‘ಕಬ್ಬಿಣದ ಉಂಡೆ’ ಅಳವಡಿಸಿದ ಅಗ್ಗದ ಚೀನಿ ಡ್ರೋನ್ ಗಳಿಂದ ಗಾಝಾದಲ್ಲಿ ಹ*ತ್ಯೆ

ಕೇವಲ 3000 ಡಾಲರ್ ಬೆಲೆಯ ವಾಣಿಜ್ಯ ಛಾಯಾಗ್ರಹಣ ಡ್ರೋನ್‌ಗಳು ಇಸ್ರೇಲ್ ನ ಸೇನಾಪಡೆಗೆ ಗಾಝಾದಲ್ಲಿ ಹತ್ಯೆಯ ಸಾಧನಗಳಾಗಿ ಬಳಕೆಯಾಗಿರುವ ಅಂಶವನ್ನು +972 ಮ್ಯಾಗಝಿನ್ ಮತ್ತು ಲೋಕಲ್ ಕಾಲ್ ನಡೆಸಿದ ಹೊಸ ಅಧ್ಯಯನದಿಂದ ಬಹಿರಂಗವಾಗಿದೆ.
ಇಸ್ರೇಲ್ ನ ಪ್ರಮುಖ ಸೇನಾ ತುಕಡಿಗಳು “ಕಬ್ಬಿಣದ ಉಂಡೆ” ಅಳವಡಿಸಿದ ಸೇನಾ ಸಾಧನಗಳನ್ನು ಜೋಡಿಸಿದ ಡ್ರೋನ್‌ಗಳನ್ನು ಬಳಸಿಕೊಂಡಿವೆ.
ಕೇವಲ ಒಂದು ಬಟನ್ ಒತ್ತುವ ಮೂಲಕ ಸೈನಿಕರು ಗ್ರೆನೇಡ್ ದಾಳಿ ನಡೆಸಲು ಇವು ಬಳಕೆಯಾಗಿವೆ ಎಂದು ಅಧ್ಯಯನ ವರದಿ ಹೇಳಿದೆ.

ಜನರು ಒಂದು ಜಾಗವನ್ನು ತೊರೆತಲು ಅಥವಾ ಒಂದು ನಿರ್ಜನ ಪ್ರದೇಶಕ್ಕೆ ಮರಳುವಂತೆ ಬಲವಂತಪಡಿಸಲು ನಿರಂತರವಾಗಿ ಡ್ರೋನ್‌ಗಳನ್ನು ನಿಯೋಜಿಸಲಾಗಿತ್ತು. ಅಮಾಯಕ ನಾಗರಿಕರನ್ನು ಗುರಿ ಮಾಡಿ ದಾಳಿ ನಡೆಸಲಾಗಿತ್ತು ಎಂಬ ಆತಂಕಕಾರಿ ಅಂಶ ಸೈನಿಕರೇ ನೀಡಿದ ಸಾಕ್ಷ್ಯಗಳಿಂದ ದೃಢಪಟ್ಟಿದೆ.
“ಜನರು ತಮ್ಮ ಮನೆಗಳಿಗೆ ಮರಳುವ ಪ್ರಯತ್ನದಲ್ಲಿದ್ದರು- ಇದರಲ್ಲಿ ಪ್ರಶ್ನೆಯೇ ಇಲ್ಲ” ಎಂದು ಸೈನಿಕು ವಿವರಿಸಿದ್ದಾರೆ. ಇವರ ಮೃತದೇಹಗಳನ್ನು ನಾಯಿಗಳು ತಿನ್ನಲು ಅಲ್ಲೇ ಬಿಡಲಾಗುತ್ತಿತ್ತು. “ಈ ಯಾರು ಕೂಡಾ ಶಸ್ತ್ರಾಸ್ತ್ರಗಳನ್ನು ಹೊಂದಿರಲಿಲ್ಲ ಮತ್ತು ಅವರ ದೇಹಗಳ ಸನಿಹದಲ್ಲಿ ಕೂಡಾ ಇದುವರೆಗೂ ಶಸ್ತ್ರಾಸ್ತ್ರಗಳು ಪತ್ತೆಯಾಗಿಲ್ಲ. ನಾವು ಯಾವುದೇ ಸಂದರ್ಭದಲ್ಲೂ ಎಚ್ಚರಿಕೆಯ ಗುಂಡು ಹಾರಿಸಿಲ್ಲ” ಎಂದು ಒಪ್ಪಿಕೊಂಡಿದ್ದಾರೆ.
