ಬಂಪರ್ ಸುದ್ದಿ: 7 ದಿನಗಳ ಬಳಿಕ ಚಿನ್ನದ ದರದಲ್ಲಿ ಭಾರಿ ಇಳಿಕೆ! ಆಷಾಢದ ನಂತರ ಚಿನ್ನ ಹಗುರ!

ದೇಶದಲ್ಲಿ ಏಳು ದಿನಗಳ ಬಳಿಕ ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿದೆ. 22, 24 ಮತ್ತು 18 ಕ್ಯಾರಟ್ ಚಿನ್ನದ ಬೆಲೆಯಲ್ಲಿ ಗಣನೀಯ ಇಳಿಕೆ ಕಂಡುಬಂದಿದ್ದು, ಬೆಳ್ಳಿ ದರ ಕೂಡ ಇಳಿಕೆಯಾಗಿದೆ

ದೇಶದಲ್ಲಿಂದು ಬರೋಬ್ಬರಿ ಏಳು ದಿನಗಳ ಬಳಿಕ ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿದೆ.
ಕೊನೆಯ ಬಾರಿ ಜುಲೈ 16ರಂದ ಚಿನ್ನದ ದರ ಕಡಿಮೆಯಾಗಿತ್ತು. ಇಂದಿನ 22, 24 ಮತ್ತು 18 ಕ್ಯಾರಟ್ ಚಿನ್ನದ ಬೆಲೆಯಲ್ಲಿ ಗಣನೀಯ ಇಳಿಕೆ ಕಂಡು ಬಂದಿದೆ. ಹಾಗೆ ಬೆಳ್ಳಿಯ ನಾಗಲೋಟಕ್ಕೆ ಇಂದು ಬ್ರೇಕ್ ಬಿದ್ದಿದ್ದು, ದರ ಕಡಿಮೆಯಾಗಿದೆ.
ಇಂದು ಬರೋಬ್ಬರಿ ಚಿನ್ನದ ಬೆಲೆಯಲ್ಲಿ 13,500 ರೂ.ಗಳವರೆಗೆ ಕಡಿಮೆಯಾಗಿದೆ. ಸಾಮಾನ್ಯವಾಗಿ ಆಷಾಢ ಮಾಸದಲ್ಲಿ ಯಾವುದೇ ವಸ್ತುಗಳನ್ನು ಖರೀದಿಸಲ್ಲ. ಇದೀಗ ಆಷಾಢ ಮುಗಿಯುತ್ತಿರುವ ಸುಸಂದರ್ಭದಲ್ಲಿ ಬಂಗಾರ ಹಗುರವಾಗಿದೆ. ಇಂದಿನ ಚಿನ್ನದ ಬೆಲೆ ಎಷ್ಟಿದೆ ಎಂದು ನೋಡೋಣ ಬನ್ನಿ.
ದೇಶದಲ್ಲಿಂದು 22 ಕ್ಯಾರಟ್ ಚಿನ್ನದ ಬೆಲೆ
1 ಗ್ರಾಂ: 9,255 ರೂಪಾಯಿ
8 ಗ್ರಾಂ: 74,040 ರೂಪಾಯಿ
10 ಗ್ರಾಂ: 92,550 ರೂಪಾಯಿ
100 ಗ್ರಾಂ: 9,25,500 ರೂಪಾಯಿ
ದೇಶದಲ್ಲಿಂದು 24 ಕ್ಯಾರಟ್ ಚಿನ್ನದ ಬೆಲೆ
1 ಗ್ರಾಂ: 10,097 ರೂಪಾಯಿ
8 ಗ್ರಾಂ: 80,776 ರೂಪಾಯಿ
10 ಗ್ರಾಂ: 1,00,970 ರೂಪಾಯಿ
100 ಗ್ರಾಂ: 10,09,700 ರೂಪಾಯಿ
ದೇಶದಲ್ಲಿಂದು 18 ಕ್ಯಾರಟ್ ಚಿನ್ನದ ಬೆಲೆ
1 ಗ್ರಾಂ: 7,573 ರೂಪಾಯಿ
8 ಗ್ರಾಂ: 60,584 ರೂಪಾಯಿ
10 ಗ್ರಾಂ: 75,730 ರೂಪಾಯಿ
100 ಗ್ರಾಂ: 7,57,300 ರೂಪಾಯಿ
ದೇಶದ ಪ್ರಮುಖ ನಗರಗಳಲ್ಲಿಂದು ಚಿನ್ನದ ಬೆಲೆ
22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ ಹೀಗಿದೆ. ಚೆನ್ನೈ: 92,550 ರೂಪಾಯಿ, ಮುಂಬೈ: 92,550 ರೂಪಾಯಿ, ದೆಹಲಿ: 92,700 ರೂಪಾಯಿ, ಬೆಂಗಳೂರು: 92,550 ರೂಪಾಯಿ, ಅಹಮದಾಬಾದ್: 92,600 ರೂಪಾಯಿ, ಕೋಲ್ಕತ್ತಾ: 92,550 ರೂಪಾಯಿ, ಹೈದರಾಬಾದ್: 92,550 ರೂಪಾಯಿ, ವಡೋದರಾ: 92,600 ರೂಪಾಯಿ
ದೇಶದಲ್ಲಿಂದು ಬೆಳ್ಳಿ ಬೆಲೆ
ಚಿನ್ನದ ಜೊತೆಯಲ್ಲಿ ಬೆಳ್ಳಿ ದರವೂ ಕಡಿಮೆಯಾಗಿದೆ. 1 ಕೆಜಿ ಬೆಳ್ಳಿ ದರದಲ್ಲಿಂದು 1,000 ರೂ.ಗಳಷ್ಟು ಕಡಿಮೆಯಾಗಿದೆ. ಇಂದಿನ ದರ ಎಷ್ಟಿದೆ ಎಂದು ನೋಡೋಣ ಬನ್ನಿ
10 ಗ್ರಾಂ: 1,180 ರೂಪಾಯಿ
100 ಗ್ರಾಂ: 11,800 ರೂಪಾಯಿ
1000 ಗ್ರಾಂ: 1,18,000 ರೂಪಾಯಿ
ಎಷ್ಟು ಇಳಿಕೆ?
ಇಂದು 22 ಕ್ಯಾರಟ್ 100 ಗ್ರಾಂ ಚಿನ್ನದ ಬೆಲೆಯಲ್ಲಿ 12,500 ರೂಪಾಯಿ ಕಡಿಮೆಯಾಗಿದೆ. ಹಾಗೆ 24 ಕ್ಯಾರಟ್ 100 ಗ್ರಾಂ ಚಿನ್ನದ ದರದಲ್ಲಿ 13,500 ರೂ. ಕಡಿಮೆಯಾಗಿದೆ. 18 ಕ್ಯಾರಟ್ 100 ಗ್ರಾಂ ಚಿನ್ನದ ದರದಲ್ಲಿ 10,200 ರೂ.ಗಳಷ್ಟು ಇಳಿಕೆಯಾಗಿದೆ.