Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಚಿಕ್ಕಬಳ್ಳಾಪುರ: ಅಣ್ಣ-ತಂಗಿ ಸಂಬಂಧಕ್ಕೆ ಕಳಂಕ; ಲಿವ್-ಇನ್‌ನಲ್ಲಿದ್ದ ಯುವತಿ ಶವವಾಗಿ ಪತ್ತೆ, ಪ್ರೇಮಿ ನಾಪತ್ತೆ!

Spread the love

ಚಿಕ್ಕಬಳ್ಳಾಪುರ: ಅವರಿಬ್ಬರು ಪರಸ್ಪರ ಚಿಕ್ಕಪ್ಪ ದೊಡ್ಡಪ್ಪನ ಮಕ್ಕಳು. ಅವನಿಗೆ 30 ವರ್ಷ, ಅವಳಿಗೆ 21 ವರ್ಷ ವಯಸ್ಸು. ಆದ್ರೂ ಅವರಿಬ್ಬರು ಅಣ್ಣ ತಂಗಿ ಪವಿತ್ರ ಸಂಬಂಧಕ್ಕೆ ವಿರುದ್ಧವಾಗಿ, ಪರಸ್ಪರ ಪ್ರೀತಿಸಿ ಅಕ್ರಮ ಸಂಬಂಧದಲ್ಲಿ ತೇಲಾಡಿದ್ರು. ಇದನ್ನ ಕಂಡ, ಬಂಧು ಬಳಗ, ಗ್ರಾಮಸ್ಥರು ಬೈಯ್ದು ಬುದ್ದಿ ಹೇಳಿದರೂ ಕೇಳದೆ ಲಿವ್‌ ಇನ್‌ ರಿಲೇಷನ್ ಶಿಪ್‌ನಲ್ಲಿ ಇದ್ರಂತೆ, ಆದ್ರೆ ಈಗ ಆಕೆ ಶವವಾಗಿ ಪತ್ತೆಯಾಗಿರುವ ಘಟನೆ ಚಿಕ್ಕಬಳ್ಳಾಪುರ (Chikkaballapura) ತಾಲೂಕಿನ ಪೇರೇಸಂದ್ರ ಗ್ರಾಮದಲ್ಲಿ ನಡೆದಿದೆ.

ಆಕೆ ಹೆಸರು ರಾಮಲಕ್ಷ್ಮಿ (21), ಪ್ರತಿಷ್ಠಿತ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದಳು. ತಂದೆ ಹೆಸರು ಆಂಜನಪ್ಪ, ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ತಾಲೂಕಿನ ರಾಮಕೃಷ್ಣಪುರದ ನಿವಾಸಿ. ಯುವಕನ ಹೆಸರು ಕೃಷ್ಣ (30), ತಂದೆ ಹೆಸರು ರವಣಪ್ಪ. ಇಬ್ಬರದ್ದೂ ಒಂದೇ ಊರು, ಒಂದೇ ಮನೆ. ರಾಮಲಕ್ಷ್ಮಿ ತಂದೆ ಆಂಜನಪ್ಪ ಹಾಗೂ ಕೃಷ್ಣ ತಂದೆ ರವಣಪ್ಪ ಇಬ್ಬರು ಒಂದೆ ತಾಯಿ ಮಕ್ಕಳು, ಅಣ್ಣ-ತಮ್ಮ ಮಕ್ಕಳೆ. ರಾಮಲಕ್ಷ್ಮಿ ಹಾಗೂ ಕೃಷ್ಣ, ಪಕ್ಕಾ ಅಣ್ಣ ತಂಗಿ ಸಂಬಂಧ, ಇಬ್ಬರು ಚಿಕ್ಕಬಳ್ಳಾಪುರ ತಾಲೂಕಿನ ಪೆರೇಸಂದ್ರ ಗ್ರಾಮದಲ್ಲಿ ಗಂಡ ಹೆಂಡತಿ ಅಂತ ಹೇಳಿಕೊಂಡು ಬಾಡಿಗೆ ಮನೆ ಮಾಡಿಕೊಂಡು ವಾಸವಿದ್ರು. ಆದ್ರೆ ಇಂದು ರಾಮಲಕ್ಷ್ಮಿ ಮನೆನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ರೀತಿಯಲ್ಲಿ ಶವ ಪತ್ತೆಯಾಗಿದೆ.

ರಾಮಲಕ್ಷ್ಮಿ ಹಾಗೂ ಕೃಷ್ಣ, ಕಳೆದ 3 ವರ್ಷಗಳಿಂದ ಅಣ್ಣ-ತಂಗಿ ಸಂಬಂಧಕ್ಕೆ ವಿರುದ್ಧವಾಗಿ, ಪ್ರೀತಿ ಪ್ರೇಮ ಕಾಮ ಅನೈತಿಕ ಸಂಬಂಧದಲ್ಲಿ ತೊಡಗಿದ್ರಂತೆ, ಇದ್ರಿಂದ ಎರಡು ಕುಟುಂಬಗಳ ಬಂಧು ಬಳಗ, ಇಬ್ಬರಿಗೂ ಬೈಯ್ದು ಬುದ್ಧಿವಾದ ಹೇಳಿದ್ರು. ಕೊನೆಗೆ ರಾಮಕೃಷ್ಣಪುರದಲ್ಲಿ ಒಂದು ಕುಟುಂಬ. ಜಿಲ್ಲೆಯ ಬಾಗೇಪಲ್ಲಿ ಪಟ್ಟಣದಲ್ಲಿ ಒಂದು ಕುಟುಂಬವಾಗಿ ಪ್ರತ್ಯೇಕವಾಗಿ ನೆಲೆಸಿದ್ರು. ಮತ್ತೊಂದೆಡೆ ಕೃಷ್ಣನಿಗೆ ಬೇರೆ ಹುಡುಗಿಯೊಬ್ಬಳ ಜೊತೆ ಮದುವೆ ಮಾಡಿದ್ರು, ಆದ್ರೂ ಕೃಷ್ಣ ತನ್ನ ತಂಗಿ ರಾಮಲಕ್ಷ್ಮಿ ಯನ್ನ ಬಿಡದೇ ವಳ ತಲೆ ಕೆಡಿಸಿ ಪ್ರತ್ಯೇಕ ಮನೆ ಮಾಡಿ ಕಳ್ಳ ಸಂಸಾರ ಮಾಡ್ತಿದ್ದಂತೆ, ಈಗ ನೋಡಿದ್ರೆ. ರಾಮಲಕ್ಷ್ಮಿ ಆತ್ಮಹತ್ಯೆಗೆ ಶರಣಾಗಿದ್ದು, ಅವಳ ಸಾವಿಗೆ ಅಣ್ಣ ವರಸೆಯ ಕೃಷ್ಣನೆ ಕಾರಣ ಎಂದು ಮೃತಳ ಅಕ್ಕ ಆಕ್ರೋಶ ವ್ಯಕ್ತಪಡಿಸಿದ್ದಾಳೆ.

ಇನ್ನೂ ತಂಗಿ ಸಾವಿನ ಮನೆ ಸೇರಿದ್ರೆ, ಅಣ್ಣ ಪೆರೇಸಂದ್ರ ಪೊಲೀಸರ ಭಯದಿಂದ ನಾಪತ್ತೆಯಾಗಿದ್ದಾನೆ. ಈ ಸಂಬಂಧ ಪೆರೇಸಂದ್ರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love
Share:

administrator

Leave a Reply

Your email address will not be published. Required fields are marked *