Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಬಾಲ ನಿರ್ದೇಶಕ ಮಾಸ್ಟರ್ ಕಿಶನ್ ನಿಂದ ವೈದ್ಯಕೀಯ ತಂತ್ರಜ್ಞಾನ ನವೋದ್ಯಮ

Spread the love

ಮಾಸ್ಟರ್​ ಕಿಶನ್​ ಕನ್ನಡನಾಡಿನ ಅಪರೂಪದ ಪ್ರತಿಭೆ. ಅದ್ಭುತ ನಟನೆ, ಸಂಕಲನ ,ನಿರ್ದೇಶನದಲ್ಲಿ ತುಂಬಾ ಚಿಕ್ಕ ವಯಸ್ಸಿನಂದಲೇ ತೊಡಗಿಕೊಂಡಿರುವ ಕಿಶನ್ ಜಗತ್ತಿನ ಅತಿ ಚಿಕ್ಕ ವಯಸ್ಸಿನ ನಿರ್ದೇಶಕ ರಂದು ಗಿನ್ನಿಸ್ ದಾಖಲೆ ಸೇರಿದ್ದಾರೆ. ಕೇರಾಫ್ ಫುಟ್‍ಪಾತ್ ಚಿತ್ರವನ್ನು ನಿರ್ದೇಶಿಸಿ ಇಡೀ ವಿಶ್ವದ ಗಮನ ಸೆಳೆದವರು ಈ ಬಾಲಕ.

ಅದೇ ಕಿಶನ್​ ಈಗ ಚಿತ್ರರಂಗದಿಂದ ದೂರವಾಗಿ ವೈದ್ಯಕೀಯ ರಂಗ ಸೇರಿದ್ದಾರೆ. ಅವರಿಗೆ ಈಗ 29 ವರ್ಷ ವಯಸ್ಸು ಎಂದರೆ ಅದೇ ಪುಟಾಣಿ ಮುಖ ನೋಡಿದವರಿಗೆ ನಂಬುವುದೇ ಕಷ್ಟ. ಇದೀಗ ವೈದ್ಯಕೀಯ ಲೋಕದಲ್ಲಿಯೂ ದಾಖಲೆ ಬರೆಯುತ್ತಿದ್ದಾರೆ ಕಿಶನ್​.

ವೈದ್ಯಕೀಯ ಕೋರ್ಸ್​ ಅನ್ನು ಇನ್ನಷ್ಟು ಸುಲಭಗೊಳಿಸುವ ನಿಟ್ಟಿನಲ್ಲಿ ವಿಶ್ವದ ಮೊದಲ ಇಮ್ಮರ್ಸಿವ್ 3D ಕೋರ್ಸ್ (World’s first immersive 3d course) ಆರಂಭಿಸಿದ್ದಾರೆ ಇವರು. ತಮ್ಮ ಮೆಡಿ ಮ್ಯಾಜಿಕ್​ ಸಂಸ್ಥೆಯಿಂದ ಇದನ್ನು ಆರಂಭಿಸಿದ್ದು ಈ ಬಗ್ಗೆ ರ್ಯಾಪಿಡ್​ ರಶ್ಮಿ ಯುಟ್ಯೂಬ್​ ಚಾನೆಲ್​ಗೆ ನೀಡಿರುವ ಸಂದರ್ಶನದಲ್ಲಿ ಅವರು ಇದನ್ನು ಬಹಿರಂಗಪಡಿಸಿದ್ದಾರೆ. ಯಾವುದೇ ಮೆಡಿಕಲ್​ ಸ್ಟುಡೆಂಟ್​ ಅರ್ಥಾತ್​ ಅಲೋಪಥಿ, ಹೋಮಿಯೋಪಥಿ, ಆಯುರ್ವೇದ ಸೇರಿದಂತೆ ಯಾವುದೇ ವೈದ್ಯಕೀಯ ಕೋರ್ಸ್​ ಪಡೆದಿರುವ ವಿದ್ಯಾರ್ಥಿಗಳು ತ್ರಿಡಿ ಗ್ಲಾಸ್​ ಹಾಕಿಕೊಂಡು ಅವರ ಸಬ್​ಜೆಕ್ಟ್​ ಅನ್ನು ಎಕ್ಸ್​ಪೀರಿಯನ್ಸ್​ ಮಾಡಬಹುದಾದ ತಂತ್ರಜ್ಞಾನವನ್ನು ಅವರು ರೂಪಿಸಿದ್ದಾರೆ. ಇದು ತಮ್ಮ ವಿಷಯವನ್ನು ವಿದ್ಯಾರ್ಥಿಗಳು ಸುಲಭದಲ್ಲಿ ಅರ್ಥೈಸಿಕೊಳ್ಳಬಹುದಾಗಿದೆ ಜೊತೆಗೆ ನೆನಪಿನ ಶಕ್ತಿಯೂ ಹೆಚ್ಚಾಗಿ ಉಳಿಯಲಿದೆ.

ಕಿಶನ್​ ಹೇಳುವಂತೆ, ‘ಇದು ಮೆಡಿಕಲ್ ಕಾಲೇಜುಗಳಲ್ಲಿ ಬಳಸಿ ವಿದ್ಯಾರ್ಥಿಗಳಿಗೆ ಅತ್ಯಂತ ಸೂಕ್ಷ್ಮ ವಿಷಯಗಳನ್ನು ಸಶಕ್ತವಾಗಿ ಅರ್ಥ ಮಾಡಿಕೊಳ್ಳಲು ಸಾಧ್ಯವಾಗುವ ಹೊಸ ತಂತ್ರಜ್ಞಾನವಾಗಿದೆ. ವಿಶ್ವದಲ್ಲಿ ಇದೇ ಮೊದಲ ಬಾರಿಗೆ ಆವಿಷ್ಕರಿಸಲಾಗಿದೆ. ವಿದ್ಯಾರ್ಥಿಗಳು ಮಾತ್ರವಲ್ಲದೇ ಶಿಕ್ಷಕರಿಗೂ ಇದು ಉಪಕಾರಿ. ಮಾತ್ರವಲ್ಲದೇ 3ಡಿ ತಂತ್ರಜ್ಞಾನವನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೂ ತಮ್ಮ ಸೇವೆಗಳಲ್ಲಿ ಬಳಸಿಕೊಳ್ಳಬಹುದು. ವಿವಿಧ ಕ್ಷೇತ್ರಗಳಲ್ಲಿ ಉತ್ತಮ ಶಿಕ್ಷಣ ಒದಗಿಸಲು ಇದು ಸಹಕಾರಿಯಾಗಲಿದೆ.

ಇದರ ಜೊತೆಗೆ, ಮಾನವ ದೇಹದ ಅವಯವಗಳನ್ನು ಮುಟ್ಟಿ ನೋಡಿದ ಕಲ್ಪನೆ ಮೂಡಿಸುವ ಚಿತ್ರಗಳನ್ನು ಮಾಸ್ಟರ್ ಕಿಶನ್ ಅಭಿವೃದ್ಧಿ ಪಡಿಸಿದ್ದಾರೆ. ತ್ರಿಡಿ ತಂತ್ರಜ್ಞಾನದ ಈ ಚಿತ್ರವನ್ನು ವಿನ್ ಫೋರಮೆಕ್ಸ್ ಸಂಸ್ಥೆಯ ಸಹಯೋಗದಲ್ಲಿ ಸಿದ್ಧಪಡಿಸಲಾಗಿದೆ. ಇನ್ನು ಇವರ ಕುರಿತು ಹೇಳುವುದಾದರೆ, ಕಿಶನ್​ ಕನ್ನಡ ಮಾತ್ರವಲ್ಲದೇ ಕೆಲವು ತಮಿಳು ಮತ್ತು ತೆಲುಗು ಚಿತ್ರಗಳಲ್ಲಿಯೂ ನಟಿಸಿದ್ದಾರೆ. 2006 ರಲ್ಲಿ ಶಾಲೆಗೆ ಹೋಗಬಯಸುವ ಒಬ್ಬ ಸ್ಲಮ್ ಹುಡುಗನ ಕನಸನ್ನು `ಕೇರ್ ಆಫ್ ಪುಟಪಾತ್’ ಚಿತ್ರದಲ್ಲಿ ತೋರಿಸದ ಕಿಶನ್ ಈ ಚಿತ್ರದಲ್ಲಿ ಜಾಕಿ ಶ್ರಾಫ್, ಕಿಚ್ಚ ಸುದೀಪ್ ಮುಂತಾದ ಘಟಾನುಘಟಿ ತಾರೆಯರಿಗೆ ಆಕ್ಷ್ಯನ್ ಕಟ್ ಹೇಳಿದ್ದು ವಿಶೇಷ. ಈ ಚಿತ್ರ 11ಕ್ಕಿಂತ ಹೆಚ್ಚು ಅಂತರಾಷ್ಟ್ರೀಯ ಮತ್ತು ಸ್ವರ್ಣಕಮಲ ಪ್ರಶಸ್ತಿ ಪಡೆಯಿತು. ಇವರು 2014 ರಲ್ಲಿ ಫೋರ್ಬ್ಸ್ ಸಾಧಕರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *