ಬಿಗ್ ಬಾಸ್ ಖ್ಯಾತಿಯ ಚೈತ್ರಾ ಕುಂದಾಪುರ ಸುಳ್ಳು ಸುದ್ದಿ ಹಬ್ಬಿಸಿದವರ ವಿರುದ್ಧ ಸಿಡಿದೆದ್ದಿದ್ದು ಯಾಕೆ ಗೊತ್ತಾ?

ಸದಾ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಲ್ಲಿರುವ ಸೆಲೆಬ್ರಿಟಿಗಳಲ್ಲಿ ಬಿಗ್ ಬಾಸ್ 11 (Bigg Boss 11) ರ ಸ್ಪರ್ಧಿ ಚೈತ್ರಾ ಕುಂದಾಪುರ (Chaitra Kundapur) ಕೂಡ ಸೇರಿದ್ದಾರೆ. ಕೆಲ ತಿಂಗಳ ಹಿಂದಷ್ಟೆ ಮದುವೆ ಆಗಿರುವ ಚೈತ್ರಾ ಸದ್ಯ ಮನೆ ಜೊತೆ ಆಡ್ ಶೂಟಿಂಗ್ ನಲ್ಲಿ ಬ್ಯುಸಿ. ಇನ್ಸ್ಟಾಗ್ರಾಮ್ ನಲ್ಲಿ ಚೈತ್ರಾ ಕುಂದಾಪುರ ಅನೇಕ ಶೋರೂಮ್, ಮೇಕಪ್ ಆರ್ಟಿಸ್ಟ್ ಗಳ ಜಾಹೀರಾತು ನೀಡೋದನ್ನು ನೀವು ಕಾಣ್ಬಹುದು. ಆದ್ರೀಗ ಚೈತ್ರಾ ಜಾಹೀರಾತಿನ ಬದಲು ತಮ್ಮ ವೈಯಕ್ತಿಕ ವಿಷ್ಯಕ್ಕೆ ಚರ್ಚೆಗೆ ಬಂದಿದ್ದಾರೆ. ಚೈತ್ರಾ ಕುಂದಾಪುರ ತಮ್ಮ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಿದವರ ವಿರುದ್ಧ ಸಿಡಿದೆದ್ದಿದ್ದಾರೆ. ಇನ್ಸ್ಟಾಗ್ರಾಮ್ ನಲ್ಲಿ ತಮ್ಮ ಬಗ್ಗೆ ಹಾಕಿರುವ ಸುದ್ದಿ ಸುಳ್ಳು ಎಂದಿರುವ ಚೈತ್ರಾ, ಕ್ಲಿಕ್ ಬೈಟ್ ಗಾಗಿ ಸುಳ್ಳು ಸುದ್ದಿ ಹರಡುವ ವೆಬ್ ಸೈಟ್ (Website) ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.

ಮದುವೆಯಾದ ಕೆಲವೇ ತಿಂಗಳಲ್ಲಿ ಕನ್ನಡಿಗರಿಗೆ ಸಿಹಿ ಸುದ್ದಿ ಕೊಟ್ಟ ರೆಬಲ್ ಚೈತ್ರ ಕುಂದಾಪುರ. ಫಿದಾ ಆದ ಕರ್ನಾಟಕ ಎನ್ನುವ ಶೀರ್ಷಿಕೆಯಲ್ಲಿ ಅವ್ರ ಬಗ್ಗೆ ಸುದ್ದಿಯೊಂದು ವೈರಲ್ ಆಗಿತ್ತು. ಅದರ ಸ್ಕ್ರೀನ್ ಶಾಟ್ ತೆಗೆದು ತಮ್ಮ ಇನ್ಸ್ಟಾಗ್ರಾಮ್ ಗೆ ಪೋಸ್ಟ್ ಮಾಡಿರುವ ಚೈತ್ರಾ ಕುಂದಾಪುರ, ಇದು ಫೇಕ್ ನ್ಯೂಸ್ ಎಂದಿದ್ದಾರೆ. ಕ್ಲಿಕ್ ಬೈಟ್ ಆಸೆಗೆ ಕಂಡವರ ಮನೆಯ ಖಾಸಗಿ ವಿಷಯಗಳ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸುವ ಇಂತಹ ಲೋ ಕ್ಲಾಸ್ ವೆಬ್ ನ್ಯೂಸ್ ಗಳ ಮೇಲೆ ಕಠಿಣ ಕ್ರಮ ಕೈಗೊಳ್ಳುವ ಕಾನೂನು ಬರಬೇಕಿದೆ. ಇವರ ಲಾಲಸೆಗೆ ಇನ್ನೊಬ್ಬರ ವೈಯಕ್ತಿಕ ಬದುಕಿನ ಬಗ್ಗೆ ಇವರು ಹರಡಿಸುವ ಸುದ್ದಿಗಳು ನಮ್ಮ ಮತ್ತು ನಮ್ಮ ಕುಟುಂಬದವರ ಮೇಲೆ ಎಂತಹ ಪರಿಣಾಮ ಬೀರಬಹುದೇನ್ನುವ ಚಿಕ್ಕ ಕಲ್ಪನೆಯೂ ಇರಲಿಕ್ಕಿಲ್ಲ. ಇತ್ತೀಚಿಗೆ ಇಂತಹ ಮುಖ ತೋರಿಸದೆ ಸುಳ್ಳು ಹಬ್ಬಿಸುವ ಯೂಟ್ಯೂಬ್ ಚಾನೆಲ್ ಗಳಿಗೆ ಕಡಿವಾಣ ಹಾಕಲು ಸ್ವತಃ ಯೂಟ್ಯೂಬ್ ಮುಂದಾಗಿತ್ತು. ವ್ಯವಸ್ಥೆ ಕೂಡ ಆ ದಿಕ್ಕಿನಲ್ಲಿ ಯೋಚಿಸಬೇಕಿದೆ ಅಂತ ದೊಡ್ಡ ಶೀರ್ಷಿಕೆ ಕೂಡ ಹಾಕಿದ್ದಾರೆ. ಚೈತ್ರಾ ಕುಂದಾಪುರ ಈ ಪೋಸ್ಟ್ ಗೆ ಅನೇಕರು ಕಮೆಂಟ್ ಮಾಡಿದ್ದಾರೆ. ಸುಳ್ಳು ಸುದ್ದಿ ಹಬ್ಬಿಸುವ ವೆಬ್ ಸೈಟ್ ಬಂದಾಗ್ಬೇಕು ಅಂತ ಕಮೆಂಟ್ ಮಾಡಿದ್ದಾರೆ.
ಫೈರ್ ಬ್ರ್ಯಾಂಡ್ ಭಾಷಣಗಾರ್ತಿ ಎಂದೇ ಪ್ರಸಿದ್ಧಿ ಪಡೆದವರು ಚೈತ್ರಾ ಕುಂದಾಪುರ. ಜೈಲಿಗೆ ಹೋಗಿ ಬಂದ್ಮೇಲೆ ಅವರ ಬಗ್ಗೆ ಜನರಿಗೆ ತಪ್ಪು ಅಭಿಪ್ರಾಯವಿತ್ತು. ಬಿಗ್ ಬಾಸ್ 11ರ ಸ್ಪರ್ಧಿಯಾಗಿ ಬಿಗ್ ಬಾಸ್ ಮನೆ ಸೇರಿದ್ದ ಚೈತ್ರಾ, ಜನರಿಗೆ ತಮ್ಮ ಮೇಲಿದ್ದ ಇಮೇಜ್ ಬದಲಿಸಿಕೊಳ್ಳಲು ಯಶಸ್ವಿಯಾಗಿದ್ದರು. ಸಾಕಷ್ಟು ವಾದ – ವಿವಾದದ ಮಧ್ಯೆಯೇ ಅವರು ಜನರಿಗೆ ಹತ್ತಿರವಾಗಿದ್ದರು. ಬಿಗ್ ಬಾಸ್ ಮನೆಯಿಂದ ಹೊರ ಬಂದ್ಮೇಲೆ ಚೈತ್ರಾ ಕುಂದಾಪುರ ಕಲರ್ಸ್ ಕನ್ನಡದ ಬಾಯ್ಸ್ ವರ್ಸಸ್ ಗರ್ಲ್ಸ್ ಶೋನಲ್ಲಿ ಪಾಲ್ಗೊಂಡಿದ್ದರು. ಇದ್ರ ಜೊತೆ ಸಾಕಷ್ಟು ಬ್ಯೂಟಿ ಪಾರ್ಲರ್, ಸೀರೆ ಅಂಡಿಗಳಿಗೆ ಭೇಟಿ ನೀಡಿದ್ದ ಚೈತ್ರಾ, ಇನ್ಸ್ಟಾಗ್ರಾಮ್ ರೀಲ್ಸ್ ಮಾಡ್ತಿದ್ರು. ಕೆಲ ತಿಂಗಳ ಹಿಂದೆ ಮೇ 9 ರಂದು ಚೈತ್ರಾ 12 ವರ್ಷಗಳಿಂದ ಪ್ರೀತಿಸಿದ್ದ ಗೆಳೆಯ ಶ್ರೀಕಾಂತ್ ಕೈ ಹಿಡಿದಿದ್ದಾರೆ. ಮದುವೆಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಮೇಲೂ ಚೈತ್ರಾ ಶೂಟಿಂಗ್ ನಲ್ಲಿ ಬ್ಯುಸಿ. ಈಗ ಶ್ರೀಕಾಂತ್ ಜೊತೆ ಅನೇಕ ಬ್ರಾಂಡ್ ಗಳ ಜಾಹೀರಾತು ಮಾಡ್ತಿದ್ದಾರೆ ಚೈತ್ರಾ ಕುಂದಾಪುರ.
