Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಮಾವಿನ ಹಣ್ಣು ಹೇಳಿ ಶವ ಸಾಗಾಟದ ನಾಟಕ – ಲುಧಿಯಾನಾದಲ್ಲಿ ಬೈಕ್‌ ಮೇಲೆ ಶವ ಪತ್ತೆ

Spread the love

ಲುಧಿಯಾನಾ: ಮಾವಿನ ಹಣ್ಣೆಂದು ಬೈಕ್ ಮೇಲೆ ವ್ಯಕ್ತಿಯೊಬ್ಬ ಮಹಿಳೆಯ ಶವಸಾಗಿಸಿ ಸಿಕ್ಕಿ ಬಿದ್ದಿರುವ ಘಟನೆ ಲುಧಿಯಾನಾದಲ್ಲಿ ನಡೆದಿದೆ.

ಪಂಜಾಬ್​ನ ಲುಧಿಯಾನಾದಲ್ಲಿ ಇಬ್ಬರು ಬೈಕ್​​ನಲ್ಲಿ ತುಂಬಿದ ಪ್ಲಾಸ್ಟಿಕ್ ಚೀಲವನ್ನಿರಿಸಿಕೊಂಡು ಹೊರಟಿದ್ದರು. ಜನರಿಗೆ ಅನುಮಾನ ಬಂದು ಪ್ರಶ್ನಸಿದ್ದಕ್ಕೆ, ಏನಿಲ್ಲ ಮಾವಿನ ಹಣ್ಣುಗಳಿವೆ ಎಂದು ಹೇಳಿದ್ದಾರೆ. ಬಳಿಕ ಅನುಮಾನ ಬಂದು ತೆರೆದು ನೋಡಿದಾಗ ಮಹಿಳೆಯ ಶವ ಪತ್ತೆಯಾಗಿದೆ. ಆರೋಪಿಗಳು ಮೃತ ದೇಹವನ್ನು ಫ್ಲೈಓವರ್ ಕೆಳಗೆ ಎಸೆಯಲು ತಂದಿದ್ದರು.

ಮೋಟಾರ್​ ಸೈಕಲ್ ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳು ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಫಿರೋಜ್​ಪುರ ರೋಡ್ ಡಿವೈಡರ್​ ಬಳಿ ಪೊಲಸರು ಹಿಡಿದಿದ್ದರು.ಮೊದಲ ಕೊಳೆತ ಮಾವಿನ ಹಣ್ಣುಗಳಿವೆ ಎಂದು ಆರೋಪಿಗಳು ಹೇಳಿದ್ದರು. ಪ್ಲಾಸ್ಟಿಕ್ ಚೀಲದೊಳಗೆ ಎರಡು ಕವರ್​ಗಳನ್ನಿಟ್ಟುಶವವನ್ನು ತುಂಬಲಾಗಿತ್ತು

ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈಗ ಆರೋಪಿಗನ್ನು ಕಂಡು ಹಿಡಿಯುವ ಪ್ರಯತ್ನ ಮಾಡಲಾಗುತ್ತಿದೆ. ಫಾರೆನ್ಸಿಕ್ ತಂಡ ಸ್ಥಳಕ್ಕೆ ತಲುಪಿದ್ದು, ಮಹಿಳೆಯ ಸಾವಿಗೆ ನಿಖರ ಕಾರಣವೇನೆಂಬುದು ತಿಳಿದುಬರಲಿದೆ.


Spread the love
Share:

administrator

Leave a Reply

Your email address will not be published. Required fields are marked *