Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಚಿನ್ನಸ್ವಾಮಿ ಕಾಲ್ತುಳಿತ ಪ್ರಕರಣ: 11 ಜನರ ಸಾವಿಗೆ RCB, KSCA ನೇರ ಹೊಣೆ; 2,200ಕ್ಕೂ ಹೆಚ್ಚು ಪುಟಗಳ ಚಾರ್ಜ್‌ಶೀಟ್‌ ಸಲ್ಲಿಕೆಗೆ ಸಿಐಡಿ ಸಿದ್ಧತೆ!

Spread the love

ಬೆಂಗಳೂರು: ಚಿನ್ನಸ್ವಾಮಿ ಸ್ಟೇಡಿಯಂ ಕಾಲ್ತುಳಿತ (Chinnaswamy Stadium Stampede) ಪ್ರಕರಣಕ್ಕೆ ಸಂಬಂಧಿಸಿದಂತೆ ಚಾರ್ಜ್ಶೀಟ್ ಸಲ್ಲಿಕೆಗೆ ಸಿಐಡಿ ತಯಾರಿ ಮಾಡಿಕೊಂಡಿದೆ. 11 ಮಂದಿ ಸಾವಿಗೆ ಆರ್‌ಸಿಬಿಯೇ (RCB) ನೇರ ಹೊಣೆ ಎಂದು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಿದೆ.

ತನಿಖೆ ಮುಗಿಸಿ ಚಾರ್ಜ್‌ಶೀಟ್‌ ಸಲ್ಲಿಕೆಗೆ ಸಿಐಡಿ ತಯಾರಿಯಲ್ಲಿದೆ. ತನಿಖೆ ವೇಳೆ ಆರ್‌ಸಿಬಿ, ಡಿಎನ್‌ಎ, ಕೆಎಸ್‌ಸಿಎ ವಿರುದ್ಧ ಹಲವು ಸಾಕ್ಷ್ಯಗಳು ಸಿಕ್ಕಿವೆ. ನ್ಯಾಯಾಲಯಕ್ಕೆ 2,200 ಕ್ಕೂ ಪುಟಗಳ ಚಾರ್ಜ್‌ಶೀಟ್‌ ರೆಡಿಯಿದೆ

ಆರ್‌ಸಿಬಿ ಜೊತೆ ಕೆಎಸ್‌ಸಿಎ, ಡಿಎನ್‌ಎ ನೇರ ಹೊಣೆ ಅನ್ನೋದು ತನಿಖೆ ವೇಳೆ ಬಯಲಾಗಿದೆ. ಚಾರ್ಜ್‌ಶೀಟ್‌ನಲ್ಲಿ ಮೂರು ಸಂಸ್ಥೆಗಳನ್ನ ಸಿಐಡಿ ನೇರ ಹೊಣೆ ಮಾಡಿದೆ. ಸರಿಯಾದ ಪ್ಲಾನ್ ಇಲ್ಲದೆಯೇ ಕಾರ್ಯಕ್ರಮ ಆಯೋಜಿಸಲಾಗಿತ್ತು. ಠರಾವೋ ಸರಿಯಾಗಿ ಮಾಡಿಲ್ಲ ಅನ್ನೋದು ತನಿಖೆ ವೇಳೆ ಪತ್ತೆಯಾಗಿದೆ.

ಠರಾವೋ ಅಂದ್ರೆ ಕಾರ್ಯಕ್ರಮ ಆಯೋಜನೆಗೂ ಮುನ್ನ ಸಭೆ. ಸಭೆಯಲ್ಲಿ ತೆಗೆದುಕೊಂಡ ತೀರ್ಮಾನದ ಬಗ್ಗೆ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು. ಆದರೆ, ಸಭೆ ನಡೆಸಿ ಸರಿಯಾದ ಪ್ಲಾನಿಂಗ್ ಇಲ್ಲದೆ ನಿರ್ಧಾರ ತೆಗೆದುಕೊಂಡಿರೋದು ಮತ್ತು ಟಿಕೆಟ್ ಬಗ್ಗೆ ಗೊಂದಲ, ಟ್ವೀಟ್, ಸುಳ್ಳು ವದಂತಿಯಿಂದ ಜನ ಸೇರಿ ಘಟನೆ ಸಂಭವಿಸಿದೆ ಎನ್ನಲಾಗಿದೆ.

ಆರ್‌ಸಿಬಿ ಟಿಕೆಟ್ ಬಗ್ಗೆ ಗೊಂದಲ ಹುಟ್ಟಿಸಿತ್ತು. ಇದು ಘಟನೆಗೆ ಮೊದಲ ಕಾರಣ ಅನ್ನೋದು ಬಯಲಾಗಿದೆ. ಅಲ್ಲದೇ ಡಿಎನ್‌ಎ ಕಡೆಯಿಂದ ಯಾವುದೇ ಸೆಕ್ಯುರಿಟಿ ಪ್ಲಾನ್ ಇರಲಿಲ್ಲ. ಖಾಸಗಿ ಸೆಕ್ಯುರಿಟಿ ಏಜೆನ್ಸಿ ಬಳಕೆಯಲ್ಲಿ ವಿಫಲವಾಗಿದೆ. ಪೊಲೀಸರ ಜೊತೆ ಕೂಡ ಸರಿಯಾದ ಮಾತುಕತೆ ನಡೆಸದೆ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ ಸಿಐಡಿ ಉಲ್ಲೇಖಿಸಿದೆ

ಎಲ್ಲಾ ಗೇಟ್ ಬಳಿಯ ಸಿಸಿಟಿವಿ ಪರಿಶೀಲನೆ, ವಿಡಿಯೋದಲ್ಲಿದ್ದವರ ಹೇಳಿಕೆ ದಾಖಲಿಸಲಾಗಿದೆ. ಪ್ರತಿ ಗೇಟ್‌ನ ಸೆಕ್ಯುರಿಟಿ, ಡ್ಯೂಟಿಗೆ ಹಾಜರಾಗಿದ್ದ ಪೊಲೀಸರ ಹೇಳಿಕೆಯನ್ನು ಸಹ ತನಿಖಾ ತಂಡ ದಾಖಲಿಸಿದೆ.

ಗಾಯಾಳು ಹೇಳಿಕೆ, ಗಾಯಾಳುಗಳನ್ನ ಸಾಗಿಸಿದವರ ಹೇಳಿಕೆ ಸೇರಿ ನೂರಾರು ಪ್ರತ್ಯಕ್ಷ ಸಾಕ್ಷಿಗಳ ಹೇಳಿಕೆ ದಾಖಲಿಸಲಾಗಿದೆ. ತನಿಖೆ ವೇಳೆ ಪತ್ತೆಯಾಗಿರುವ ಅಂಶಗಳನ್ನ ಪರಿಗಣಿಸಿ ಮೂರು ಸಂಸ್ಥೆಗಳನ್ನ ಸಿಐಡಿ ನೇರ ಹೊಣೆ ಮಾಡಿದೆ.


Spread the love
Share:

administrator

Leave a Reply

Your email address will not be published. Required fields are marked *