Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಮಕ್ಕಳ ಇಷ್ಟದ ಚಾಕೊಲೇಟ್, ಪೆಪ್ಪರಮೆಂಟ್, ಜೇಮ್ಸ್ ಮತ್ತು ಜೆಲ್ಲಿಸ್ : ಆಹಾರ ಇಲಾಖೆ ಎಚ್ಚರಿಕೆ

Spread the love

ಬೆಂಗಳೂರು: ಚಾಕೊಲೇಟ್ ಪೆಪ್ಪರಮೆಂಟ್​​, ಜೇಮ್ಸ್ ಮತ್ತು ಜೆಲ್ಲಿಸ್​​ ಮಕ್ಕಳಿಗೆ ಬಲು ಇಷ್ಟ. ಒಂದು ಪಕ್ಷ ಮಕ್ಕಳು ಊಟ ಬೇಕಾದರೂ ಬಿಡುತ್ತಾರೆ, ಇವುಗಳನ್ನು ತಿನ್ನುವುದು ಮಾತ್ರ ಬಿಡುವುದಿಲ್ಲ. ಆದರೆ ಇವುಗಳನ್ನು ಮಕ್ಕಳಿಗೆ ನೀಡುವುದಕ್ಕೂ ಮುಂಚೆ ಆಹಾರ ಇಲಾಖೆ ಪೋಷಕರಿಗೆ ಎಚ್ಚರಿಕೆ ನೀಡಿದೆ. ಚಾಕೊಲೇಟ್, ಪೆಪ್ಪರಮೆಂಟ್​​, ಜೇಮ್ಸ್ ಮತ್ತು ಜೆಲ್ಲಿಸ್​​ಗಳಲ್ಲಿ ಕೃತಕ ಕಲರ್ ಹಾಗೂ ಹಾನಿಕಾರಕ ರಾಸಾಯನಿಕ ಬಳಕೆ ಆರೋಪ ಕೇಳಿಬಂದಿದ್ದು, ಟೆಸ್ಟ್ ಮಾಡಲು ಮುಂದಾಗಿದೆ.

ಮಕ್ಕಳ ಅಚ್ಚುಮೆಚ್ಚಿನ ಚಾಕೊಲೇಟ್, ಪೆಪ್ಪರಮೆಂಟ್​​, ಜೇಮ್ಸ್ ಮತ್ತು ಜೆಲ್ಲಿಸ್​ಗಳಲ್ಲಿ ಹಾನಿಕಾರಕ ರಾಸಾಯನಿಕ ಬಳಕೆ ಆರೋಪ ಕೇಳಿಬಂದಿದೆ. ಇವುಗಳ ಸೇವನೆಯಿಂದ ಕ್ಯಾನ್ಸರ್ ಸಹಿತ ಅಪಾಯಕಾರಿ ಕಾಯಿಲೆಗಳಿಗೆ ದಾರಿ ಮಾಡಿಕೊಡುವುದಲ್ಲದೇ, ಮಕ್ಕಳ ಆರೋಗ್ಯಕ್ಕೆ ಕುತ್ತು ಬರುವ ಸಾಧ್ಯತೆ ಇದೆ. ಈ ಬಗ್ಗೆ ಕೇಂದ್ರ ಎಫ್​​ಎಸ್​ಎಸ್​​ಎಐ ಸೂಚನೆ ಬೆನ್ನಲೆ ರಾಜ್ಯದಲ್ಲಿ ಆಹಾರ ಇಲಾಖೆ ಅಲರ್ಟ್ ಆಗಿದ್ದು, ಸ್ಯಾಂಪಲ್ಸ್ ಪಡೆದು ಆಹಾರ ಇಲಾಖೆಯ ಲ್ಯಾಬ್​ಗಳಲ್ಲಿ ಟೆಸ್ಟ್​​ಗೆ ಒಳಪಡಿಸಲು ಮುಂದಾಗಿದೆ

ಪೆಪ್ಪರಮೆಂಟ್​​, ಜೇಮ್ಸ್ ಮತ್ತು ಜೆಲ್ಲಿಸ್​​ಗಳಲ್ಲಿ ಕೃತಕ ಕಲರ್ ಬಳಕೆ ಮಾಡುತ್ತಿದ್ದು, ತಯಾರಿಕಾ ಘಟಕಗಳಲ್ಲಿ ಸ್ವಚ್ಛತೆ ಇರಲ್ಲ ಎನ್ನಲಾಗುತ್ತಿದೆ. ಚಾಕೊಲೇಟ್​ಗಳ ತಯಾರಿಕೆಯಲ್ಲಿ ಕೆಲವು ರಾಸಾಯನಿಕಗಳ ಬಳಕೆ ಬಗ್ಗೆ ಕೂಡ ದೂರುಗಳು ಬಂದಿವೆ. ಹೀಗಾಗಿ ಆಹಾರ ಇಲಾಖೆ ರಾಜ್ಯದಲ್ಲಿ ಸ್ಯಾಂಪಲ್ಸ್​ ಪಡೆಯಲು ಮುಂದಾಗಿದೆ.​ ಅಷ್ಟೇ ಅಲ್ಲದೆ ವಿದೇಶದಿಂದ ಆಮದು ಆಗುವ ಪದಾರ್ಥಗಳನ್ನು ಟೆಸ್ಟ್ ಮಾಡಲು ಮುಂದಾಗಿದ್ದು, ಅಸುರಕ್ಷಿತ ಪದಾರ್ಥಗಳ ಮೇಲೂ ಕ್ರಮಕ್ಕೆ ಆಹಾರ ಇಲಾಖೆ ಪ್ಲಾನ್ ಮಾಡಿದೆ.

ಕಿಡ್ನಿ, ಹೃದಯ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ: ಆಹಾರ ತಜ್ಞೆ ಕೀರ್ತಿ ಹಿರಿಸಾವೆ

ಇನ್ನು ಈ ಬಗ್ಗೆ ಆಹಾರ ತಜ್ಞೆ ಕೀರ್ತಿ ಹಿರಿಸಾವೆ ಪ್ರತಿಕ್ರಿಯಿಸಿದ್ದು, ಇವುಗಳ ಸೇವನೆಯಿಂದ ಮಕ್ಕಳ ದೇಹದ ತೂಕ ಏರಿಕೆಯಾಗುತ್ತದೆ. ತೂಕ ಏರಿಕೆಯಿಂದ ಟಾಕ್ಸಿನ್ ಪ್ರಮಾಣ ಹೆಚ್ಚಾಗುವುದರಿಂದ ಕ್ಯಾನ್ಸರ್ ಬರುವ ಸಾಧ್ಯತೆ ಇದೆ. ಕಲರ್​ಗಳಿಂದಲೂ ಅಪಾಯ ಇದೆ. ಕಿಡ್ನಿ, ಹೃದಯ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.

ಚಾಕೊಲೇಟ್, ಪೆಪ್ಪರಮೆಂಟ್​​, ಜೇಮ್ಸ್ ಮತ್ತು ಜೆಲ್ಲಿಸ್​ಗಳಲ್ಲಿ ಫುಡ್​ ಪ್ಲೇವರ್​ಗಳನ್ನ ಬಳಕೆ ಮಾಡಿರುತ್ತಾರೆ. ಇದರಿಂದ ಮತ್ತೆ ಮತ್ತೆ ತಿನ್ನಬೇಕು ಎನ್ನುವ ಆಸೆಯಾಗುತ್ತದೆ. ಇನ್ನು ಇವುಗಳ ತಯಾರಿಕೆಯಲ್ಲಿಯೂ ಸ್ವಚ್ಛತೆ ಇರುವುದಿಲ್ಲ. ಹೀಗಾಗಿ ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ವಿದೇಶದಿಂದ ಬರುವ ಚಾಕೋಲೆಟ್, ಜೆಲ್ಲಿಸ್​ಗಳ ಬಗ್ಗೆ ಎಚ್ಚರ ವಹಿಸಬೇಕು. ಏಕೆಂದರೆ ಅಲ್ಲಿ ತಯಾರಿಕಾ ಘಟಕಗಳ ಬಗ್ಗೆ ಯಾವುದೇ ಮಾಹಿತಿ ಇರುವುದಿಲ್ಲ ಎಂದಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *