‘ರಾಹುಲ್ ಗಾಂಧಿಯದ್ದು ಚೈಲ್ಡಿಶ್ ಹೇಳಿಕೆ’: ವೋಟ್‌ಚೋರಿ ಆರೋಪಕ್ಕೆ ಜೆಡಿಎಸ್ ನಿಖಿಲ್ ಕುಮಾರಸ್ವಾಮಿ ತಿರುಗೇಟು

ಬೆಂಗಳೂರು: ವೋಟ್‌ಚೋರಿ ಬಗ್ಗೆ ಮಾತಾಡೋ ರಾಹುಲ್ ಗಾಂಧಿಯದ್ದು (Rahul Gandhi) ಚೈಲ್ಡಿಶ್ ಹೇಳಿಕೆ ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ರಾಹುಲ್ ಗಾಂಧಿ ವಿರುದ್ಧ ಕಿಡಿಕಾರಿದರು.

ರಾಹುಲ್ ಗಾಂಧಿಯಿಂದ ಮತ್ತೆ ವೋಟ್‌ಚೋರಿ ಬಗ್ಗೆ ಸುದ್ದಿಗೋಷ್ಠಿ ನಡೆಸಿದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ರಾಹುಲ್ ಗಾಂಧಿಯದ್ದು ಚೈಲ್ಡಿಶ್ ಹೇಳಿಕೆ. ರಾಹುಲ್ ಗಾಂಧಿ ಕರ್ನಾಟಕದಲ್ಲಿ ಒಂದು ಕ್ಷೇತ್ರ ಆಯ್ಕೆ ಮಾಡಿಕೊಂಡು ವೋಟ್‌ಚೋರಿ ಆಗಿದೆ ಅಂತ ಆರೋಪ ಮಾಡಿದ್ದರು. ಬಿ.ಆರ್ ಪಾಟೀಲ್ ಆಯ್ಕೆ ಮಾಡಿರುವ ಆಳಂದ ಕ್ಷೇತ್ರದ ಬಗ್ಗೆ ಮಾತಾಡಿದ್ದರು. ರಾಹುಲ್ ಗಾಂಧಿ ವೋಟ್‌ಚೋರಿ ಆಗಿ ನಮ್ಮವರು ಸೋತಿದ್ದಾರೆ. ಬೇರೆ ಯಾರೋ ಗೆದ್ದಿದ್ದಾರೆ ಅಂತ ಕ್ಷೇತ್ರ ಪಾಯಿಂಟ್ ಮಾಡಿ ಹೇಳ್ತಿಲ್ಲ. ರಾಹುಲ್ ಗಾಂಧಿ ಏನ್ ಮಾಡ್ತಾ ಇದ್ದಾರೆ ಎಂದು ಪ್ರಶ್ನೆ ಮಾಡಿದರು
ಬಿಹಾರ ಚುನಾವಣೆಯಲ್ಲಿ ರಾಹುಲ್ ಗಾಂಧಿ ಆರ್‌ಜೆಡಿ ಜೊತೆ ಕೈ ಜೋಡಿಸಿದ್ದಾರೆ. ಬಿಹಾರದಲ್ಲಿ ಆರ್‌ಜೆಡಿ ತೀರಿಸೋಕೆ ರಾಹುಲ್ ಗಾಂಧಿ ಒಬ್ಬರೇ ಸಾಕು. ಅವರ ಮಾತುಗಳು, ಅವರ ಚೈಲ್ಡಿಶ್, ಬಾಲಿಶವಾದ ಹೇಳಿಕೆಗಳು ಅವರಿಬ್ಬರೇ ಬಿಹಾರ ಚುನಾವಣೆಯಲ್ಲಿ ಆರ್‌ಜೆಡಿಯನ್ನು ತೀರಿಸುತ್ತಾರೆ ಎಂದರು.