Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಯುಪಿಐ ಪಾವತಿ ಮಿತಿಯಲ್ಲಿ ಬದಲಾವಣೆ- ಸಪ್ಟೆಂಬರ್ 15 ರಿಂದ ಹೊಸ ನಿಯಮ ಜಾರಿ

Spread the love

ಡಿಜಿಟಲ್ ಪಾವತಿಗಳ ಬಳಕೆ ದಿನೇದಿನೇ ವಿಸ್ತರಿಸುತ್ತಿರುವ ಹಿನ್ನೆಲೆಯಲ್ಲಿ ಯುಪಿಐ ಬಳಕೆದಾರರಿಗೆ ಭಾರತೀಯ ರಾಷ್ಟ್ರೀಯ ಪಾವತಿ ನಿಗಮ NPCI ಮಹತ್ವದ ನಿರ್ಧಾರ ಕೈಗೊಂಡಿದೆ. ಇತ್ತೀಚಿನವರೆಗೂ ಒಂದೇ ಬಾರಿ ಗರಿಷ್ಠ 1 ಲಕ್ಷ ರೂಪಾಯಿ ಪಾವತಿ ಮಿತಿ ಇತ್ತು.

ಇದೀಗ ಅದನ್ನು ಭಾರೀ ಮಟ್ಟಿಗೆ ಹೆಚ್ಚಿಸಿ 5 ಲಕ್ಷ ರೂಪಾಯಿಗೆ ಏರಿಸಲಾಗಿದೆ. ಜೊತೆಗೆ, ದಿನವೊಂದಕ್ಕೆ ಗರಿಷ್ಠ 10 ಲಕ್ಷ ರೂಪಾಯಿವರೆಗೆ ವಹಿವಾಟು ಮಾಡಲು ಅವಕಾಶ ನೀಡಲಾಗಿದೆ.

ಈ ಹೊಸ ಪಾವತಿ ಮಿತಿಗಳು ಸೆಪ್ಟೆಂಬರ್ 15ರಿಂದಲೇ ಜಾರಿಯಾಗಲಿವೆ. ತೆರಿಗೆ ಪಾವತಿ, ಸಾಲದ ಇಎಂಐ, ದೈನಂದಿನ ವಹಿವಾಟು ಮುಂತಾದ ಪ್ರಮುಖ ಹಣಕಾಸು ವ್ಯವಹಾರಗಳಲ್ಲಿ ಗ್ರಾಹಕರಿಗೆ ಇದರಿಂದ ದೊಡ್ಡ ಮಟ್ಟದಲ್ಲಿ ಅನುಕೂಲವಾಗಲಿದೆ.

ಆದರೆ, ಈ ಹೆಚ್ಚುವರಿ ಮಿತಿ ವ್ಯಾಪಾರಿಗಳಿಗೆ (B2B) ಮಾಡುವ ಪಾವತಿಗಳಿಗೆ ಮಾತ್ರ ಅನ್ವಯವಾಗುತ್ತದೆ. ವ್ಯಕ್ತಿಯಿಂದ ವ್ಯಕ್ತಿಗೆ (P2P) ಮಾಡುವ ಪಾವತಿಗೆ ಮಿತಿಯು ಹಳೆಯದಂತೆ 1 ಲಕ್ಷ ರೂಪಾಯಿ ಮುಂದುವರಿಯಲಿದೆ ಎಂದು NPCI ತಿಳಿಸಿದೆ.

ಡಿಜಿಟಲ್ ಪಾವತಿಯ ಬಳಕೆಯ ಹೆಚ್ಚಳಕ್ಕೆ ಸಾಕ್ಷಿಯಾಗಿ, ಈ ವರ್ಷ ಆಗಸ್ಟ್ ತಿಂಗಳಲ್ಲಿ 2,000 ಕೋಟಿಗೂ ಅಧಿಕ ಯುಪಿಐ ವಹಿವಾಟುಗಳು ನಡೆದಿದ್ದು, ಇದರ ಒಟ್ಟು ಮೊತ್ತ 24.85 ಲಕ್ಷ ಕೋಟಿ ರೂಪಾಯಿ ತಲುಪಿದೆ. ಹಿಂದಿನ ವರ್ಷಕ್ಕೆ ಹೋಲಿಕೆ ಮಾಡಿದರೆ, ಆಗಸ್ಟ್ ತಿಂಗಳಲ್ಲಿ ಯುಪಿಐ ವಹಿವಾಟಿನಲ್ಲಿ 34% ಏರಿಕೆ ದಾಖಲಾಗಿದೆ.


Spread the love
Share:

administrator

Leave a Reply

Your email address will not be published. Required fields are marked *