ಮದುವೆಯ ಊಟದಲ್ಲಿ ಕ್ಯಾಲೋರಿ ಎಣಿಕೆ! ವೆಸ್ಟ್ ಬಂಗಾಳದ ವಿಭಿನ್ನ ಮೆನು ಕಾರ್ಡ್ ವೈರಲ್

ಪಶ್ಚಿಮಬಂಗಾಳ : ಮದುವೆ ಅಂದ್ರೆ ಸಂಭ್ರಮವಿಲ್ಲದೇ ಹೋದರೆ ಹೇಗೆ ಅಲ್ಲವೇ. ಮದುವೆಯ ದಿನ ಮನೆಯಲ್ಲಿ ಹಬ್ಬದ ವಾತಾವರವೇ ಸೃಷ್ಟಿಯಾಗಿರುತ್ತದೆ. ವಧು ಮತ್ತು ವರನ ಕಡೆಯ ಅಥಿತಿಗಳೆಲ್ಲರೂ ಮೋಜು ಮಸ್ತಿ ಮಾಡುತ್ತಾ ಸಮಯ ಕಳೆಯುತ್ತಿರುತ್ತಾರೆ. ಮದುವೆಯ ಊಟ ಕೂಡ ಅಷ್ಟೇ ಭರ್ಜರಿಯಾಗಿರುತ್ತದೆ.

ವಿವಿಧ ರೀತಿಯ ವಿವಿಧ ಭಕ್ಷ್ಯ ಗಳು ಹಾಗೂ ಸ್ವೀಟ್ ಗಳು ಒಂದೇ ಎರಡೇ. ಕೆಲವರಂತೂ ಯಾವುದನ್ನು ಮಿಸ್ ಮಾಡಿಕೊಳ್ಳದೇ, ಎಲ್ಲದರ ರುಚಿ ಸವಿಯುತ್ತಾರೆ. ಆದರೆ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಈ ಹೊಸ ಪರಿಕಲ್ಪನೆಯ ಮೆನು ಕಾರ್ಡ್ ವೈರಲ್ ಆಗುತ್ತಿದೆ. ಪ್ರತಿಯೊಂದು ಆಹಾರದ ಪಕ್ಕದಲ್ಲಿ ಕ್ಯಾಲೋರಿಯನ್ನು ಉಲ್ಲೇಖಿಸಲಾಗಿರುವುದು ವಿಶೇಷ. ಪಶ್ಚಿಮಬಂಗಾಳ ದಲ್ಲಿ ನಡೆದ ಮದುವೆಯಲ್ಲಿ ಈ ಹೊಸ ಪರಿಕಲ್ಪನೆಯ ಮೆನು ಕಾರ್ಡ್ ಗಮನ ಸೆಳೆದಿದೆ. ಈ ಮೆನು ಕಾರ್ಡ್ ವೈರಲ್ ಆಗುತ್ತಿದ್ದಂತೆ ಸೋಶಿಯಲ್ ಮೀಡಿಯಾ ಬಳಕೆದಾರರು ಕ್ರಿಯೇಟಿವಿ ಮೆಚ್ಚಿಕೊಂಡಿದ್ದಾರೆ.
ಹೆಸರಿನ ಖಾತೆಯಲ್ಲೋ ರೆಡ್ಡಿಟ್ ಬಳಕೆ ದಾರರು ಈ ಮೆನು ಕಾರ್ಡ್ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ. ಈ ಮೆನು ಕಾರ್ಡ್ ನನ್ನು ಸೂಕ್ಷ್ಮವಾಗಿ ಗಮನಿಸಿದಾಗ ಈ ಕಾರ್ಡ್ಗೆ ‘ಕ್ಯಾಲೋರಿ ಮೆಮೊ’ ಎಂದು ಹೆಸರಿಸಲಾಗಿದೆ. ಇದರಲ್ಲಿ ‘ನಿಮ್ಮೆಲ್ಲರಿಗೂ ಚಾರಿಟಿ ಹಾಲ್ಗೆ ಸ್ವಾಗತ.ನಾವೆಲ್ಲರೂ ಇಂದು ಪ್ರೀತಿಯನ್ನು ಸೆಲೆಬ್ರೇಟ್ ಮಾಡುತ್ತಿದ್ದೇವೆ. ಈ ವಿಶೇಷ ಕ್ಷಣವನ್ನು ನೀವು ಆನಂದಿಸಿ, ಆಹಾರವನ್ನು ಸವಿಯಿರಿ. ಆದರೆ ದಯವಿಟ್ಟು ಆಹಾರವನ್ನು ವ್ಯರ್ಥ ಮಾಡಬೇಡಿ’ ಎಂದು ಬರೆಯಲಾಗಿದೆ. ಅದಲ್ಲದೇ ವಿಶೇಷ ಖಾದ್ಯಗಳ ಪಟ್ಟಿಯನ್ನು ನೀಡಲಾಗಿದ್ದು ಅದರ ಮುಂಭಾಗದಲ್ಲಿ ಕ್ಯಾಲೋರಿಯನ್ನು ಉಲ್ಲೇಖಿಸಲಾಗಿದೆ.
ಮೆನು ಕಾರ್ಡ್ ಫೋಟೋ ವೈರಲ್ ಆಗುತ್ತಿದ್ದಂತೆ ಬಳಕೆದಾರರು ತರಹೇವಾರಿ ಕಾಮೆಂಟ್ ಗಳನ್ನು ಮಾಡಿದ್ದಾರೆ. ಬಳಕೆದಾರರೊಬ್ಬರು, ‘ನಾನು ಬೆಂಗಾಲಿ ಮದುವೆಯನ್ನು ಮಿಸ್ ಮಾಡಿಕೊಳ್ಳುತ್ತೇನೆ. ಉತ್ತರ ಭಾರತದ ಮದುವೆಗಳು ಸಾಮಾನ್ಯವಾಗಿ ಸಸ್ಯಾಹಾರಿ ಆಹಾರವನ್ನು ಹೊಂದಿರುತ್ತದೆ. ಆದರೆ ಬಂಗಾಳಿ ಮದುವೆಗಳಲ್ಲಿ ಬಹುತೇಕ ಎಲ್ಲವೂ ಮಾಂಸಾಹಾರಿಗಳಾಗಿರುತ್ತವೆ’ ಎಂದಿದ್ದಾರೆ. ಮತ್ತೊಬ್ಬರು, ‘ಅತ್ಯಂತ ಕೆಟ್ಟದಾಗಿ ವಿನ್ಯಾಸಗೊಳಿಸಲಾದ ಮೆನು ಕಾರ್ಡ್ಗಳಲ್ಲಿ ಒಂದು’ ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನೊರ್ವ ಬಳಕೆದಾರರು, ‘ಈ ರೀತಿಯ ಮೆನು ಕಾರ್ಡ್ ನ್ನು ನಾನು ತುಂಬಾ ಇಷ್ಟ ಪಡುತ್ತೇನೆ. ನಾನು ಜೀವನಶೈಲಿ ಹಾಗೂ ಫಿಟ್ ನೆಸ್ ಬಗ್ಗೆ ಹೆಚ್ಚು ಆಸಕ್ತಿ ತೋರಿಸುತ್ತೇನೆ. ಆದರೆ, ಈ ಮೆನು ಕಾರ್ಡ್ ಆಹಾರ ಪದ್ಧತಿಯ ಪರಿಣಾಮಗಳನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಒಂದೆರಡು ದಿನಗಳ ಕಾಲ ಈ ರೀತಿ ಆಹಾರ ಸೇವಿಸುವುದರಿಂದ ಆರೋಗ್ಯಕ್ಕೆ ಯಾವುದೇ ಹಾನಿಯಿಲ್ಲ’ ಎಂದು ಕಾಮೆಂಟ್ ನಲ್ಲಿ ತಿಳಿಸಿದ್ದಾರೆ.