ವಿದೇಶಿ ವಿದ್ಯಾರ್ಥಿಗಳ ಹೊರೆ: ಹಾರ್ವರ್ಡ್ ಅನುದಾನ ಪ್ರಶ್ನಿಸಿದ ಟ್ರಂಪ್

ಯುಎಸ್ : ಯಾವ ದೇಶಗಳೂ ಸಹ ಹಾರ್ವರ್ಡ್ ವಿವಿಗೆ ಹಣಕಾಸಿನ ನೆರವು ನೀಡುವುದಿಲ್ಲ . ನಾವು ಮಾತ್ರ ನೀಡಬೇಕು ಎಂದರೆ ಹೇಗೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಶ್ನಿಸಿದ್ದಾರೆ. ವಿವಿಗೆ ನೀಡಲಾಗುತ್ತಿದ್ದ ಅನುದಾನವನ್ನು ಕಡಿತಗೊಳಿಸದ ಬಗ್ಗೆ ವಿಶ್ವದಾದ್ಯಂತ ವ್ಯಾಪಕ ಟೀಕೆ ವ್ಯಕ್ತವಾಗಿದೆ.
ಈ ಬೆನ್ನಲ್ಲೇ ಟ್ರಂಪ್ ಪ್ರತಿಕ್ರಿಯೆ ಹೊರಬಿದ್ದಿದೆ.
ಶೇ 31 ರಷ್ಟು ವಿದ್ಯಾರ್ಥಿಗಳು ವಿದೇಶಗಳಿಂದ ಹಾರ್ವರ್ಡ್ ವಿವಿಗೆ ವ್ಯಾಸಂಗಕ್ಕೆ ಆಗಮಿಸುತ್ತಾರೆ. ನಾವು ಅವರಿಗಾಗಿ ಬಿಲಿಯನ್ ಗಟ್ಟಲೆ ಡಾಲರ್ ಖರ್ಚು ಮಾಡುತ್ತೇವೆ. ಇದು ಮೂರ್ಖತನವಲ್ಲದೇ ಮತ್ತೇನು ಎಂದು ಟ್ರಂಪ್ ಗುಡುಗಿದ್ದಾರೆ.
ವಿದೇಶಿ ವಿದ್ಯಾರ್ಥಿಗಳ ಸಾಂದ್ರತೆ ಹೆಚ್ಚಾದ ಕಾರಣ ಅಮೆರಿಕ ವಿದ್ಯಾರ್ಥಿಗಳಿಗೆ ಪ್ರವೇಶ ದೊರೆಯುತ್ತಿಲ್ಲ .ಹೀಗಾಗಿ ವಿದೇಶಿ ವಿದ್ಯಾರ್ಥಿಗಳಿಗೆ ನಿರ್ಬಂಧ ವಿಧಿಸಲು ನಿರ್ಣಯಿಸಲಾಗಿದ ಎಂದು ಟ್ರಂಪ್ ತಮ್ಮ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ