ಸುಧಾರಿತ ಎಐ ಹ್ಯಾಕಿಂಗ್‌ನಿಂದ ಎಚ್ಚೆತ್ತ ಕೇಂದ್ರ ಸರ್ಕಾರ-ಎಐ ನಿಯಂತ್ರಣಗೆ ಸೂಚನೆ

ಬೆಂಗಳೂರು: ಶೈಕ್ಷಣಿಕ, ಪೊಲೀಸ್, ಐಟಿ, ವೈದ್ಯಕೀಯ ಸೇರಿದಂತೆ ಎಲ್ಲ ರಂಗದಲ್ಲಿ ಕೃತಕ ಬುದ್ಧಿಮತ್ತೆ (ಎಐ) ಪ್ರಭಾವ ಬೀರುತ್ತಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಆಡಳಿತದಲ್ಲೂ ಎಐ ಅಳವಡಿಕೆ ಆಗಿದೆ. ಗುಪ್ತಚರ ಇಲಾಖೆಯಿಂದ ಕೇಂದ್ರ ಸರ್ಕಾರಕ್ಕೆ ‘ಎಐ ಹ್ಯಾಕಿಂಗ್’ ಕುರಿತು ಮಾಹಿತಿ ನೀಡಿದೆ.

ಹೀಗಾಗಿ ಸುಧಾರಿತ ಎಐ ತಂತ್ರಜ್ಞಾನ ಬಳಸದಂತೆ ಕೇಂದ್ರ ಕಟ್ಟುನಿಟ್ಟಿನ ಸೂಚನೆ ನೀಡಿದೆ.
ಕೃತಕ ಬುದ್ಧಿಮತ್ತೆ (ಎಐ). ಸಣ್ಣ ಪುಟ್ಟ ಸಂಸ್ಥೆಗಳಿಂದ ಹಿಡಿದು ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ಬಳಸುತ್ತಿವೆ. ಮನುಷ್ಯ ಮಾಡುವ ಕೆಲಸಗಳನ್ನು ಎಐ ಪರಿಣಾಮಕಾರಿಯಾಗು ಮಾಡುತ್ತದೆ. ಭಾರತ ಸೇರಿದಂತೆ ಅನೇಕ ದೇಶಗಳಲ್ಲಿ ಎಐ ಚಾಲ್ತಿಯಲ್ಲಿದೆ. ಮಿತಿ ಮೀರಿದ ಎಐ ಬಳಕೆ ವಿಶ್ವಕ್ಕೆ ಆತಂಕ ಎದುರಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಹ್ಯಾಕರ್‌ಗಳು ಸೈಬರ್ ದಾಳಿಗೆ ಅದರಲ್ಲೂ ಎಐ ಮೇಲೆ ದಾಳಿ ಮಾಡಲು ಮುಂದಾಗಿದ್ದಾರೆ. ಅಮೆರಿಕಾದ ಎಐಗಳನ್ನು ಹ್ಯಾಕ್ ಮಾಡಲು ಯತ್ನಿಸುತ್ತಿದ್ದಾರೆ ಎಂಬ ಮಾಹಿತಿ ಬೆಳಕಿಗೆ ಬಂದಿದೆ. ಇದರಿಂದ ಅಮೆರಿಕಾದ ಮಹತ್ವ ಮಾಹಿತಿ ಖದಿಯಲು ಮುಂದಾಗಿದ್ದಾರೆ ಎನ್ನಲಾಗಿದೆ. ಈ ಹ್ಯಾಕರ್‌ಗಳ ಅಮೆರಿಕಾ ದಾಳಿ ಬಳಿಕ, ಮುಂದಿನ ದಾಳಿ ಭಾರತದ ಮೇಲೆ ಎಂಬ ಮಾಹಿತಿ ಲಭ್ಯಾಗಿದೆ. ಹೀಗಾಗಿ ರಹಸ್ಯ ಕಾಪಿಟ್ಟುಕೊಳ್ಳಲು ಮುಂದಾದ ಭಾರತ ಸರ್ಕಾರ, ಪ್ರಬಲ ಹ್ಯಾಕರ್‌ಗಳ ಸೈಬರ್ ದಾಳಿ ತಡೆಯಲು ಮಹತ್ವದ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದೆ.
ಸುಧಾರಿತ ಎಐ ಬಳಸಿದರೆ ಕಾದಿದೆ ಆಪತ್ತು
ಸುಧಾರಿತ ಎಐ ತಂತ್ರಜ್ಞಾನ ಅಧ್ಯಯನ ಮಾಡಲು ಹೊರಟ್ಟಿದ್ದ ತಜ್ಞರಿಗೆ ಅಗತ್ಯ ಸಲಹೆ ನೀಡಲಾಗಿದೆ. ಎಐ ಅಗತ್ಯಕ್ಕಿಂತ ಹೆಚ್ಚಿನ ಮಾಹಿತಿ, ಅಗತ್ಯ ವಿರುವ ಎಲ್ಲ ಮಾಹಿತಿ ನೀಡುತ್ತದೆ. ಆದ್ದರಿಂದ ಈ ಎಐ ಬಳಕೆ ಮಿತಿ ಮೀರಿ ಬಳಕೆ ಮಾಡಿದರೆ ಅದು ಹ್ಯಾಕರ್ ಆಗಬಹುದು. ಅದರಿಂದ ಸಾಕಷ್ಟು ಅಪಾಯ ಎದರಾಗಬಹುದೆಂದು ತಿಳಿಸಲಾಗಿದೆ. ಡೀಪ್ ಸೀಕ್, ಚಾಟ್ ಬೀಟ್ ಸೇರಿದಂತೆ ಸುಧಾರಿತ ಅನೇಕ ಎಐ ಟೋಲ್ ಬಳಸದಂತೆ ಎಚ್ಚರಿಕೆ ನೀಡಿದೆ. ಇದು ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರಿ ವ್ಯಾಪ್ತಿಯ ಸರ್ಕಾರಿ ಕಚೇರಿಗಳಿಗೆ ಸಂಬಂಧಿಸಿದಂತಾಗಿದೆ. ಏಕಂದರೆ ಸರ್ಕಾರಿ ಕಚೇರಿಗಳಲ್ಲಿ ಅಗತ್ಯ ಮಾಹಿತಿ ಸೋರಿಕೆ ಆದರೆ ದೇಶಕ್ಕೆ ಸಂಕಷ್ಟ ಎದುರಾಗುವ ನಿರೀಕ್ಷೆ ಇರುತ್ತದೆ.
ವೈರಸ್, ಸಾಧನ ಸೃಷ್ಟಿಸಿ ಎಐ ಹ್ಯಾಕ್?
ಒಂದು ವೇಳೆ ಅಡ್ವಾನ್ಸ್ ಎಐ ಬಳಕೆಯಿಂದ ದೇಶದ ಮಾಹಿತಿಯು ತಪ್ಪು ವ್ಯಕ್ತಿಗಳ ಕೈ ಸಿಕ್ಕರೆ ದೊಡ್ಡ ವಿನಾಶಕ್ಕೆ ಕಾರಣವಾಬಹುದೆಂದು ತಂತ್ರಜ್ಞರು ಎಚ್ಚರಿಸಿದ್ದಾರೆ. ಸುಧಾರಿತ ಎಐ ಗಳನ್ನು ಹ್ಯಾಕಿಂಗ್ ಆಗದಂತೆ ನೋಡಿಕೊಳ್ಳಬೇಕು ಎಂದು ಸರ್ಕಾರ ತಿಳಿಸಿದೆ. ನಾನಾ ಬಗೆಯು ಯುದ್ಧ ನೋಡಿದರುವ ಜಗತ್ತು ಇದೀಗ ಸೈಬರ್ ವಾರ್ ಸವಾಲುಗಳನ್ನು ಎದುರಿಸುವ ಸಂಭವವಿದೆ. ಅಲ್ಲದೇ ಕಿಡಿಗೇಡಿಗಳು ವೈರಸ್, ದೊಡ್ಡ ಮಟ್ಟದ ಸಾಧನ ಸೃಷ್ಟಿಸಿ ಎಐ ಹ್ಯಾಕ್ ಮಾಡುವ ಸಾಧ್ಯತೆಗಳು ಇವೆ ಎಂದು ಗುಪ್ತಚರ ಮೂಲಗಳು ಮಾಹಿತಿ ನೀಡಿದ್ದು, ಕೇಂದ್ರ ಸರ್ಕಾರ ಅಲರ್ಟ್ ಆಗಿದೆ.
