ಕಂಠ ಪೂರ್ತಿ ಕುಡಿದು ಬಸ್ ಚಾಲಕನ ಹುಚ್ಚಾಟ,

ಮಂಡ್ಯ: ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಓರ್ವ ಬಸ್ ಚಾಲಕ ಕಂಠಪೂರ್ತಿ ಕುಡಿದು ಬಂದು ಹುಚ್ಚಾಟ ಮೆರೆದಿರುವಂತಹ ಘಟನೆ ನಡೆದಿದೆ. ಬಸ್ ನಿಲ್ದಾಣದಲ್ಲಿ ಬಟ್ಟೆ ಕಳಚಿ ಅಸಭ್ಯ ವರ್ತನೆ ಮಾಡಿದ್ದಾರೆ. ಚಾಲಕನ ವರ್ತನೆ ನೋಡಿ ಮಹಿಳಾ ಪ್ರಯಾಣಿಕರು ಮುಜುಗರದಿಂದ ದೂರ ಸರಿದಿದ್ದಾರೆ. ಆತನ ಕಿರಿಕಿರಿಗೆ ಬೇಸತ್ತು ಸ್ಥಳದಲ್ಲಿದ್ದ ಪ್ರಯಾಣಿಕರಿಂದ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಸ್ಥಳಕ್ಕೆ ಆಗಮಿಸಿದ ಪೊಲೀಸರು ಆತನನ್ನು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದ್ದಾರೆ.
