹೇಳಿದ್ದಾರೆ. ಆಕಸ್ಮಿಕವಾಗಿ ಅದು ಮುಖ, ಕೂದಲಿಗೆ ಚೆಲ್ಲಿದೆ. ಕೂದಲಿಗೆ ಬೆಂಕಿ ಹೊತ್ತಿಕೊಂಡು, ಹಣೆ ಮತ್ತು ಕೆನ್ನೆಗೆ ಹರಡಿದೆ. ತಕ್ಷಣ ಸಿಬ್ಬಂದಿ ಬರ್ನ್ ಕ್ರೀಮ್ ಹಚ್ಚಿದ್ರು, ಆದರೆ ಆ ಬೆಂಕಿಯಿಂದ ಪೂರ್ತಿ ಹಣೆ ಮತ್ತು ಕೆನ್ನೆ ಸುಟ್ಟು ಹೋಗಿದೆ. ಮರುದಿನ ವೈದ್ಯಕೀಯ ಚಿಕಿತ್ಸೆ ನೀಡಲಾಗಿದೆ. ಆದರೆ ಗಾಯ ತುಂಬಾ ದೊಡ್ಡದಾಗಿತ್ತು, ಗಾಯ ಕಲೆ ಹೋಗಲು ಮೂರು ತಿಂಗಳು ಮನೆಯಲ್ಲಿ ವಿಶ್ರಾಂತಿ ಪಡೆಯುವಂತೆ ವೈದ್ಯರು ಸೂಚಿಸಿದರು. ಸುಟ್ಟಗಾಯಗಳು ತನ್ನ ಆತ್ಮವಿಶ್ವಾಸ, ಸಾಮಾಜಿಕ ಜೀವನ ಮತ್ತು ಕೆಲಸದ ಮೇಲೆ ತೀವ್ರ ಪರಿಣಾಮ ಬೀರಿವೆ, ಇದರಿಂದಾಗಿ ವೈದ್ಯಕೀಯ ಮತ್ತು ಸೌಂದರ್ಯವರ್ಧಕ ಆರೈಕೆಗಾಗಿ ₹ 5 ಲಕ್ಷಕ್ಕೂ ಹೆಚ್ಚು ಖರ್ಚು ಮಾಡಬೇಕಾಯಿತು ಎಂದು ಹೇಳಿದ್ದಾರೆ.2021ರಲ್ಲಿ ನಡೆದ ಅಹಿತಕರ ಘಟನೆಗೆ ಈಗ ಜಿಲ್ಲಾ ಗ್ರಾಹಕ ಆಯೋಗ ತೀರ್ಪು ನೀಡಿದೆ. ಬ್ರಿಗೇಡ್ ರಸ್ತೆಯಲ್ಲಿರುವ ಪಬ್ವೊಂದರಲ್ಲಿ ಕಾಕ್ ಟೇಲ್ಗೆ ಬೆಂಕಿ ಹಾಕುವಾಗ ಮಹಿಳೆಯೊಬ್ಬರ ಮುಖ ಸುಟ್ಟು ಹೋಗಿದೆ. ಸುಟ್ಟ ಗಾಯಗಳಿಂದ ಬಳಲುತ್ತಿದ್ದ 28 ವರ್ಷದ ಸೌಮ್ಯಾ ನಂದಲ್‌ಗೆ ಅದೊಂದು ಕರಾಳ ದಿನವಾಗಿತ್ತು. ರಾತ್ರಿಯೆಲ್ಲಾ, ಪಬ್‌ನಲ್ಲಿ ನೋವಿನಿಂದ ನರಳಾಡಿದ್ದಾರೆ. ನಾಲ್ಕು ವರ್ಷಗಳ ನಂತರ, ಬೆಂಗಳೂರು ನಗರ II ಜಿಲ್ಲಾ ಗ್ರಾಹಕ ಆಯೋಗ ಇದೀಗ ಆದೇಶವೊಂದನ್ನು ನೀಡಿದೆ. ಈ ನಿರ್ಲಕ್ಷ್ಯಕ್ಕಾಗಿ ಪಬ್ ಅನ್ನು ಹೊಣೆಗಾರರನ್ನಾಗಿ ಮಾಡಿದೆ ಮತ್ತು ವೈದ್ಯಕೀಯ ವೆಚ್ಚಗಳು, ಆಘಾತ ಮತ್ತು ಕಾನೂನು ವೆಚ್ಚಗಳಿಗಾಗಿ ₹ 1 ಲಕ್ಷ ಪರಿಹಾರ ನೀಡುವಂತೆ ಆದೇಶವನ್ನು ನೀಡಿದೆ.
ಸೌಮ್ಯಾ ಪೊಲೀಸ್ ದೂರು ಕೂಡ ದಾಖಲಿಸಿದ್ದಾರೆ. ಹಾಗೂ ಮಾರ್ಚ್ 2023 ರಲ್ಲಿ ಗ್ರಾಹಕ ವೇದಿಕೆಯಲ್ಲಿ ತಮ್ಮ ನೋವನ್ನು ಹೇಳಿಕೊಂಡಿದ್ದಾರೆ. ಪಬ್ ತಾನು ಮಾಡಿದ ತಪ್ಪನ್ನು ಒಪ್ಪಿಕೊಳ್ಳದೇ, ಅದನ್ನು ಸಮರ್ಥಿಸಿಕೊಂಡಿದೆ, ನಮ್ಮ ತಪ್ಪಿಲ್ಲ, ಶಾಟ್ ಅವರೇ ಕೇಳಿದ್ದು,ಕಾಕ್ ಟೇಲ್ ನೀಡುವಾಗ ಅದನ್ನು ಸರಿಯಾಗಿ ಅವರೇ ನಿರ್ವಹಿಸಿಲ್ಲ ಎಂದು ಹೇಳಿದ್ದಾರೆ. ಆದರೆ ಆಯೋಗ ಪಬ್ ವಿಡಿಯೋವನ್ನು ಚೆಕ್ ಮಾಡಿದಾಗ ಪಬ್ ಅವರ ತಪ್ಪಿನಿಂದ ಈ ದುರಂತ ನಡೆದಿದೆ ಎಂಬುದು ಸಾಬೀತಾಗಿದೆ. ಪಬ್ ಈ ಬಗ್ಗೆ ಸೌಮ್ಯ ಅವರಿಗೆ ಎಚ್ಚರಿಕೆ ನೀಡಬೇಕಿತ್ತು, ಸುರಕ್ಷತೆಯನ್ನು ನೀಡಬೇಕಿದ್ದ ಪಬ್ ಇದರಿಂದ ವಿಫಲಗೊಂಡಿದೆ. ಇದು “ಸೇವೆಯಲ್ಲಿನ ಕೊರತೆ” ಎಂದು ಹೇಳಲಾಗಿದೆ. ಸೌಮ್ಯ ಅವರು 10 ಲಕ್ಷ ರೂ. ಬೇಡಿಕೆಯನ್ನು ಇಟ್ಟಿದ್ದರು. ಈ ಬೇಡಿಕೆಯನ್ನು ತಳ್ಳಿ ಹಾಕಿ ₹ 1 ಲಕ್ಷ ಪರಿಹಾರ ನೀಡಿದೆ ಎಂದು ಹೇಳಿದೆ.