ಮಳೆಯಿಂದಾಗಿ ಘಾಟ್ ನಲ್ಲಿ ಬಸ್ ಉರುಳಿ ಬಿದ್ದು 17 ಜನರಿಗೆ ಗಾಯ

ದೇಶಾದ್ಯಂತ ಮಳೆಯ ಆರ್ಭಟ ಮುಂದುವರೆದಿದ್ದು, ಹಿಮಾಚಲ ಪ್ರದೇಶದಲ್ಲಿ ಭಾರೀ ಮಳೆಯಿಂದಾಗಿ ಖಾಸಗಿ ಬಸ್ ವೊಂದು ಘಾಟ್ ನಲ್ಲಿ ಉರುಳಿ ಬಿದ್ದ ಪರಿಣಾಮ 17 ಪ್ರಯಾಣಿಕರು ಗಾಯಗೊಂಡಿದ್ದಾರೆ.

ಮಂಡಿ ಜಿಲ್ಲೆಯ ಪತ್ರಿಘಾಟ್ನಲ್ಲಿ ಬಸ್ ಕಂದಕಕ್ಕೆ ಉರುಳಿ 17 ಜನರು ಗಾಯಗೊಂಡಿದ್ದಾರೆ.
ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆ ನಡೆಯುತ್ತಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲಾಗುತ್ತಿದೆ. ಬಸ್ ಜಹುದಿಂದ ಮಂಡಿಗೆ ಹೋಗುತ್ತಿತ್ತು.