ಎಮ್ಮೆಗೆ ಶೆವಿಂಗ್, ಕಟ್ಟಿಂಗ್, ಕಲರಿಂಗ್ – ಮುರ್ರಾ ತಳಿಯ ಎಮ್ಮೆ ಸೌಂದರ್ಯೀಕರಣ!

ಗಿಲ್ ಮುರ್ರಾ ಫಾರ್ಮ್’ ಎಂಬ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಎಮ್ಮೆಗಳಿಗೆ ಸಂಬಂಧಿಸಿದ ಹಲವು ಆಸಕ್ತಿದಾಯಕ ವೀಡಿಯೊಗಳನ್ನು ಪೋಸ್ಟ್ ಮಾಡಲಾಗಿದೆ. ಕೆಲವು ದಿನಗಳ ಹಿಂದೆ, ಎಮ್ಮೆಯನ್ನು ಅಲಂಕರಿಸುವ ಮತ್ತು ಅಂದಗೊಳಿಸುವ ವೀಡಿಯೊವನ್ನು ಹಂಚಿಕೊಳ್ಳಕೊಂಡಿದ್ದು, ಇದೀಗ ಈ ವಿಡಿಯೋ ಭಾರೀ ವೈರಲ್ ಆಗಿದೆ.

ಹೌದು, ಹಸು, ಎಮ್ಮೆ ಸೇರಿದಂತೆ ಸಾಕುಪ್ರಾಣಿಗಳನ್ನು ಪ್ರೀತಿಸುವರು ಅವುಗಳ ಆರೈಕೆ ತಮಗಿಂತ ಅದ್ಭುತವಾಗಿ ನೋಡಿಕೊಳ್ಳತ್ತಾರೆ. ಅಲ್ಲದೆ, ಅದನ್ನು ಮಾರುಕಟ್ಟೆಗೆ ತಂದು ಮಾರೊಲೋ ಅಥಾವ ಪ್ರದರ್ಶಿಸಲು ಮುಂದಾಗುತ್ತಾರೆ. ಇದೀಗ ಅಂಥದ್ದೇ ಗಿಲ್ ಮುರ್ರಾ ಫಾರ್ಮ್ ತಳಿಯ ಎಮ್ಮೆಗೆ ಶೆವಿಂಗ್, ಕಟ್ಟಿಂಗ್ ಮಾಡುವ ವಿಡಿಯೋ ನೋಡಿದ್ರೆ ಅಚ್ಚರಿಪಡ್ತಿರಾ!
ವೈರಲ್ ವಿಡಿಯೋದಲ್ಲೇನಿದೆ?
ಮೊದಲನೆಯದಾಗಿ, ಎಮ್ಮೆಯ ಮುಖದ ಕೂದಲನ್ನು ಬ್ಲೇಡ್‌ನಿಂದ ಸ್ವಚ್ಛಗೊಳಿಸಲಾಗುತ್ತಿರುವುದು ವಿಡಿಯೋದಲ್ಲಿ ಕಾಣಬಹುದು. ಬಳಿಕ ಅದರ ದೇಹದ ಮೇಲೆ ಸೋಪ್ ಹಚ್ಚುವ ಮೂಲಕ ಕೂದಲನ್ನು ತೆಗೆಯಲಾಗುತ್ತಿದೆ. ಕೂದಲಿಗೆ ವಿಶೇಷ ವಿನ್ಯಾಸವನ್ನು ನೀಡಲಾಗುತ್ತಿದೆ. ಇದು ಇಲ್ಲಿಗೆ ನಿಲ್ಲಲಿಲ್ಲ, ಅವರು ಅದರ ಕೊಂಬನ್ನು ಉಜ್ಜಿ ನಯವಾಗಿಸಿದರು, ನಂತರ ಕಲರ್ ಸಿಂಪಡಿಸಿತ್ತಾರೆ. ಅದರ ದೇಹವನ್ನು ವಿವಿಧ ಬಣ್ಣಗಳಲ್ಲಿ ಚಿತ್ರಿಸಿರುವುದನ್ನು ಸಹ ಕಾಣಬಹುದು. ವೀಡಿಯೊದ ಕೊನೆಯಲ್ಲಿ, ಎಮ್ಮೆ ಮನುಷ್ಯನಿಗೆ ಹೋಲಿಸಿದರೆ ತುಂಬಾ ಸುಂದರವಾಗಿ ಮತ್ತು ಬುದ್ಧಿವಂತವಾಗಿ ಕಾಣುತ್ತದೆ!
ಇನ್ನು ಈ ವಿಡಿಯೋ ಇದುವರೆಗೂ 1 ಕೋಟಿಗೂ ಹೆಚ್ಚು ಜನರು ವೀಕ್ಷಿಸಿದ್ದಾರೆ. ಈ ವಿಡಿಯೋಗೆ ಅನೇಕ ಜನರು ಕಾಮೆಂಟ್ ಮಾಡುವ ಮೂಲಕ ತಮ್ಮ ಪ್ರತಿಕ್ರಿಯೆಗಳನ್ನು ಹಂಚಿಕೊಂಡಿದ್ದಾರೆ
