ಮಂಗಳೂರಿನಲ್ಲಿ ಬ್ಯಾನ್ ಆದ ನೋಟುಗಳ ಕಂತೆ ಪತ್ತೆ – ಸಂಜೆ ವೇಳೆಗೆ ನಾಪತ್ತೆ

ಮಂಗಳೂರು : ಈಗಾಗಲೇ ಸರ್ಕಾರ ಬ್ಯಾನ್ ಮಾಡಿರುವ 1000 ಹಾಗೂ 500 ರೂ. ಮುಖ ಬೆಲೆಯ ನೋಟುಗಳ ಕಂತೆ ಮಂಗಳೂರಿನ ನಗರದ ಮೇರಿಹಿಲ್ ಮೈದಾನದಲ್ಲಿ ಪತ್ತೆಯಾಗಿದೆ.

ಮಂಗಳವಾರ (ಮಾ.11) ಮುಂಜಾನೆ ಮೈದಾನದ ಒಂದು ಮೂಲೆಯಲ್ಲಿ ಇದ್ದ ಚೀಲವೊಂದರಲ್ಲಿ ಇತರ ತ್ಯಾಜ್ಯದ ಜತೆ ನೋಟುಗಳು ಕಂಡು ಬಂದಿದೆ ಎನ್ನಲಾಗಿದೆ. ಆದರೆ ಸಂಜೆಯ ವೇಳೆಗೆ ಈ ನೋಟುಗಳು ನಾಪತ್ತೆಯಾಗಿದ್ದವು. ಯಾರೋ ಅದನ್ನು ತೆಗೆದುಕೊಂಡು ಹೋಗಿರುವ ಸಾಧ್ಯತೆ ಇದೆ ಎಂದು ಶಂಕಿಸಲಾಗಿದೆ.
ನೋಟು ಅಮಾನ್ಯಗೊಂಡ ಬಳಿಕ ಮನೆಯಲ್ಲಿ ಉಳಿದಿದ್ದ ಈ ನೋಟುಗಳನ್ನು ತಂದು ಮೈದಾನದ ಬದಿ ಬಿಸಾಡಿರುವ ಸಾಧ್ಯತೆ ಇದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಮಂಗಳೂರು ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
