ವಿಜಯಪುರದಲ್ಲಿ ಬಾಲ್ಯ ವಿವಾಹ ಯತ್ನ ವಿಫಲ: 1098 ಕರೆ ಬಳಿಕ ಮಕ್ಕಳ ರಕ್ಷಣಾ ಘಟಕದಿಂದ ದಾಳಿ – FIR ದಾಖಲು

ಬೆಂಗಳೂರು ಗ್ರಾಮಾಂತರ:- ಬಾಲ್ಯ ವಿವಾಹ ನಿಷೇದದ ನಡುವೆಯೂ ಬಾಲ್ಯ ವಿವಾಹಕ್ಕೆ ಯತ್ನಿಸಿದ ಮದುವೆಯನ್ನು ಅಧಿಕಾರಿಗಳು ದಾಳಿ ನಡೆಸಿ ಮುರಿದಿದ್ದಾರೆ.

ವಿಜಯಪುರ ಪಟ್ಟಣದ ಬಸಮ್ಮ ಯಜಮಾನ್ ಮರಿಚನ್ನಪ್ಪ ಸಮುದಾಯ ಭವನ ಕಲ್ಯಾಣ ಮಂಟಪದಲ್ಲಿ ಈ ಘಟನೆ ಜರುಗಿದೆ. 17 ವರ್ಷದ ಯುವತಿಗೆ ಪೋಷಕರು ಬಾಲ್ಯ ವಿವಾಹ ಮಾಡುತ್ತಿದ್ದರು.

ಮಕ್ಕಳ ಸಹಾಯವಾಣಿ 1098 ಗೆ ಖಚಿತ ಮಾಹಿತಿ ಮೆರೆಗೆ ದೂರು ಹಿನ್ನೆಲೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಅಧಿಕಾರಿಗಳು ದಾಳಿ ನಡೆಸಿ ಆರತಕ್ಷತೆಗೆ ತಡೆ ನೀಡಿದ್ದಾರೆ. ಬಳಿಕ ಅಪ್ರಾಪ್ತ ಯುವತಿಯನ್ನ ಮಹಿಳಾ ಸಾಂತ್ವಾನ ಕೇಂದ್ರಕ್ಕೆ ಅಧಿಕಾರಿಗಳು ಕರೆದೋಯ್ದಿದ್ದಾರೆ.. ಕಲ್ಯಾಣ ಮಂಟಪ ಮಾಲೀಕರಿಂದಲು ನಿಯಮ ಉಲ್ಲಂಘಿಸಿ ಬಾಲ್ಯ ವಿವಾಹಕ್ಕೆ ಕಲ್ಯಾಣ ಮಂಟಪ ನೀಡಿದ ಆರೋಪದ ಹಿನ್ನೆಲೆ ಮಾಲೀಕರ ವಿರುದ್ಧವೂ ಪ್ರಕರಣ ದಾಖಲಾಗಿದೆ. ಪೋಷಕರು, ವರ ಮತ್ತು ಕಲ್ಯಾಣ ಮಂಟಪ ಮಾಲೀಕರ ವಿರುದ್ದ ದೂರು ದಾಖಲಾಗಿದೆ.
ವಿಜಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.
