ಚಂದ್ರಯಾನ 5: ಚಂದ್ರನ ಮೇಲೆ ನೀರು ಹುಡುಕಲಿರುವ ಇಸ್ರೋ-ಜಪಾನ್ ಜಂಟಿ ಮಹಾಮಿಷನ್

ನವದೆಹಲಿ: ಚಂದ್ರಯಾನ 3 ಯಶಸ್ಸಿನ ಬೆನ್ನಲ್ಲೇ ಚಂದ್ರಯಾನ 4 ಯೋಜನೆ ಪ್ರಗತಿಯಲ್ಲಿದೆ. ಇದರ ನಡುವೆ ಚಂದ್ರಯಾನ 5 ಯೋಜನೆ ಕೂಡ ಚಾಲ್ತಿಯಲ್ಲಿದೆ. ಈ ಚಂದ್ರಯಾನ 5 ಮಿಷನ್ ಜಗತ್ತಿಗೆ ಹಲವು ಅಚ್ಚರಿ ನೀಡುವ ಸಾಧ್ಯತೆ ಇದೆ. ಕಾರಣ ಇದೇ ಮೊದಲ ಬಾರಿಗೆ ಚಂದ್ರನ ಮೇಲೆ ನೀರು ಶೋಧಿಸುವ ಕಾರ್ಯಕ್ಕೆ ಇಸ್ರೋ ಹಾಗೂ ಜಪಾನ್ ಏರೋಸ್ಪೇಸ್ ಎಕ್ಸ್ಪ್ಲೋರೇಶನ್ ಎಜೆನ್ಸಿ ಜಂಟಿಯಾಗಿ ಈ ಮಿಷನ್ ಕೈಗೆತ್ತಿಕೊಂಡಿದೆ. ಚಂದ್ರನ ಮೇಲೆ ಯಾರೂ ಇಳಿಯದ ಜಾಗ ಸೌತ್ ಪೋಲ್ನಲ್ಲಿ ಚಂದ್ರಯಾನ 3 ಯಶಸ್ವಿಯಾಗಿ ಲ್ಯಾಂಡ್ ಆಗಿತ್ತು. ಇದೀಗ ಇದೇ ಜಾಗದಲ್ಲಿ ಭಾರತದ ರಂಧ್ರ ಕೊರೆತು ಚಂದ್ರನ ಮೇಲೆ ನೀರಿನ ಹುಡುಕಾಟ ನಡೆಸಲಿದೆ.
ಭಾರತದ ಇಸ್ರೋ ಹಾಗೂ ಜಪಾನ್ನ ಏರೋಸ್ಪೇಸ್ ಎಕ್ಸ್ಪ್ಲೋರೇಶನ್ ಎಜೆನ್ಸಿ ಲೂನಾರ್ ಪೋಲಾರ್ ಎಕ್ಪ್ಲೋರೇಶನ್ ಮಿಷನ್ ಜಂಟಿಯಾಗಿ ನಡೆಸುತ್ತಿದೆ. ಅಂತಾರಾಷ್ಟ್ರೀಯ ಬಾಹ್ಯಾಕಾಶ ಸಂಸ್ಥೆ ಜೊತೆ ಇಸ್ರೋ ನಡೆಸುತ್ತಿರುವ ಅತ್ಯಂತ ಮಹತ್ವದ ಮಿಷನ್ ಇದಾಗಿದೆ. ಜಪಾನ್ H3 ರಾಕೆಟ್ ಉಡಾವಣೆ ಮಾಡಿ ಈ ಮೂಲಕ ಈ ಸಂಶೋಧನೆ ನಡೆಯಲಿದೆ.
ಚಂದ್ರನ ಮೇಲೆ ನೀರು ಇದೆಯಾ?
ಚಂದ್ರನ ಮೇಲೆ ನೀರು ಇದೆಯಾ ಅನ್ನೋದು ಪತ್ತೆ ಹೆಚ್ಚೋದು ಈ ಮಿಷನ್ ಪ್ರಮುಖ ಉದ್ದೇಶ. ಹಾಗಂತ ಚಂದ್ರನ ಮೇಲಿನ ಕಣಗಳ ಅಧ್ಯಯನ ನಡೆಸುವ ಮಿಷನ್ ಇದಲ್ಲ. ಇದು ಭೂಮಿಯಲ್ಲಿ ಅಂತರ್ಜಲ ತೆಗೆಯಲು ಹೇಗೆ ಬೋರ್ವೆಲ್ ಅಥವಾ ಭಾವಿ ಕೊರೆಯಲಾಗುತ್ತದೋ, ಅದೇ ರೀತಿ ಚಂದ್ರನಲ್ಲೂ ರಂಧ್ರ ಕೊರೆದು ನೀರು ಇದೆಯಾ ಅನ್ನೋದು ಪತ್ತೆ ಹಚ್ಚಲಾಗುತ್ತದೆ. ನೀರು ಅಥವಾ ನೀರಿನ ಮಂಜುಗಡ್ಡೆ ಚಂದ್ರನಲ್ಲಿ ಇದೆಯಾ ಅನ್ನೋದು ಈ ಮಿಷನ್ ಮೂಲಕ ಬಹಿರಂಗವಾಗಲಿದೆ.
ಚಂದ್ರಯಾನ 5ನಲ್ಲಿ 6.5 ಟನ್ ಪೇಲೋಡ್
ಚಂದ್ರಯಾನ 5 ಮಿಷನ್ನಲ್ಲಿ ಪೇಲೋಡ್ ಸಾಮರ್ಥ್ಯ ಬರೋಬ್ಬರಿ 6.5 ಟನ್ . ಇದರಲ್ಲಿ 250 ಕೆಜಿ ತೂಕದ ರೋವರ್ ಕೂಡ ಸೇರಿದೆ. ಚಂದ್ರಯಾನ 3ಯಲ್ಲಿ ಬಳಸಿದ ಪ್ರಗ್ಯಾನ್ ರೋವರ್ಗಿಂತ 10 ಪಟ್ಟು ಹೆಚ್ಚು ತೂಕದ ರೋವರ್ನ್ನು ಚಂದ್ರಯಾನ 5 ಮಿಷನ್ನಲ್ಲಿ ಬಳಕೆ ಮಾಲಾಗುತ್ತಿದೆ. ಇದರ ಜೊತೆಗೆ ನೀರು ಪತ್ತೆ ಹಚ್ಚುವ ಸಾಧನ,ರೇಡಾರ್, 1.5 ಮೀಟರ್ ಡ್ರಿಲ್ಲರ್, ನೀರು ಸಿಕ್ಕರೆ ಅದರ ಗುಣಟ್ಟ ಪರೀಕ್ಷಿಸುವ ತಂತ್ರಜ್ಞಾನಗಳು ಸೇರಿದಂತೆ ಅಧ್ಯಯನಕ್ಕೆ ಬೇಕಾದ ಎಲ್ಲವೂ ಇರಲಿದೆ.