Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಸಿಎಂ ಸಿದ್ದರಾಮಯ್ಯ ಅವರ ಬೃಹತ್ ಬಜೆಟ್ 4.5 ಲಕ್ಷ ಕೋಟಿ ರೂ. ಮೊತ್ತದ ಆಯವ್ಯಯ ಮಂಡನೆ!

Spread the love

ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಮಂಡಿಸಿದ 2026-27ನೇ ಸಾಲಿನ ಬಜೆಟ್‌ನಲ್ಲಿ ಜನಕಲ್ಯಾಣ ಮತ್ತು ಅಭಿವೃದ್ಧಿ ಎರಡಕ್ಕೂ ಸಮಾನ ಆದ್ಯತೆ ನೀಡಿದ್ದಾರೆ. ಸುಮಾರು 4.5 ಲಕ್ಷ ಕೋಟಿ ರೂಪಾಯಿಗಳಿಗೂ ಮೀರಿದ ಬೃಹತ್ ಗಾತ್ರದ ಈ ಆಯವ್ಯಯದಲ್ಲಿ ಪಂಚ ಗ್ಯಾರಂಟಿ ಯೋಜನೆಗಳ ಜೊತೆಗೇ ಶಿಕ್ಷಣ, ಮಹಿಳಾ ಕಲ್ಯಾಣ ಮತ್ತು ಮೂಲಸೌಕರ್ಯಕ್ಕೆ ಭರ್ಜರಿ ಕೊಡುಗೆ ನೀಡಲಾಗಿದೆ.

ಯಾವ ಇಲಾಖೆಗೆ ಸಿಂಹಪಾಲು
ನಿರೀಕ್ಷೆಯಂತೆಯೇ ಈ ಬಾರಿಯೂ ಶಿಕ್ಷಣ ಇಲಾಖೆಗೆ ಅತಿ ಹೆಚ್ಚು ಅಂದರೆ 47,224 ಕೋಟಿ ರೂ. ಅನುದಾನ ನೀಡುವ ಮೂಲಕ ಜ್ಞಾನದಾಸೋಹಕ್ಕೆ ಸರ್ಕಾರ ಒತ್ತು ನೀಡಿದೆ. ಇನ್ನು ಗೃಹಲಕ್ಷ್ಮಿಯಂತಹ ಯೋಜನೆಗಳನ್ನು ಒಳಗೊಂಡ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ 34,929 ಕೋಟಿ ರೂ. ಹಂಚಿಕೆ ಮಾಡಲಾಗಿದೆ.
ಇಲಾಖೆಯ ಹೆಸರುಮಂಜೂರಾದ ಅನುದಾನ (ಕೋಟಿ ರೂ.)ಶಿಕ್ಷಣ47,224ಮಹಿಳಾ ಮತ್ತು ಮಕ್ಕಳ ಕಲ್ಯಾಣ34,929ಇಂಧನ29,947ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ (RDPR),26,559ಒಳಾಡಳಿತ ಮತ್ತು ಸಾರಿಗೆ23,100ನೀರಾವರಿ22,436ನಗರಾಭಿವೃದ್ಧಿ ಮತ್ತು ವಸತಿ22,203ಕಂದಾಯ19,843ಸಮಾಜ ಕಲ್ಯಾಣ18,612ಆರೋಗ್ಯ17,817ಲೋಕೋಪಯೋಗಿ (PWD)11,424ಕೃಷಿ8,373ಆಹಾರ ಮತ್ತು ನಾಗರಿಕ ಸರಬರಾಜು7,942ಪಶುಸಂಗೋಪನೆ ಮತ್ತು ಮೀನುಗಾರಿಕೆ4,084ಇತರೆ (ಸಾಲ ಮರುಪಾವತಿ ಇತ್ಯಾದಿ)1,72,757
ಬಜೆಟ್ ಪ್ರಮುಖ ಅಂಶಗಳು
ಇಂಧನ ವಲಯ: ಗೃಹಜ್ಯೋತಿ ಯೋಜನೆಯ ಅಡಿ ಉಚಿತ ವಿದ್ಯುತ್ ನೀಡುವ ಹಿನ್ನೆಲೆಯಲ್ಲಿ ಇಂಧನ ಇಲಾಖೆಗೆ 29,947 ಕೋಟಿ ರೂ. ನೀಡಲಾಗಿದ್ದು, ಸೌರಶಕ್ತಿ ಯೋಜನೆಗಳಿಗೂ ಒತ್ತು ನೀಡಲಾಗಿದೆ.

ನೀರಾವರಿ ಮತ್ತು ಕೃಷಿ: ರೈತರ ಜೀವನಾಡಿಯಾದ ನೀರಾವರಿ ಯೋಜನೆಗಳಿಗೆ 22,436 ಕೋಟಿ ರೂ. ಮೀಸಲಿಟ್ಟಿದ್ದು, ಕೃಷಿ ವಲಯಕ್ಕೆ 8,373 ಕೋಟಿ ರೂ. ನೀಡಲಾಗಿದೆ.
ಆರೋಗ್ಯ ಕ್ಷೇತ್ರ: ರಾಜ್ಯದಾದ್ಯಂತ ನಮ್ಮ ಕ್ಲಿನಿಕ್ ಮತ್ತು ಆಸ್ಪತ್ರೆಗಳ ಮೇಲ್ದರ್ಜೆಗೆ ಏರಿಸಲು 17,817 ಕೋಟಿ ರೂ. ವ್ಯಯಿಸಲಾಗುತ್ತಿದೆ.
ಗ್ಯಾರಂಟಿ ಯೋಜನೆಗಳ ಭಾರದ ನಡುವೆಯೂ ಸಿದ್ದರಾಮಯ್ಯ ಅವರು ಅಭಿವೃದ್ಧಿ ಕಾಮಗಾರಿಗಳಿಗೆ ಹಣ ಮೀಸಲಿಡುವ ಮೂಲಕ ಆರ್ಥಿಕ ಸಮತೋಲನ ಕಾಯ್ದುಕೊಳ್ಳುವ ಪ್ರಯತ್ನ ಮಾಡಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *