ರಾಮೇಶ್ವರಂ ಕೆಫೆ ತಿಂಡಿಯಲ್ಲಿ ಜಿರಳೆ ಪತ್ತೆ: ಗ್ರಾಹಕರಿಂದ ಆಕ್ರೋಶ!

ಬೆಂಗಳೂರು : ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ತಿಂಡಿಯಲ್ಲಿ ಜಿರಳೆ ಪತ್ತೆಯಾಗಿದ್ದು, ಗ್ರಾಹಕ ಬೆಚ್ಚಿ ಬಿದ್ದಿದ್ದಾನೆ. ಇತ್ತೀಚೆಗಷ್ಟೇ ಓಪನ್ ಆದ ರಾಮೇಶ್ವರಂ ಕೆಫೆಯಲ್ಲಿ ಈ ಘಟನೆ ನಡೆದಿದೆ.

ಹೌದು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವಹಳ್ಳಿ ಬಳಿ ಇರುವ ರಾಮೇಶ್ವರಂ ಕೆಫೆಯಲ್ಲಿ ನೀಡಿದ ಪೊಂಗಲ್ ನಲ್ಲಿ ಜಿರಳೆ ಪತ್ತೆಯಾಗಿದ್ದು, ಗ್ರಾಹಕ ಬೆಚ್ಚಿ ಬಿದ್ದಿದ್ದಾನೆ.
ಕೂಡಲೇ ಗ್ರಾಹಕ ಲೋಕನಾಥ್ ಕೆಫೆ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ನಂತರ ಸಿಬ್ಬಂದಿಗಳು ಗ್ರಾಹಕ ಲೋಕನಾಥ್ ಬಳಿ ಕೈ ಮುಗಿದು ತಪ್ಪಾಯಿತು ಎಂದು ಬೇಡಿಕೊಂಡಿದ್ದಾರೆ.
