ಚಿಕ್ಕೋಡಿ: ಮಳೆ ನದಿ ಪ್ರವಾಹ— ನಡುಗಡ್ಡೆಯಲ್ಲಿ ಸಿಲುಕಿದ 40 ಕುಟುಂಬಗಳು

ಚಿಕ್ಕೋಡಿ: ಮಹಾರಾಷ್ಟ್ರದಲ್ಲಿ ಮಳೆಯಬ್ಬರದಿಂದಾಗಿ ಕೃಷ್ಣಾ ನದಿಯಲ್ಲಿ ಅಪಾರ ಪ್ರಮಾಣದ ಒಳಹರಿವು ಬರುತ್ತಿದ್ದು, ನದಿಯ ನಡುಗಡ್ಡೆಯಲ್ಲಿ ತುಂಬು ಗರ್ಭಿಣಿ ಸೇರಿ 40 ಕುಟುಂಬಗಳು ಸಿಲುಕಿವೆ.

ಬೆಳಗಾವಿಯ ಅಥಣಿ ತಾಲೂಕಿನ ಹುಲಗಬಾಳ ಗ್ರಾಮದ ಮಾಂಗ ವಸತಿ ಪ್ರದೇಶವು ಮಹಾ ಮಳೆಗೆ ಸಂಪೂರ್ಣ ಜಲಾವೃತವಾಗಿದೆ. ಇದೀಗ ನೂರಕ್ಕೂ ಹೆಚ್ಚು ಗ್ರಾಮಸ್ಥರು, ಮಕ್ಕಳು, ಜಾನುವಾರುಗಳು ನಡುಗಡ್ಡೆಯಲ್ಲಿ ಸಿಲುಕಿದ್ದಾರೆ.
ಶಾಲಾ ಮಕ್ಕಳು, ಜನರ ಸಂಚಾರಕ್ಕೆ ಇರುವ ಏಕೈಕ ರಸ್ತೆ ಮಾರ್ಗದ ಸಂಪರ್ಕವೂ ಕಡಿತವಾಗಿದೆ. ಅಥಣಿ ತಾಲೂಕಾಡಳಿತವು ಜನರ ಸ್ಥಳಾಂತರಕ್ಕೆ ಬೋಟ್ ವ್ಯವಸ್ಥೆ ಮಾಡದೆ ನಿದ್ರೆಗೆ ಜಾರಿದೆ. ಸಾಕಷ್ಟು ಸಂಖ್ಯೆಯಲ್ಲಿ ಬೋಟ್ ಇದ್ದರೂ ಸಹ ವ್ಯವಸ್ಥೆ ಮಾಡದೆ ಅಧಿಕಾರಿಗಳು ಸುಮ್ಮನೆ ಕುಳಿತಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕುತ್ತಿದ್ದಾರೆ.
