ಪತ್ನಿ ಎದುರಲ್ಲೇ ಮಗಳಿಗೆ ಹಲ್ಲೆ: ನರಕ ಅನುಭವಿಸಿದ ಮಗು

ಬೆಂಗಳೂರು:ತಂದೆ ಮಗಳ ಸಂಬಂಧ, ಬಾಂಧವ್ಯ.. ನಿಷ್ಕಲ್ಮಶ ಪ್ರೀತಿಗೆ ಸಾಟಿಯೇ ಇಲ್ಲ.ಹೆಣ್ಣು ಮಕ್ಕಳು ತಂದೆಯನ್ನೇ ಹೆಚ್ಚಾಗಿ ಮನಸ್ಸಿಗೆ ಹಚ್ಚಿಕೊಂಡಿರ್ತಾರೆ. ತಂದೆಯೂ ಕೂಡ ಮಗಳು ಅಂದ್ರೆ ಪ್ರಾಣಕ್ಕಿಂತ ಹೆಚ್ಚು ಪ್ರೀತಿ ಕೊಡ್ತಾನೆ.ಆದ್ರೆ ಬೆಂಗಳೂರಲ್ಲಿ ನಡೆದಿರುವ ಘಟನೆ ಬೆಚ್ಚಿ ಬೀಳಿಸುವಂತಿದೆ.
ಸ್ವತಃ ತಂದೆಯೇ ತನ್ನ ಪುಟ್ಟ ಮಗಳ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ.
ಹೌದು, ಪುಟ್ಟ ಮಗಳು ತನ್ನ ಮಾತು ಕೇಳುವುದಿಲ್ಲ ಎಂಬ ಕಾರಣಕ್ಕೆ ತಂದೆ ಲೋಕೇಶ್ ಎಂಬಾತ ಮಗುವಿಗೆ ಮೈ ಕೈ ಎಲ್ಲಾ ಬಾಸುಂಡೆ ಬರುವಂತೆ ಅಮಾನವೀಯವಾಗಿ ಹಲ್ಲೆ ನಡೆಸಿದ್ದಾನೆ.ಈ ವೇಳೆ ಮಗುವಿನ ಚೀರಾಟ ಕೇಳಿ ಸ್ಥಳಕ್ಕೆ ಬಂದ ನೆರೆಹೊರೆಯವರು, ಮಗುವಿನ ಸ್ಥಿತಿ ಕಂಡು ಆತಂಕಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಈ ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೋಕಿಸರು ಲೋಕೇಶ್ ನನ್ನು ವಶಕ್ಕೆ ಪಡೆದಿದ್ದಾರೆ.ಈ ಲೋಕೇಶ್ ಮತ್ತು ಅಮೃತ ನೇಪಾಳ ಮೂಲದ ದಂಪತಿಯಾಗಿದ್ದು, ಲೋಕೇಶ್ ಬೆಂಗಳೂರಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದಾನೆ ಎನ್ನಲಾಗಿದ್ದು, ಐಪಿಸಿ ಸೆಕ್ಷನ್ 323 ರ ಅಡಿಯಲ್ಲಿ ಪೊಲೀಸರು ಕೇಸ್ ದಾಖಲಿಸಿದ್ದಾರೆ.