Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಫ್ರೀ ಬಸ್‌ನ ಫಜೀತಿ:ಉಸಿರುಗಟ್ಟಿ ಕಿರುಚಿದ ಮಹಿಳೆ

Spread the love


ತುಮಕೂರು: ಮಹಿಳಾ ಪ್ರಯಾಣಿಕರಿಗಾಗಿ ಸರ್ಕಾರ ನೀಡಿರುವ ಫ್ರೀ ಬಸ್ ಯೋಜನೆ ಹಲವು ಫಜೀತಿ ಸೃಷ್ಟಿ ಮಾಡುತ್ತಿದೆ. ಮೈಸೂರಿನಿಂದ ತುಮಕೂರಿಗೆ ಸಂಚರಿಸುತ್ತಿದ್ದ ಬಸ್‌ನಲ್ಲಿ ಮಹಿಳೆಯೊಬ್ಬರು ಉಸಿರುಗಟ್ಟಿ ಕಿರುಚಾಡಿದ ಘಟನೆ ತುಮಕೂರು ಜಿಲ್ಲೆ ಕುಣಿಗಲ್ ಪಟ್ಟಣದಲ್ಲಿ ನಡೆದಿದೆ.

ಅತಿಯಾದ ಜನಸಂದಣಿಯಲ್ಲಿ ಬಸ್‌ನೊಳಗೆ ಉಂಟಾದ ತೀವ್ರ ನೂಕಾಟ-ತಳ್ಳಾಟದಿಂದ ಮಹಿಳೆಯೊಬ್ಬರಿಗೆ ಉಸಿರಾಡಲು ತೀವ್ರ ತೊಂದರೆ ಉಂಟಾಗಿದೆ. ನನ್ನನ್ನು ಕಾಪಾಡಿ, ಬಸ್ಸಿನಿಂದ ಕೆಳಗಿಳಿಸಿ ಎಂದು ಜೋರಾಗಿ ಮಹಿಳಾ ಪ್ರಯಾಣಿಕರೊಬ್ಬರು ಕೂಗಿಕೊಂಡಿದ್ದಾರೆ. ತಕ್ಷಣವೇ ಬಸ್ಸು ನಿಲ್ಲಿಸಿದ ನಿರ್ವಾಹಕರು ಮಹಿಳೆಯನ್ನು ಕೆಳಗಿಳಿಸಿದ್ದಾರೆ.

ಈ ಬಸ್ ಮೈಸೂರು ತುಮಕೂರು ಮಾರ್ಗದಲ್ಲಿ ಸಂಚರಿಸುತ್ತಿತ್ತು. ಗೌಡಗೆರೆ ಚಾಮುಂಡೇಶ್ವರಿ ದೇವಾಲಯಕ್ಕೆ ಹೋಗಿದ್ದ ಮಹಿಳಾ ತಂಡ ಈ ಬಸ್ಸಿನಲ್ಲಿ ಹೋಗುತ್ತಿದ್ದ ವೇಳೆ ಘಟನೆ ನಡೆದಿದೆ.


Spread the love
Share:

administrator

Leave a Reply

Your email address will not be published. Required fields are marked *