ಬಿಎಸ್‌ಎಫ್ ಯೋಧನ ಪತ್ನಿಯ ಮೇಲೆ ಮೈದುನಂದರಿಂದಲೇ ಹಲವು ಬಾರಿ ಅತ್ಯಾಚಾರ, ವಿಡಿಯೋ ಬ್ಲಾಕ್‌ಮೇಲ್!

ನವದೆಹಲಿ (ಜು.1): ಉತ್ತರ ಪ್ರದೇಶದ ಪಿಲಿಭಿತ್‌ನಲ್ಲಿ ಅತ್ಯಂತ ಹೇಯ ಕೃತ್ಯ ದಾಖಲಾಗಿದ್ದು, ಬಿಎಸ್‌ಎಫ್ ಯೋಧನ ಪತ್ನಿಯ ಮೇಲೆ ಇಬ್ಬರು ಮೈದುನಂದಿರು ಹಲವು ಬಾರಿ ಅತ್ಯಾಚಾರ ಎಸಗಿದ್ದು, ಅಶ್ಲೀಲ ವೀಡಿಯೊಗಳನ್ನು ಬಳಸಿ ಬ್ಲಾಕ್‌ಮೇಲ್ ಮಾಡಿರುವ ಘಟನೆ ನಡೆದಿದೆ. ಘಟನೆಯ ಬಗ್ಗೆ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅತ್ಯಾಚಾರ ಸಂತ್ರಸ್ತೆಯ ಮೈದುನಂದಿರು ಸೇರಿದಂತೆ ಏಳು ಜನರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಮೈದುನನ ಪೈಕಿ ಒಬ್ಬನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ದೂರುದಾರರು ಪೊಲೀಸರಿಗೆ ತಿಳಿಸಿದ್ದು, ಮದುವೆಯಾದ ನಂತರ, ತನ್ನ ಅತ್ತೆಯೊಂದಿಗೆ ತನ್ನ ಗ್ರಾಮದ ಹೊರಗೆ ಪ್ರತ್ಯೇಕ ಮನೆಯಲ್ಲಿ ವಾಸಿಸುತ್ತಿದ್ದೆ. ಆಕೆಯ ಪತಿ ಬಿಎಸ್‌ಎಫ್‌ನಲ್ಲಿದ್ದರು, ಆದ್ದರಿಂದ ಅವರು ಆಗಾಗ್ಗೆ ಕರ್ತವ್ಯದಲ್ಲಿ ಇರುತ್ತಿದ್ದರು.
ತನ್ನ ಅತ್ತೆ ಊರಿನ ಒಳಗೆ ಇರುವ ಆಕೆಯ ಮನೆಗೆ ಹೋದಾಗಲೆಲ್ಲಾ, ಊರಿನ ಹೊರಗೆ ಇದ್ದ ನನ್ನ ಮನೆಗೆ ಇಬ್ಬರು ಮೈದುನಂದಿರು ಮನೆಗೆ ನುಗ್ಗಿ ತನ್ನ ಮೇಲೆ ಅತ್ಯಾಚಾರ ನಡೆಸುತ್ತಿದ್ದರು ಎಂದು ಸಂತ್ರಸ್ಥ ಮಹಿಳೆ ಪೊಲೀಸರಿಗೆ ತಿಳಿಸಿದ್ದಾಳೆ. ಅವರು ಕೃತ್ಯದ ವೀಡಿಯೊಗಳನ್ನು ಮಾಡಿ ಅವಳನ್ನು ಬ್ಲ್ಯಾಕ್‌ಮೇಲ್ ಮಾಡಲು ಬಳಸಿಕೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ತನ್ನ ಪತಿ ರಜೆಯ ಮೇಲೆ ಮನೆಗೆ ಬಂದಾಗ, ಆತನಿಗೆ ಇವರು ವೀಡಿಯೊಗಳನ್ನು ತೋರಿಸಿದ್ದಾಗಿ ಹೇಳಿದ್ದಾರೆ. ತನ್ನ ಅತ್ತೆ ಮಾವ ತನ್ನನ್ನು ಮತ್ತು ತನ್ನ ಪತಿಯನ್ನು ಹೊಡೆದಿದ್ದಾರೆ ಎಂದು ಅವರು ಹೇಳಿಕೊಂಡಿದ್ದಾರೆ. ಅವರು ತನ್ನನ್ನು ಕತ್ತು ಹಿಸುಕಿ ಕೊಲ್ಲಲು ಸಹ ಪ್ರಯತ್ನಿಸಿದ್ದಾರೆ ಎಂದು ಪೊಲೀಸರಿಗೆ ತಿಳಿಸಿದ್ದಾರೆ. ಆರೋಪಿಗಳು ವೀಡಿಯೊಗಳನ್ನು ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಜಹಾನಾಬಾದ್ ಪೊಲೀಸ್ ಠಾಣೆಯ ಉಸ್ತುವಾರಿ ಮನೋಜ್ ಕುಮಾರ್ ಮಿಶ್ರಾ ಮಾತನಾಡಿ, ಸಂತ್ರಸ್ತೆಯ ದೂರಿನ ಮೇರೆಗೆ ಅತ್ತೆ ಮತ್ತು ಮಾವ ಸೇರಿದಂತೆ ಏಳು ಜನರ ವಿರುದ್ಧ ಭಾರತೀಯ ನ್ಯಾಯ ಸಂಹಿತಾ ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್‌ಗಳ ಅಡಿಯಲ್ಲಿ ಅತ್ಯಾಚಾರ ಮತ್ತು ಹಲ್ಲೆಗಾಗಿ ಎಫ್‌ಐಆರ್ ದಾಖಲಿಸಲಾಗಿದೆ.
“ಆರೋಪಿಗಳಲ್ಲಿ ಒಬ್ಬ ಮೈದುನ ಹರಿಓಮ್‌ನನ್ನು ಬಂಧಿಸಲಾಗಿದೆ. ಉಳಿದ ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಸಂತ್ರಸ್ಥೆಗೆ ನ್ಯಾಯ ದೊರಕಿಸಿಕೊಡಲು ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡಲಾಗುತ್ತಿದೆ” ಎಂದು ಮಿಶ್ರಾ ತಿಳಿಸಿದ್ದಾರೆ.
