Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಚಿಕ್ಕಬಳ್ಳಾಪುರ ಜನಸಂಖ್ಯೆಯಲ್ಲಿ ಭಾರೀ ಹೆಚ್ಚಳ: 10 ವರ್ಷದಲ್ಲಿ ಮೃತಪಟ್ಟವರಿಗಿಂತ ದುಪ್ಪಟ್ಟು ಜನನ ಪ್ರಮಾಣ ದಾಖಲು

Spread the love

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಹುಟ್ಟು ಮತ್ತು ಸಾವಿನ ಪ್ರಮಾಣದ ಅಂಕಿ ಅಂಶಗಳನ್ನ ನೋಡಿದರೆ, ಜನನ ಪ್ರಮಾಣ ಗಣನೀಯವಾಗಿ ಹೆಚ್ಚಿದೆ. ಕಳೆದ ವರ್ಷಗಳಲ್ಲಿ ಮೃತಪಟ್ಟವರಿಗಿಂತ ದುಪ್ಪಟ್ಟು ಸಂಖ್ಯೆಯಲ್ಲಿ ಜನನ ಪ್ರಮಾಣ ದಾಖಲಾಗಿದೆ.

2011ರ ಜನಗಣತಿ ಪ್ರಕಾರ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 12,55,104 ಜನಸಂಖ್ಯೆ ಇದೆ. ಸರ್ಕಾರವು ಈಗ ಜನಗಣತಿ ನಡೆಸಿದ್ರೂ ಈ ಸಂಖ್ಯೆ ಲಕ್ಷಗಳ ಲೆಕ್ಕದಲ್ಲಿ ಹೆಚ್ಚಲಿದೆ. ಇದಕ್ಕೆ ಕಾರಣ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಜನನದ ದರ. 

2011ರ ಜನಗಣತಿ ವೇಳೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 6 ತಾಲ್ಲೂಕುಗಳು ಇದ್ದವು. ಆದರೆ ಈಗ 8 ತಾಲ್ಲೂಕುಗಳಾಗಿವೆ. ಈ ಹಿಂದಿನ ಜನಗಣತಿಯ ಪ್ರಕಾರ ಸಣ್ಣ ತಾಲ್ಲೂಕು ಎನಿಸಿರುವ ಗುಡಿಬಂಡೆಯಲ್ಲಿ ಕಡಿಮೆ ಸಂಖ್ಯೆಯ ಜನಸಂಖ್ಯೆ ಇದೆ. ಚಿಂತಾಮಣಿ ತಾಲ್ಲೂಕಿನಲ್ಲಿ ಗರಿಷ್ಠ ಜನಸಂಖ್ಯೆ ದಾಖಲಾಗಿದೆ. ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲಿಯೂ ಇತ್ತೀಚಿನ ವರ್ಷಗಳಲ್ಲಿ ಜನನದ ದರ ಹೆಚ್ಚಳವಾಗಿದೆ.

ಜಿಲ್ಲೆಯಲ್ಲಿ 2013ರಿಂದ 2023ರ ವರೆಗಿನ ಅಂಕಿ ಅಂಶಗಳ ಪ್ರಕಾರ ಹೆಣ್ಣು ಮಕ್ಕಳು, ಗಂಡು ಮಕ್ಕಳು ಸೇರಿ ಒಟ್ಟು 1,67,795 ಮಕ್ಕಳು ಜನಿಸಿದ್ದಾರೆ. ಇದೇ ಅವಧಿಯಲ್ಲಿ ಹೆಣ್ಣು, ಗಂಡು ಮತ್ತು ಲಿಂಗತ್ವ ಅಲ್ಪಸಂಖ್ಯಾತರು ಸೇರಿದಂತೆ 87,850 ಜನರು ಮೃತಪಟ್ಟಿದ್ದಾರೆ. ಹೀಗೆ ಮರಣಿಸಿದವರಿಗಿಂತ ದುಪ್ಪಟ್ಟು ಸಂಖ್ಯೆಯಲ್ಲಿ ಜನನ ಪ್ರಮಾಣವು ದಾಖಲಾಗಿದೆ.

ಜನನ ಪ್ರಮಾಣದಲ್ಲಿ ಗಂಡು ಮಕ್ಕಳೇ ಹೆಚ್ಚು
ಜಿಲ್ಲೆಯಲ್ಲಿ ಈ ಅವಧಿಯಲ್ಲಿಯೇ ಗಂಡು ಮಕ್ಕಳಿಗಿಂತ ಹೆಣ್ಣು ಮಕ್ಕಳ ಜನನದ ಪ್ರಮಾಣ ಕಡಿಮೆ ಇದೆ. ಶಿಡ್ಲಘಟ್ಟ, ಗುಡಿಬಂಡೆ, ಗೌರಿಬಿದನೂರು, ಬಾಗೇಪಲ್ಲಿ ತಾಲ್ಲೂಕಿನಲ್ಲಿ ಹೆಣ್ಣು ಮತ್ತು ಗಂಡು ಮಕ್ಕಳ ಜನನದ ಅಂತರ ದೊಡ್ಡ ಪ್ರಮಾಣದಲ್ಲಿಯೇನೂ ಇಲ್ಲ. ಆದರೆ ಚಿಕ್ಕಬಳ್ಳಾಪುರ ಮತ್ತು ಚಿಂತಾಮಣಿ ತಾಲ್ಲೂಕಿನಲ್ಲಿ ಹೆಣ್ಣಿಗಿಂತ ಗಂಡು ಮಕ್ಕಳ ಜನನ ಪ್ರಮಾಣ ಸಾವಿರಗಳ ಲೆಕ್ಕದಲ್ಲಿ ಹೆಚ್ಚಿದೆ.

ಮತ್ತೊಂದು ಕಡೆ ಮರಣದ ಅಂಕಿ ಅಂಶಗಳಲ್ಲಿ ಗಂಡು ಮಕ್ಕಳ ಸಾವಿನ ಪ್ರಮಾಣವೇ ಹೆಚ್ಚಿದೆ. 2023–2023ರ ಅವಧಿಯಲ್ಲಿ 52,936 ಗಂಡು ಮತ್ತು 34,910 ಹೆಣ್ಣು ಮಕ್ಕಳು ಜಿಲ್ಲೆಯಲ್ಲಿ ಮೃತಪಟ್ಟಿದ್ದಾರೆ. ಸಾವಿನ ಪ್ರಮಾಣ ಮತ್ತು ಜನನದ ಪ್ರಮಾಣದ ನಡುವೆ ಹೋಲಿಕೆ ಮಾಡಿದರೆ ಎರಡರಲ್ಲಿಯೂ ಗಂಡು ಮಕ್ಕಳು ಮುಂದಿದ್ದಾರೆ.

ಈ 10 ವರ್ಷಗಳಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಹೆಣ್ಣು ಮಕ್ಕಳಿಗಿಂತ 9,405 ಗಂಡು ಮಕ್ಕಳು ಹೆಚ್ಚು ಜನಿಸಿದ್ದಾರೆ. ಇದೇ ಅವಧಿಯಲ್ಲಿ ಹೆಣ್ಣು ಮಕ್ಕಳಿಗಿಂತ 18,026 ಗಂಡು ಮಕ್ಕಳು ಮೃತಪಟ್ಟಿದ್ದಾರೆ. ಬಾಗೇಪಲ್ಲಿ ಮತ್ತು ಶಿಡ್ಲಘಟ್ಟ ತಾಲ್ಲೂಕಿನಲ್ಲಿ ತಲಾ ಇಬ್ಬರು ಲಿಂಗತ್ವ ಅಲ್ಪಸಂಖ್ಯಾತರು ಸಹ ಮರಣ ಹೊಂದಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *