ಟೆಕ್ಸಸ್ ದಂಪತಿ ಮನೆಯಲ್ಲಿ ಕಳ್ಳತನ; ಡಿಜಿ-ಐಜಿಪಿಗೆ ದೂರು ನೀಡಿದ ಯುಎಸ್ ಎಂಬಸಿ!

ಬೆಂಗಳೂರು : ಬೆಂಗಳೂರು (Bengaluru) ನಗರದಲ್ಲಿ ನಡೆದ ಕಳ್ಳತನ (crime) ಪ್ರಕರಣವೊಂದಕ್ಕೆ ಅಮೆರಿಕ ರಾಯಭಾರ ಕಚೇರಿ (US Embassy) ನೇರವಾಗಿ ಮಧ್ಯಪ್ರವೇಶ ಮಾಡಿದ್ದು, ಡಿಜಿ ಹಾಗೂ ಐಜಿಪಿಗೆ ಎಂಬಸಿಯಿಂದಲೇ ದೂರು ಸಲ್ಲಿಸಲಾಗಿದೆ

ಅಮೆರಿಕದ ಟೆಕ್ಸಸ್ ಮೂಲದ ಸಾಫ್ಟ್‌ವೇರ್ ಉದ್ಯೋಗಿಗಳಾದ ಮೆರಿಯಲ್ ಮೊರೆನೋ ಮತ್ತು ಟೊಮ್ಮೋ ಕನ್ಕನಿಯನ್ ದಂಪತಿ ಬೆಂಗಳೂರಿನಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.

ಪತಿ ಅಮೆರಿಕಾದಲ್ಲಿದ್ದ ವೇಳೆ, ಪತ್ನಿ ಕೆಲಸಕ್ಕೆ ತೆರಳಿದ್ದ ಸಂದರ್ಭದಲ್ಲಿ ಮನೆಯ ಕೆಲಸಗಾರ ಪಶ್ಚಿಮ ಬಂಗಾಳ ಮೂಲದ ಚಂದನ್ ರೌಲ್ ಕಳ್ಳತನ ನಡೆಸಿದ್ದಾನೆ ಎನ್ನುವ ಆರೋಪ ಕೇಳಿ ಬಂದಿದೆ.
ಜನವರಿ 21ರಂದು ನಡೆದ ಈ ಕಳ್ಳತನದಲ್ಲಿ ವಜ್ರ, ಚಿನ್ನಾಭರಣ ಹಾಗೂ ಸುಮಾರು 600 ಅಮೆರಿಕನ್ ಡಾಲರ್ ನಗದು ಕಳವು ಮಾಡಲಾಗಿದೆ. ಮನೆಗೆ ಮರಳಿದ ಮೆರಿಯಲ್ ಮೊರೆನೋಗೆ ಘಟನೆ ಬೆಳಕಿಗೆ ಬಂದಿದ್ದು, ಅವರು ಈ ಬಗ್ಗೆ ಪತಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಪತಿ ಅಮೆರಿಕಾದಲ್ಲೇ ಇದ್ದು ರಾಯಭಾರ ಕಚೇರಿಗೆ ಮಾಹಿತಿ ನೀಡಿದ್ದಾರೆ. ಈ ಸಂಬಂಧ ಅಮೆರಿಕದ ರಾಯಭಾರೀ ಮಧ್ಯಪ್ರವೇಶಿಸಿ ಐಜಿಪಿ ಹಾಗೂ ಡಿಜೆಗೆ ದೂರು ನೀಡಿದ್ದಾರೆ.
ಈ ಸಂಬಂಧ ಜೀವನ್ ಭೀಮಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಘಟನೆಗೆ ಸಂಬಂಧಿಸಿ ಪೊಲೀಸರು ಆರೋಪಿಯನ್ನು ಬಂಧಿಸಿ, ಕಳವು ಮಾಡಿದ್ದ ವಸ್ತುಗಳನ್ನು ಆತನಿಂದ ವಶಪಡಿಸಿಕೊಂಡಿದ್ದಾರೆ.