Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಚಾಮರಾಜನಗರ: ಮದುವೆಗೆ ಮನೆಯವರ ವಿರೋಧ; ನೊಂದು ಪ್ರೇಮಿಗಳ ಆತ್ಮಹ*ತ್ಯೆ

Spread the love

ಚಾಮರಾಜನಗರ: ತಮ್ಮ ಮದುವೆಗೆ (marriage) ಪೋಷಕರ ವಿರೋಧ ವ್ಯಕ್ತಪಡಿಸಿದ್ದರಿಂದ ಮನನೊಂದ ಪ್ರೇಮಿಗಳು (Lovers) ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಾಮರಾಜನಗರ (Chamarajnagar) ಜಿಲ್ಲೆಯ ಹನೂರು ತಾಲೂಕಿನ ಪೊನ್ನಾಚಿ ಗ್ರಾಮದಲ್ಲಿ ನಡೆದಿದೆ. ಮನೆಯಲ್ಲಿ ನದಿಯಾ(19), ನಾಗೇಂದ್ರ(21) ಆತ್ಮಹತ್ಯೆ ಮಾಡಿಕೊಂಡ ಪ್ರೇಮಿಗಳು. ಪರಸ್ಪರ ಪ್ರೀತಿಸುತ್ತಿದ್ದ ಈ ಜೋಡಿ ಮನೆಬಿಟ್ಟು ಹೋಗಿತ್ತು. ಹೀಗಾಗಿ ಇತ್ತ ಯುವತಿ ಕಡೆಯವರು ಮಿಸ್ಸಿಂಗ್ ದೂರು ನೀಡಿದ್ದಾರೆ. ಇದರಿದ ಹೆದರಿ ಪ್ರೇಮಿಗಳು ಜತೆಯಲ್ಲೇ ಸಾಯುಲು ನಿರ್ಧರಿಸಿ ನೇಣಿಗೆ ಶರಣಾಗಿದ್ದಾರೆ.

ನಾಗೇಂದ್ರ ಹಾಗೂ ಪಾಲಾರ್ ಗ್ರಾಮದ ನದಿಯಾ ಪರಸ್ಪರ ಪ್ರೀತಿಸುತ್ತಿದ್ದರು. ಹೀಗಾಗಿ 3 ದಿನದ ಹಿಂದೆ ನಾಗೇಂದ್ರ, ನದಿಯಾಳನ್ನು ಕರೆದುಕೊಂಡು ತನ್ನ ಅಜ್ಜನ ಊರು ಪೊನ್ನಾಚಿಗೆ ಕರೆದುಕೊಂಡು ಹೋಗಿದ್ದ. ಇತ್ತ ನದಿಯಾ ಕುಟುಂಬಸ್ಥರು ಆತಂಕಗೊಂಡಿದ್ದು, ಎಲ್ಲೆಡೆ ಹುಡುಕಾರಿದ್ದಾರೆ. ಆದರೂ ಪತ್ತೆಯಾಗಿಲ್ಲ. ಕೊನೆಗೆ ಮಲೆ ಮಹದೇಶ್ವರ ಬೆಟ್ಟ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಕೇಶ್ ದಾಖಲಿಸಿದ್ದರು.

ಕೇಸ್ ದಾಖಲಾದ ವಿಚಾರ ನಾಗೇಂದ್ರ ಹಾಗೂ ನದಿಯಾಗೆ ಗೊತ್ತಾಗಿ ಹೆದರಿಕೊಂಡಿದ್ದು, ಒಂದು ವೇಳೆ ಪೊಲೀಸರ ಕೈಗೆ ಸಿಕ್ಕರೆ ಹೇಗೆ ? ಮುಂದೇನು ಎಂದು ಭಯಗೊಡು ಸಾಯುವ ನಿರ್ಧಾರಕ್ಕೆ ಬಂದಿದ್ದು, ಮನೆಯಲ್ಲಿ ಯಾರು ಇಲ್ಲದ ವೇಳೆ ಇಬ್ಬರು ಒಟ್ಟಿಗೆ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಈ ವಿಚಾರ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಮಲೆ ಮಹದೇಶ್ವರಬೆಟ್ಟ ಠಾಣೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು,ಸದ್ಯ ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ಶವಗಳ ಸ್ಥಳಾಂತರ ಮಾಡಲಾಗಿದೆ.


Spread the love
Share:

administrator

Leave a Reply

Your email address will not be published. Required fields are marked *