Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ದೇವರ ಚಿತ್ರಗಳ ಮರೆಯಲ್ಲಿ ಡ್ರಗ್ಸ್ ದಂಧೆ: 10 ಕೋಟಿ ಮೌಲ್ಯದ LSD ಸ್ಟ್ರಿಪ್ಸ್ ವಶಪಡಿಸಿಕೊಂಡ ಸಿಸಿಬಿ!

Spread the love

ಬೆಂಗಳೂರು: ಡ್ರಗ್ಸ್​​ ದಂಧೆಕೋರರಿಗೆ ಬೆಂಗಳೂರು ಪೊಲೀಸರು ಭರ್ಜರಿ ಶಾಕ್​​ ಕೊಟ್ಟಿದ್ದಾರೆ. ನಗರದ ಪ್ರತಿಷ್ಠಿತ ಅಪಾರ್ಟ್​ಮೆಂಟ್​ನಲ್ಲಿ ಡ್ರಗ್ಸ್ ಪತ್ತೆ ಮಾಡಲಾಗಿದ್ದು, ಬರೋಬ್ಬರಿ 10 ಕೋಟಿ ರೂಪಾಯಿ ಮೌಲ್ಯದ ಮಾದಕ ವಸ್ತುಗಳನ್ನು ಸಿಸಿಬಿ ವಶಕ್ಕೆ ಪಡೆದಿದೆ. ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಕೇರಳ ಮೂಲದ ಅಶ್ವಿನ್(27), ಮೊಬಿನಾ(25) ಬಂಧಿತ ಆರೋಪಿಗಳಾಗಿದ್ದು, LSD, ಹೈಡ್ರೋ ಗಾಂಜಾ ಮತ್ತು ಚರಸ್​​ನ ಆರೋಪಿಗಳಿಂದ ಸೀಜ್​​ ಮಾಡಲಾಗಿದೆ. LSD ಸ್ಟ್ರಿಪ್ಸ್​​ಗಳನ್ನು ಕರ್ನಾಟಕದಲ್ಲಿ ವಶಪಡಿಸಿಕೊಂಡಿರೋದು ಇದೇ ಮೊದಲು ಎನ್ನಲಾಗಿದೆ.ಆರೋಪಿಗಳು ದೇವರ ಚಿತ್ರ ಸೇರಿ ವಿವಿಧ ಚಿತ್ರಕಲಾ ರೂಪದಲ್ಲಿ LSD ಸ್ಟ್ರಿಪ್ಟ್ ಮಾರಾಟ ಮಾಡುತ್ತಿದ್ದರು ಎಂಬುದು ಬೆಂಗಳೂರು ಸಿಸಿಬಿ ನಾರ್ಕೊಟಿಕ್ಸ್ ವಿಭಾಗದ ಕಾರ್ಯಾಚರಣೆಯ ವೇಳೆ ಬಯಲಾಗಿದೆ. ಬಂಧಿತ ಇಬ್ಬರೂ ಆರೋಪಿಗಳು ಡ್ರಗ್ಸ್ ಪೆಡ್ಲಿಂಗ್ ಅನ್ನೇ ವೃತ್ತಿ ಮಾಡಿಕೊಂಡಿದ್ದರು. ಇವರಿಗೆ ವಿನ್ಸೆಂಟ್​ ಎಂಬಾತ ಥಾಯ್​ಲ್ಯಾಂಡ್​​ನಿಂದ ಡ್ರಗ್ಸ್​ ಕಳಿಸುತ್ತಿದ್ದ. ವಿಮಾನದ ಮೂಲಕ ಆಗಾಗ ಅಲ್ಪ ಪ್ರಮಾಣದಲ್ಲಿ ಡ್ರಗ್ಸ್ ಪೂರೈಕೆ ಆಗುತ್ತಿತ್ತು. ವಿನ್ಸೆಂಟ್ ಸೂಚಿಸಿದ ಜಾಗದಲ್ಲಿ ಅಶ್ವಿನ್ ಮತ್ತು ಮೊಬಿನಾ ಡ್ರಗ್ಸ್ ಇಡುತ್ತಿದ್ದರು ಎಂಬುದು ಗೊತ್ತಾಗಿದೆ. ಇನ್ನು ಪ್ರಕರಣ ಸಂಬಂಧ ಫ್ಲ್ಯಾಟ್​​​​ ಮಾಲೀಕನ ಪಾತ್ರದ ಬಗ್ಗೆಯೂ ಸಿಸಿಬಿಯಿಂದ ಪರಿಶೀಲನೆ ಮುಂದುವರಿದಿದೆ.ವಿದ್ಯಾರ್ಥಿಗಳು, ಉದ್ಯೋಗಿಗಳಿಗೆ ಡ್ರಗ್ಸ್​ ಮಾರಾಟ: ಆರೋಪಿ ಅರೆಸ್ಟ್​​
ವಿದ್ಯಾರ್ಥಿಗಳು, ಐಟಿಬಿಟಿ ಉದ್ಯೋಗಿಗಳಿಗೆ ಡ್ರಗ್ಸ್​ ಮಾರಾಟ ಮಾಡುತ್ತಿದ್ದ ಒಡಿಶಾ ಮೂಲದ ಡ್ರಗ್ ಪೆಡ್ಲರ್​​ ಓವರ್ನನ್ನು ಬೆಂಗಳೂರಿನ ವೈಟ್​ಫೀಲ್ಡ್ ಪೊಲೀಸರು ಬಂಧಿಸಿದ್ದಾರೆ. ಲಿಂಗರಾಜ್ ದಾಸ್​​ ಬಂಧಿತ ಆರೋಪಿಯಾಗಿದ್ದು, ಈತನಿಂದ 55 ಲಕ್ಷ ಮೌಲ್ಯದ 27 ಕೆಜಿ ಗಾಂಜಾ, 3 ಕೆಜಿ 200 ಗ್ರಾಂ ಆ್ಯಶಿಸ್ ಆಯಿಲ್ ಜಪ್ತಿ ಮಾಡಲಾಗಿದೆ.


Spread the love
Share:

administrator

Leave a Reply

Your email address will not be published. Required fields are marked *