ಶಿರಾಡಿ ಪೆಟ್ರೋಲ್ ಬಂಕ್ ಬಳಿ ಬಸ್ ಡಿವೈಡರ್‌ಗೆ ಢಿಕ್ಕಿ: ಹಲವರಿಗೆ ಗಾಯ

ಧರ್ಮಸ್ಥಳ: ಧರ್ಮಸ್ಥಳದಿಂದ ಬೆಂಗಳೂರಿಗೆ ತೆರಳುತ್ತಿದ್ದ ಬಸ್ ಅಡ್ಡಹೊಳೆ ಶಿರಾಡಿ ಪೆಟ್ರೋಲ್ ಬಂಕ್ ಬಳಿ ಸೋಮವಾರ ರಾತ್ರಿ ಟೈರ್ ಸ್ಫೋಟಗೊಂಡು ಅವಘಡ ಸಂಭವಿಸಿದೆ.
13 ಮಂದಿಗೆ ಗಾಯವಾಗಿದ್ದು, ಮೂವರನ್ನು ಉಜಿರೆಯ ಆಸ್ಪತ್ರೆಗೆ, ಉಳಿದವರನ್ನು ನೆಲ್ಯಾಡಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಪಡಿಸಲಾಗಿದೆ.