ಬಸ್ ಪ್ರಯಾಣಿಕರೇ ಟಾರ್ಗೆಟ್: 22 ಲಕ್ಷದ ಚಿನ್ನ ಕದ್ದಿದ್ದ ‘ಕಳ್ಳಿ’ ಅರೆಸ್ಟ್!

ಚಿಕ್ಕಬಳ್ಳಾಪುರ: ಕೆಎಸ್‌ಆರ್‌ಟಿಸಿ ಬಸ್‌ಗಳನ್ನೇ (KSRTC Bus) ಗುರಿಯಾಗಿಸಿಕೊಂಡು ಬರೋಬ್ಬರಿ 22 ಲಕ್ಷ ರೂ. ಮೌಲ್ಯದ 240 ಗ್ರಾಂ ಚಿನ್ನಾಭರಣ ಕಳವು ಮಾಡಿದ್ದ ಮಹಿಳೆಯನ್ನ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.


ಅಂದಹಾಗೆ ಚಿಂತಾಮಣಿ (ChintaMani) ತಾಲೂಕಿನ ತಳಗವಾರ ಗ್ರಾಮದ ಮಹಿಳೆ ವನಜಾಕ್ಷಿ ಎಂಬಾಕೆ ದೇವಸ್ಥಾನಕ್ಕೆ ಹೋಗುವ ಸಲುವಾಗಿ ಜಂಗಮಕೋಟೆ ಕ್ರಾಸ್ ನಿಂದ ಸೂಲಿಬೆಲೆಗೆ ತೆರಳಲು ಬಸ್ ಹತ್ತುತ್ತಿದ್ದ ವೇಳೆ ಚಿನ್ನಾಭರಣ (Gold Jewellery) ಕಳವು ಮಾಡುತ್ತಿದ್ದಳಂತೆ.

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸರು ಕುಪ್ಪಂ ಮೂಲದ ಮೀನಾಕ್ಷಿ ಎಂಬಾಕೆಯನ್ನ ಬಂಧಿಸಿದ್ದಾರೆ. ಬಂಧಿತ ಮಹಿಳೆ ಬಳಿ 22 ಲಕ್ಷ ಮೌಲ್ಯದ 240 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆದುಕೊಂಡಿದ್ದಾರೆ.