Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಮಂಗಳೂರು ರಸ್ತೆಯಲ್ಲಿ ಕಾರು ಅಪಘಾತ: ಪದ್ಮನಾಭ ಚಿಕಿತ್ಸೆ ಫಲಕಾರಿಯಾಗದೆ ನಿಧನ

Spread the love

ಕಡಬ: ಒಂದು ವಾರದ ಹಿಂದೆ ಸುಬ್ರಹ್ಮಣ್ಯ-ಉಪ್ಪಿನಂಗಡಿ ರಾಜ್ಯ ಹೆದ್ದಾರಿಯ ಕೊಯ್ಲ ಗ್ರಾಮದ ಗಂಡಿಬಾಗಿಲಿನಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಹಳೆನೇರೆಂಕಿ ಗ್ರಾಮದ ಮಾಡೆಂಜಿಮಾರು ನಿವಾಸಿ ಪದ್ಮನಾಭ (48) ಅವರು ಚಿಕಿತ್ಸೆ ಫಲಕಾರಿಯಾಗದೆ ಮೇ 18 ರ ರಾತ್ರಿ ಕೊನೆಯುಸಿರೆಳೆದಿದ್ದಾರೆ.

ಮೇ 11 ರ ರಾತ್ರಿ ಪದ್ಮನಾಭ ಅವರು ತಮ್ಮ ಸಹೋದರ ಸುದರ್ಶನ್ ಮತ್ತು ಸ್ನೇಹಿತರಾದ ಚೇತನ್ ಹಾಗೂ ಸತೀಶ್ ಅವರೊಂದಿಗೆ ಉಪ್ಪಿನಂಗಡಿ ಸಮೀಪದ ಕಾರ್ಯಕ್ರಮದಿಂದ ಮನೆಗೆ ಹಿಂದಿರುಗುತ್ತಿದ್ದಾಗ ಅಪಘಾತ ಸಂಭವಿಸಿತ್ತು.ಮಿನಿ ಬಸ್ ಮತ್ತು ಕಾರಿನ ನಡುವಿನ ಢಿಕ್ಕಿಯ ಪರಿಣಾಮವಾಗಿ, ಕಾರಿನಲ್ಲಿದ್ದ ಪದ್ಮನಾಭ ತೀವ್ರವಾಗಿ ಗಾಯಗೊಂಡಿದ್ದರು. ಅವರನ್ನು ತಕ್ಷಣ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದರೂ, ಒಂದು ವಾರ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.ಮೃತರು ಪತ್ನಿ ಮತ್ತು ಇಬ್ಬರು ಪುತ್ರರನ್ನು ಅಗಲಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *