ನೇತಾಡುತ್ತಿರುವ ‘ಕೈ’ ದೃಶ್ಯದಿಂದ ನಗರ ಬೆಚ್ಚಿಬೀಳಿಕೆ: ಮೂವರಿಗೆ ಎಫ್‌ಐಆರ್

ಮುಂಬೈ: ಇತ್ತೀಚಿಗೆ ಹುಡುಗಾಟ ಅನ್ನೋದು ಅತಿರೇಕಕ್ಕೆ ಹೋಗಿ ಸಮಾಜದಲ್ಲಿ ದೊಡ್ಡ ಅವಾoತರಗಳನ್ನೇ ಸೃಷ್ಟಿಸುತ್ತಿದೆ. ಇದೀಗ ನವಿ ಮುಂಬೈ ನಲ್ಲಿ ನಡೆದಿರುವ ಘಟನೆ ಇಡೀ ನಗರವನ್ನೇ ಬೆಚ್ಚಿಬೀಳಿಸಿದೆ
ಕಾರಿನ ಡಿಕ್ಕಿಯಲ್ಲಿ ಯುವತಿಯ ಕೈ ನೇತಾಡುತ್ತಿದ್ದ ದೃಶ್ಯಗಳು ನವಿ ಮುಂಬೈನಲ್ಲಿ ಕಾಣಿಸಿದ್ದು, ಇದನ್ನು ನೋಡಿದ ಜನರು ಬೆಚ್ಚಿಬಿದ್ದಿದ್ದಾರೆ.

ಕ್ಯಾಬ್ ಚಾಲಕ ವಿಡಿಯೋ ಮಾಡಿದ್ದು, ಯುವತಿಯ ಕೈ ನೇತಾಡುತ್ತಿರೋದು ಕಾಣಿಸಿದೆ.
ಅದಾಗಿಯೂ ಪೊಲೀಸರು ವಿಡಿಯೋ ಆಧರಿಸಿ, ಕಾರಿನ ನಂಬರ್ ಸಹಾಯದಿಂದ ವ್ಯಕ್ತಿಯನ್ನು ಪಟ್ಟಹಚ್ಚಿದ್ದು, ಇದೊಂದು ಲ್ಯಾಪ್ ಟಾಪ್ ಅಂಗಡಿ ಪ್ರಮೋಷನ್ ಗೆ ಮಾಡಿದ ಗಿಮಿಕ್ ಎಂದು ಗೊತ್ತಾಗಿದೆ. ಅಲ್ಲದೆ ಕಾರಿನಲ್ಲಿ ಕಾಣಿಸಿದ್ದು ಬೊಂಬೆಯ ಕೈ ಎಂದು ಸ್ಪಷ್ಟವಾಗಿದೆ.
ಪೊಲೀಸರು ಹೆಚ್ಚಿನ ವಿಚಾರಣೆ ನಡೆಸಿ ಮೂವರ ವಿರುದ್ಧ ಕೇಸ್ ದಾಖಲಿಸಿದ್ದು, ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿದ್ದಾರೆ.
