Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಇವಿಎಂ ನಿಜವಾಗಲೂ ಹ್ಯಾಕ್ ಮಾಡಬಹುದೆ?- ಭಾರತದಿಂದ ಸ್ಪಷ್ಟನೆ

Spread the love

ಅಮೆರಿಕ : ಅಮೆರಿಕದ ರಾಷ್ಟ್ರೀಯ ಗುಪ್ತಚರ ನಿರ್ದೇಶಕಿ ತುಳಸಿ ಗಬ್ಬಾರ್ಡ್ ಅವರು ಎಲೆಕ್ಟ್ರಾನಿಕ್ ಮತ ಯಂತ್ರಗಳ (ಇವಿಎಂ) ಸುರಕ್ಷತೆಯ ಬಗ್ಗೆ ಆಘಾತಕಾರಿ ಹೇಳಿಕೆ ನೀಡಿದ್ದು, ಇವಿಎಂಗಳನ್ನು ಹ್ಯಾಕ್ ಮಾಡಿ ಮತಗಳ ಫಲಿತಾಂಶವನ್ನು ತಿರುಚಬಹುದು ಎಂದು ದೀರ್ಘಕಾಲದಿಂದ ಈ ವ್ಯವಸ್ಥೆಗಳು ದುರ್ಬಲವಾಗಿವೆ ಎಂಬ ಪುರಾವೆಗಳನ್ನು ತಮ್ಮ ತಂಡ ಕಂಡುಕೊಂಡಿದೆ ಎಂದು ತಿಳಿಸಿದ್ದಾರೆ. ಈ ಹೇಳಿಕೆಯಿಂದಾಗಿ ಇವಿಎಂಗಳ ಸುರಕ್ಷತೆಯ ಬಗ್ಗೆ ದೇಶದಾದ್ಯಂತ ಮತ್ತೊಮ್ಮೆ ತೀವ್ರ ಚರ್ಚೆ ಆರಂಭವಾಗಿದೆ. ಅಮೆರಿಕದ ಚುನಾವಣೆಗಳ ಸಮಗ್ರತೆಯನ್ನು ಖಾತರಿಪಡಿಸಲು ಕಾಗದದ ಮತಪತ್ರಗಳ ಬಳಕೆಯನ್ನು ಕಡ್ಡಾಯಗೊಳಿಸಬೇಕು ಎಂದು ಗಬ್ಬಾರ್ಡ್ ಒತ್ತಾಯಿಸಿದ್ದಾರೆ.

ಭಾರತದ ಇವಿಎಂ ಹ್ಯಾಕ್ ಅಸಾಧ್ಯ:
ಭಾರತೀಯ ಚುನಾವಣಾ ಆಯೋಗವು ಗಬ್ಬಾರ್ಡ್ ಅವರ ಹೇಳಿಕೆ ಭಾರತದ ಇವಿಎಂಗಳಿಗೆ ಅನ್ವಯಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಆಯೋಗದ ಮೂಲಗಳ ಪ್ರಕಾರ, ಭಾರತದ ಇವಿಎಂಗಳು ಅಮೆರಿಕ ಮತ್ತು ಇತರ ದೇಶಗಳಲ್ಲಿ ಬಳಸುವ ಇವಿಎಂಗಳಿಗಿಂತ ಸಂಪೂರ್ಣವಾಗಿ ಭಿನ್ನವಾಗಿದ್ದು, ಇವುಗಳನ್ನು ಇಂಟರ್ನೆಟ್, ವೈಫೈ ಅಥವಾ ಯಾವುದೇ ನೆಟ್‌ವರ್ಕ್‌ಗೆ ಸಂಪರ್ಕಿಸಲು ಸಾಧ್ಯವಿಲ್ಲ. ಇವಿಎಂಗಳು ಸರಳ, ನಿಖರ ಮತ್ತು ವಿಶ್ವಾಸಾರ್ಹ ಕ್ಯಾಲ್ಕುಲೇಟರ್‌ನಂತೆ ಕಾರ್ಯನಿರ್ವಹಿಸುತ್ತವೆ ಎಂದು ಆಯೋಗ ತಿಳಿಸಿದೆ.

ಸುಪ್ರೀಂ ಕೋರ್ಟ್‌ ಕೂಡ ಇವಿಎಂ ಸುರಕ್ಷಿತ ಎಂದಿದೆ:
ಚುನಾವಣಾ ಆಯೋಗವು ಭಾರತದ ಇವಿಎಂಗಳು ಸುಪ್ರೀಂ ಕೋರ್ಟ್‌ನಿಂದ ಸುರಕ್ಷಿತವೆಂದು ಪರಿಗಣಿತವಾಗಿವೆ ಎಂದು ಒತ್ತಿಹೇಳಿದೆ. ಇವುಗಳನ್ನು ವಿವಿಧ ರಾಜಕೀಯ ಪಕ್ಷಗಳು ಹಲವು ಹಂತಗಳಲ್ಲಿ ಪರಿಶೀಲಿಸಿವೆ. ಚುನಾವಣೆಗೂ ಮುನ್ನ ನಡೆಯುವ ಅಣಕು ಮತದಾನದಲ್ಲಿ ರಾಜಕೀಯ ಪಕ್ಷಗಳ ಏಜೆಂಟ್‌ಗಳು ಯಂತ್ರಗಳ ಕಾರ್ಯನಿರ್ವಹಣೆಯನ್ನು ಖಾತರಿಪಡಿಸುತ್ತಾರೆ. ಇದರ ಜೊತೆಗೆ, ಐದು ಕೋಟಿಗೂ ಹೆಚ್ಚು ವಿವಿಪ್ಯಾಟ್ ಸ್ಲಿಪ್‌ಗಳನ್ನು ರಾಜಕೀಯ ಪಕ್ಷಗಳ ಮುಂದೆ ಪರಿಶೀಲಿಸಲಾಗಿದ್ದು, ಇದುವರೆಗೆ ಯಾವುದೇ ಅಕ್ರಮಗಳು ಕಂಡುಬಂದಿಲ್ಲ ಎಂದು ಆಯೋಗದ ಮೂಲಗಳು ಸ್ಪಷ್ಟಪಡಿಸಿವೆ.
ಗಬ್ಬಾರ್ಡ್ ಅವರ ಹೇಳಿಕೆಯಿಂದ ಜಾಗತಿಕವಾಗಿ ಇವಿಎಂಗಳ ಸುರಕ್ಷತೆಯ ಬಗ್ಗೆ ಚರ್ಚೆ ತೀವ್ರಗೊಂಡಿದ್ದರೂ, ಭಾರತದ ಇವಿಎಂಗಳು ತಮ್ಮ ಸರಳ ವಿನ್ಯಾಸ ಮತ್ತು ಕಟ್ಟುನಿಟ್ಟಾದ ಪರಿಶೀಲನೆಯಿಂದಾಗಿ ಸುರಕ್ಷಿತವಾಗಿವೆ ಎಂದು ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ.


Spread the love
Share:

administrator

Leave a Reply

Your email address will not be published. Required fields are marked *