ಚಾಮರಾಜಪೇಟೆ: ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ BGS ಫ್ಲೈಓವರ್‌ನಲ್ಲಿ ತಾತ್ಕಾಲಿಕ ಸಂಚಾರ ನಿಷೇಧ

ನಾಳೆ ರಾಜ್ಯದೆಲ್ಲೆಡೆ ಬಕ್ರೀದ್ ಹಬ್ಬವನ್ನು ಮುಸ್ಲಿಂ ಬಾಂಧವರು ಅದ್ಧೂರಿಯಾಗಿ ಆಚರಿಸುತ್ತಾರೆ. ಹೀಗಾಗಿ ಪ್ರಾರ್ಥನೆ ಸಲ್ಲಿಸುವ ಮೂಲಕ ಹಬ್ಬ ಆಚರಣೆ ಹಿನ್ನೆಲೆ ಇತ್ತ ಚಾಮರಾಜಪೇಟೆ 1ನೆ ಮುಖ್ಯರಸ್ತೆಯ ಬಿಬಿಎಂಪಿ ಆಟದ ಮೈದಾನ ಹಾಗೂ ಬಿಬಿ ಜಂಕ್ಷನ್ನಲ್ಲಿ ಪ್ರಾರ್ಥನೆ ನಡೆಯುವುದರಿಂದ ಮೈಸೂರು ರಸ್ತೆಯ ಬಿಜಿಎಸ್ ಪ್ಲೈಓವರ್ ಬೆಳಿಗ್ಗೆ 8:00 ಗಂಟೆಯಿಂದ ಪ್ರಾರ್ಥನೆ ಮುಗಿಯುವವರೆಗೆ ತಾತ್ಕಾಲಿಕವಾಗಿ ಎಲ್ಲಾ ಮಾದರಿಯ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ.
ಸಂಚಾರ ಸಲಹೆ ದಿನಾಂಕ 07.06.2025 ರಂದು ಬಕ್ರೀದ್ ಹಬ್ಬದ ಪ್ರಯುಕ್ತ ಚಾಮರಾಜಪೇಟೆ 1ನೆ ಮುಖ್ಯರಸ್ತೆಯ BBMP ಆಟದಮೈದಾನ ಹಾಗೂ B B ಜಂಕ್ಷನ್ ನಲ್ಲಿ ಪ್ರಾರ್ಥನೆ ನಡೆಯುವುದರಿಂದ ಮೈಸೂರುರಸ್ತೆಯ BGS ಪ್ಲೈಓವರ್ ಬೆಳಿಗ್ಗೆ 8:00 ಗಂಟೆಯಿಂದ ಪ್ರಾರ್ಥನೆ ಮುಗಿಯುವವರೆಗೆ ತಾತ್ಕಾಲಿಕವಾಗಿ ಎಲ್ಲಾ ಮಾದರಿಯ ವಾಹನಗಳ ಸಂಚಾರವನ್ನು ನಿಷೇದಿಸಲಾಗುವುದು.