Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಎಐ ಯುಗದ ಚಾಲೆಂಜ್: ಎಐ ಜಗತ್ತಿನಲ್ಲಿ ಮನುಷ್ಯನಿಗೆ ಉದ್ಯೋಗ ಉಳಿಯಲಿದೆಯೇ?

Spread the love

ತಂತ್ರಜ್ಞಾನ ಮುಂದುವರೆದಂತೆ ನಾವು ಖುಷಿಪಡುವುದು ಹೆಚ್ಚಾಗುತ್ತಿದೆ. ಆದರೆ ಇದೇ ತಂತ್ರಜ್ಞಾನ ಹಲವರ ಪಾಲಿಗೆ ಮುಳುವಾಗುತ್ತಿದೆ. ಕೃತಕ ಬುದ್ಧಿಮತ್ತೆಯಂಥ ತಂತ್ರಜ್ಞಾನದಿಂದ ಇದಾಗಲೇ ಹಲವಾರು ಕ್ಷೇತ್ರಗಳಲ್ಲಿ ಉದ್ಯೋಗಿಗಳು ಕೆಲಸ ಕಳೆದುಕೊಳ್ಳುತ್ತಿದ್ದಾರೆ. ಹತ್ತಾರು ಮಂದಿ ಮಾಡುವ ಕೆಲಸವನ್ನು ಒಂದೇ ಒಂದು ಉಪಕರಣ ಮಾಡುವುದನ್ನು ಕಂಡುಹಿಡಿದಿರುವುದರಿಂದ ಉದ್ಯೋಗಗಳ ಅವಶ್ಯಕತೆ ಹೆಚ್ಚಿನ ಕಂಪೆನಿಗಳಿಗೆ ಬೇಕಿಲ್ಲ.

ಲಕ್ಷ ಲಕ್ಷ ಸಂಬಳ ಕೊಟ್ಟು ಉದ್ಯೋಗಿಗಳನ್ನು ನೇಮಿಸಿಕೊಂಡು, ಅವರಿಗೆ ರಜೆ, ಅದೂ ಇದೂ ಭತ್ಯೆ, ಬಡ್ತಿ… ಹೀಗೆ ಎಲ್ಲವನ್ನೂ ಕೊಡುವ ಬದಲು ಏನೂ ಇಲ್ಲದೇ ಯಂತ್ರವೇ ಅವರಿಗಿಂತ ಹೆಚ್ಚು ಕೆಲಸ ಮಾಡುತ್ತದೆ ಎಂದ ಮೇಲೆ ಮಾಲೀಕರಿಗೆ ಇನ್ನೇನು ಬೇಕು? ಇದಾಗಲೇ ಹಲವಾರು ಕಂಪೆನಿಗಳನ್ನು ಕೃತಕ ಬುದ್ಧಿಮತ್ತೆ ತನ್ನ ತೆಕ್ಕೆಗೆ ಪಡೆದುಕೊಂಡಿದೆ.

ಇದೇ ರೀತಿ ಆವಿಷ್ಕಾರ ಆಗುತ್ತಲೇ ಇರುವ ಕಾರಣದಿಂದ, ಉದ್ಯಮಿ ಬಿಲ್​ ಗೇಟ್ಸ್​ ಅವರೇ ಹೇಳಿರುವಂತೆ ಇನ್ನು ಮುಂದೆ ಬರಬರುತ್ತಾ ಮನುಷ್ಯರ ಅವಶ್ಯಕತೆಗಳೇ ಇರುವುದಿಲ್ಲ. ಅದರಲ್ಲಿಯೂ ಮುಖ್ಯವಾಗಿ ವೈದ್ಯರು ಮತ್ತು ಶಿಕ್ಷಕರ ಜಾಗಕ್ಕೆ ಎಐ ಬರುವ ಕಾರಣ, ಅವರ ಅವಶ್ಯಕತೆಯೂ ಇರುವುದಿಲ್ಲ. ಇದೆಲ್ಲಾ ಬರಲು ಹತ್ತೇ ವರ್ಷಗಳ ಸಾಕು ಎಂದಿದ್ದಾರೆ! ಬದಲಾಗುತ್ತಿರುವ ಕಾಲಘಟ್ಟದಲ್ಲಿ ತಂತ್ರಜ್ಞಾನ ಹೇಗೆ ಉಪಯೋಗಕ್ಕೆ ಬರುತ್ತಿದೆ ಎನ್ನುವ ಬಗ್ಗೆ ಅವರು ಸಂತೋಷದಿಂದ ಈ ವಿಷಯವನ್ನು ಹೇಳಿದ್ದಾರೆ. AI ಯೊಂದಿಗೆ, ಮುಂದಿನ ದಶಕದಲ್ಲಿ ಉತ್ತಮ ವೈದ್ಯಕೀಯ ಸಲಹೆ ಮತ್ತು ಉತ್ತಮ ಶಿಕ್ಷಣವು ಉಚಿತ ಮತ್ತು ತುಂಬಾ ಸಾಮಾನ್ಯವಾಗುತ್ತದೆ ಎನ್ನುವ ಮೂಲಕ ಈಗ ಚಿಕಿತ್ಸೆ ಮತ್ತು ಶಿಕ್ಷಕವನ್ನೇ ವ್ಯವಹಾರ ಮಾಡಿಕೊಂಡು ಲಕ್ಷ ಗಟ್ಟಲೆ ಬಾಚುತ್ತಿರುವ ಬಗ್ಗೆ ಮಾತನಾಡಿದ್ದಾರೆ ಅವರು. ಜನಸಾಮಾನ್ಯರು ಇನ್ನು, ಸುಲಭದಲ್ಲಿ ಶಿಕ್ಷಣ ಮತ್ತು ವೈದ್ಯಕೀಯ ಸೌಲಭ್ಯ ಪಡೆಯಬಹುದು. ಜನರ ಜಾಗದಲ್ಲಿ ಕೃತಕ ಬುದ್ಧಿಮತ್ತೆ ಬರಲಿದೆ ಎಂದಿದ್ದಾರೆ.

‘ಜಗತ್ತು ಹೊಸ ಯುಗವನ್ನು ಪ್ರವೇಶಿಸುತ್ತಿದೆ. ಉತ್ತಮ ಔಷಧಗಳು ಮತ್ತು ರೋಗನಿರ್ಣಯದಿಂದ ಹಿಡಿದು AI ಬೋಧಕರು ಮತ್ತು ವರ್ಚುವಲ್ ಸಹಾಯಕರವರೆಗೆ AI ನಮ್ಮ ಜೀವನದ ಬಹುತೇಕ ಪ್ರತಿಯೊಂದು ಅಂಶವನ್ನು ಸ್ಪರ್ಶಿಸುತ್ತದೆ. ಈ ಬೆಳವಣಿಗೆ ವೇಗವಾಗಿ ನಡೆಯುತ್ತಿದೆ’ ಎಂದಿದ್ದಾರೆ ಅವರು. ಮಾರಕ ಕಾಯಿಲೆಗಳಿಗೆ ಯಶಸ್ವಿ ಚಿಕಿತ್ಸೆಗಳು, ಹವಾಮಾನ ಬದಲಾವಣೆಗೆ ಉತ್ತಮ ಪರಿಹಾರಗಳು ಮತ್ತು ಎಲ್ಲರಿಗೂ ಉತ್ತಮ ಗುಣಮಟ್ಟದ ಶಿಕ್ಷಣ ದೊರಕಲಿದೆ ಎಂದಿದ್ದಾರೆ. ಆದರೆ ಇದೀಗ ಉದ್ಯೋಗಿಗಳಿಗೆ ಆತಂಕವನ್ನು ಸೃಷ್ಟಿಸುತ್ತಿದೆ. ವೈದ್ಯಕೀಯ ಶಿಕ್ಷಣಕ್ಕೆ ಕೋಟಿಗಟ್ಟಲೆ ಹಣ ಸುರಿದು, ಅದಕ್ಕಿಂತ ಡಬಲ್​ ಹಣವನ್ನು ರೋಗಿಗಳಿಂದ ವಸೂಲಿ ಮಾಡಲು ಕಾಯುತ್ತಿರುವ ಭಾವಿ ವೈದ್ಯರಿಗೆ ಇದು ಭಾರಿ ಆಘಾತಕಾರಿಯಾಗುತ್ತಿದೆ. ದುಬಾರಿ ಬೆಲೆ ಬಾಳುವ ಆಸ್ಪತ್ರೆಗಳಿಗೂ ಇದು ಹೊಡೆತ ಬೀಳಲಿದೆ. ಅದೇ ಇನ್ನೊಂದೆಡೆ ಶಿಕ್ಷಣ ಸಂಸ್ಥೆಗಳನ್ನು ವ್ಯವಹಾರವನ್ನಾಗಿ ಮಾಡಿಕೊಂಡು ಎಲ್​ಕೆಜಿಗೂ ಲಕ್ಷ ಲಕ್ಷ ಫೀಸ್​ ಪಡೆಯುವವರಿಗೂ ಇದು ಹೊಡೆತ ಬೀಳಲಿದೆ ಎಂದೇ ನಂಬಲಾಗಿದೆ.

ಆದರೆ ಒಂದು ಯಂತ್ರ ಎಷ್ಟರಮಟ್ಟಿಗೆ ಫಲಿತಾಂಶ ನೀಡುತ್ತದೆ ಎನ್ನುವುದು ಕೂಡ ಇಲ್ಲಿ ಪ್ರಶ್ನಾರ್ಹವಾಗಿದೆ. ಒಂದು ಕಡೆ ಉದ್ಯೋಗ ಕಳೆದುಕೊಳ್ಳುವವರ ಸಂಖ್ಯೆ ಹೆಚ್ಚುತ್ತಿದ್ದರೆ, ಎಐ ಬಂದ ಮೇಲೆ, ಅದರಲ್ಲಿ ನುರಿತರಾದವರಿಗೆ ಉದ್ಯೋಗದ ಅವಕಾಶ ಹೇರಳವಾಗಿ ಸಿಗಲಿದೆ ಎನ್ನುವ ಮಾತು ಕೂಡ ಕೇಳಿ ಬರುತ್ತಿದೆ. ಒಂದೆಡೆ ಸಕಾರಾತ್ಮಕ ಮಾತುಗಳ ಜೊತೆ ಉದ್ಯೋಗ ಸಿಗದೇ ಇರುವ ಆತಂಕವೂ ಎದುರಾಗಿದೆ. ಮುಂದೆ ಜಗತ್ತು ಏನಾಗಲಿದೆ ಎನ್ನುವುದನ್ನು ಕಾದು ನೋಡಬೇಕಿದೆ ಅಷ್ಟೇ. ಒಂದು ಕಾಲದಲ್ಲಿ ಎಂಜಿಯರಿಂಗ್​ಗೆ ಅಪಾರ ಅವಕಾಶಗಳು ಇದ್ದ ಕಾರಣ, ಎಲ್ಲರೂ ತಮ್ಮ ಮಕ್ಕಳನ್ನು ಎಂಜಿನಿಯರಿಂಗ್​ಗೆ ಕಳುಹಿಸಿರುವ ಪರಿಣಾಮ ಇಂದು ಹಲವಾರು ಮಂದಿ ನೋಡುತ್ತಿದ್ದಾರೆ. ತಮ್ಮ ಮಕ್ಕಳನ್ನು ಎಂಜಿನಿಯರ್​ ಮಾಡಬೇಕು, ಲಕ್ಷಲಕ್ಷ ಸಂಪಾದಿಸಬೇಕು ಎಂದು ಆಸೆಹೊತ್ತ ಹಲವು ಯುವಕರು ಅತ್ಯಂತ ಕನಿಷ್ಠ ಸಂಬಳಕ್ಕೆ ದುಡಿಯತ್ತಿರುವುದೂ ನಡೆದಿದೆ. ಇದೀಗ ಕೃತಕ ಬುದ್ಧಿಮತ್ತೆ ಬಂದು ಇನ್ನೆಷ್ಟು ಮಂದಿಯ ಭವಿಷ್ಯಕ್ಕೆ ಧಕ್ಕೆಯಾಗುವುದೋ ಎನ್ನುವ ಆತಂಕವಂತೂ ಇದ್ದೇ ಇದೆ.


Spread the love
Share:

administrator

Leave a Reply

Your email address will not be published. Required fields are marked *