‘ನಾನು ಅಷ್ಟು ಚೀಪ್ ಅಲ್ಲ’: ಬಿಗ್ ಬಾಸ್‌ಗೆ ಹೋಗಲು ತನುಶ್ರೀ ದತ್ತಾ ನಿರಾಕರಣೆ

ಮುಂಬೈ: ಮೀಟೂ ಆರೋಪದಿಂದ ಸುದ್ದಿಯಲ್ಲಿದ್ದ ನಟಿ ತನುಶ್ರೀ ದತ್ತಾ ಇದೀಗ ಬಿಗ್ ಬಾಸ್ ಆಫರ್ ನ್ನು ನಿರಾಕರಿಸಿದ್ದಾರೆ. ಅಲ್ಲದೆ ಅದಕ್ಕೆ ಅವರು ಕಾರಣವನ್ನು ನೀಡಿದ್ದಾರೆ.
ಒಂದು ಕಾಲದಲ್ಲಿ ಹಾಟ್ ಸಿನೆಮಾಗಳಲ್ಲಿ ನಟಿಸಿ ಖ್ಯಾತಿಯಲ್ಲಿದ್ದ ನಟಿ ತನುಶ್ರೀ ದತ್ತಾ ಬಳಿಕ ಮಿಟೂ ಅಭಿಯಾನದ ವೇಳೆ ನಾನಾ ಪಾಟೇಕರ್ ವಿರುದ್ದ ಆರೋಪ ಮಾಡಿದ್ದರು. ನಂತರದಲ್ಲಿ ಅವರು ವಿವಾದಗಳಿಂದಲೇ ಹೆಚ್ಚು ಸುದ್ದಿ ಆದರು. ಬಿಗ್ ಬಾಸ್ ಶೋಗೆ (Bigg Boss) ಹೋಗುವ ಆಫರ್ ಬಂದಿತ್ತು ಎನ್ನಲಾಗಿದೆ. ಆದರೆ ಅವರು ಆ ಅವಕಾಶವನ್ನು ತಿರಸ್ಕರಿಸಿದ್ದಾರೆ. ಅಲ್ಲದೇ ಅದಕ್ಕೆ ಕಾರಣ ಏನು ಎಂಬುದನ್ನು ಕೂಡ ವಿವರಿಸಿದ್ದಾರೆ.

ಹಿಂದಿ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಮಹಿಳಾ ಸ್ಪರ್ಧಿಗಳು ಮತ್ತು ಪುರುಷ ಸ್ಪರ್ಧಿಗಳು ಒಂದೇ ಹಾಸಿಗೆಯಲ್ಲಿ ನಿದ್ರಿಸಿದ ಉದಾಹರಣೆ ಇದೆ. ಈ ಕಾರಣಕ್ಕೆ ತನುಶ್ರೀ ದತ್ತ ಅವರು ಬಿಗ್ ಬಾಸ್ ಕಾರ್ಯಕ್ರಮವನ್ನು ಜರಿದಿದ್ದಾರೆ. ‘ನಾನು ಅಷ್ಟು ಚೀಪ್ ಅಲ್ಲ’ ಎಂದು ಅವರು ಹೇಳಿದ್ದಾರೆ.
‘ಅಂತಹ ಕಾರ್ಯಕ್ರಮಕ್ಕೆ ನಾನು ಹೋಗುತ್ತೇನೆ ಎಂದು ನಿಮಗೆ ಅನಿಸುತ್ತ? ಅಂಥ ಜಾಗದಲ್ಲಿ ನಾನು ಇರಲಾರೆ. ಆ ರೀತಿ ನಾನು ನನ್ನ ಕುಟುಂಬದ ಜೊತೆಗೂ ಇರಲ್ಲ. ನನಗೆ ಬಿಗ್ ಬಾಸ್ ಕಾರ್ಯಕ್ರಮದ ಮೇಲೆ ಎಂದಿಗೂ ಆಸಕ್ತಿ ಬಂದಿಲ್ಲ, ಬರುವುದೂ ಇಲ್ಲ. ಅವರು ನನಗೆ 1.65 ಕೋಟಿ ರೂಪಾಯಿ ಸಂಭಾವನೆ ಆಫರ್ ಮಾಡಿದ್ದರು. ನನ್ನ ಹಾಗೆ ಇರುವ ಇನ್ನೋರ್ವ ಸೆಲೆಬ್ರಿಟಿಗೂ ಅಷ್ಟೇ ಹಣ ನೀಡಿದರು’ ಎಂದಿದ್ದಾರೆ ತನುಶ್ರೀ.
‘ಬಿಗ್ ಬಾಸ್ ಕಾರ್ಯಕ್ರಮದ ಸ್ಟೈಲಿಸ್ಟ್ ಕಡೆಯಿಂದ ನನಗೆ ಕರೆ ಬಂದಿತ್ತು. ಅವರು ಮನವಿ ಮಾಡಿದರು. ನನ್ನ ಡಯೆಟ್ ನೋಡಿಕೊಳ್ಳುವುದಾಗಿಯೂ ಅವರು ಹೇಳಿದರು. ಏನೇ ಕೊಟ್ಟರು ನಾನು ಬಿಗ್ ಬಾಸ್ ಕಾರ್ಯಕ್ರಮಕ್ಕೆ ಹೋಗಲ್ಲ ಅಂತ ಅವರಿಗೆ ಹೇಳಿದೆ’ ಎಂದಿದ್ದಾರೆ ತನುಶ್ರೀ ದತ್ತ.
ಗಂಡಸರು ಮತ್ತು ಹೆಂಗಸರು ಒಂದೇ ಕೋಣೆಯಲ್ಲಿ ಮಲಗುತ್ತಾರೆ. ಒಟ್ಟಿಗೆ ಫೈಟ್ ಮಾಡುತ್ತಾರೆ. ನಾನು ಅದನ್ನು ಮಾಡಲಾರೆ. ನನ್ನ ಡಯೆಟ್ ತುಂಬ ನಿಖರವಾಗಿದೆ. ಒಂದು ರಿಯಾಲಿಟಿ ಶೋಗಾಗಿ ಗಂಡಸರ ಜೊತೆ ಬೆಡ್ ಹಂಚಿಕೊಳ್ಳುವ ಮಹಿಳೆಯ ರೀತಿ ನಾನು ಕಾಣುತ್ತೇನಾ? ನಾನು ಅಷ್ಟು ಚೀಪ್ ಅಲ್ಲ. ನನ್ನ ಖಾಸಗಿತನ ಅಮೂಲ್ಯವಾದದ್ದು. ನನ್ನ ಪಾಡಿಗೆ ನೆಮ್ಮದಿಯಿಂದ ಕೆಲಸ ಮಾಡಲು ಬಿಟ್ಟರೆ ಅದಕ್ಕಿಂತ ಜಾಸ್ತಿ ಸಂಪಾದನೆ ಮಾಡುತ್ತೇನೆ ಎಂಬುದು ನನಗೆ ಗೊತ್ತು’ ಎಂದು ತನುಶ್ರೀ ದತ್ತ ಹೇಳಿದ್ದಾರೆ.
