ಚಿನ್ನದ ಸರಕ್ಕಾಗಿ ವೃದ್ಧ ದಂಪತಿಯ ಬರ್ಬರ ಹತ್ಯೆ

ತಮಿಳುನಾಡು :ವೃದ್ಧ ದಂಪತಿಗಳನ್ನು ಬರ್ಬರವಾಗಿ ಹತ್ಯೆಗೈದ ಪಾಪಿ, ಹೊಂಚು ಹಾಕಿದ್ದ ವಸ್ತು ಕದಿಯಲು ಇಬ್ಬರ ಜೀವವನ್ನು ಬಲಿ ಪಡೆದ ಘಟನೆ ತಮಿಳುನಾಡಿನಲ್ಲಿ ವರದಿಯಾಗಿದೆ.
ಮೃತ ವೃದ್ಧ ದಂಪತಿಗಳನ್ನು ಭಾಸ್ಕರನ್ (70) ಮತ್ತು ಅವರ ಪತ್ನಿ ವಿದ್ಯಾ (65) ಗುರುತಿಸಲಾಗಿದೆ.

ಕಿರಾಣಿ ಅಂಗಡಿ ನಡೆಸುತ್ತಿದ್ದ ಭಾಸ್ಕರನ್, ಅಮ್ಮಪಾಳಯಂ ಪ್ರದೇಶದಲ್ಲಿ ತಮ್ಮ ಮನೆಯ ನೆಲ ಮಹಡಿಯಲ್ಲಿ ಪತ್ನಿಯೊಂದಿಗೆ ವಾಸ ಮಾಡುತ್ತಿದ್ದರು. ಕುಟುಂಬದಲ್ಲಿ ಜಗಳವಿಲ್ಲ, ಗಂಡ-ಹೆಂಡತಿ ನಡುವೆ ಕಿತ್ತಾಟ ಇರಲಿಲ್ಲ, ಯಾರೊಂದಿಗೂ ದ್ವೇಷವಿರಲಿಲ್ಲ. ಹೀಗಿರುವಾಗ ಇಬ್ಬರನ್ನೂ ಭೀಕರವಾಗಿ ಹತ್ಯೆಗೈಯಲು ಕಾರಣವೇನು? ಎಂಬುದಕ್ಕೆ ವಿದ್ಯಾ ಅವರು ಧರಿಸಿದ್ದ 113 ಗ್ರಾಂ ಚಿನ್ನದ ಸರವೇ ಕಾರಣ ಎಂಬುದು ತನಿಖೆಯಲ್ಲಿ ಗೊತ್ತಾಗಿದೆ.
ವೃದ್ಧೆ ಕುತ್ತಿಗೆಯಲ್ಲಿದ್ದ ಚಿನ್ನದ ಸರ ನೋಡಿದ ಆರೋಪಿ ಸಂತೋಷ್, ಬಿಹಾರ ಮೂಲದವನು ಎನ್ನಲಾಗಿದೆ. ತೀವ್ರ ಆರ್ಥಿಕ ಸಮಸ್ಯೆಗಳಿಂದ ಪರದಾಡುತ್ತಿದ್ದ ಕಿರಾತಕ, ದಂಪತಿಗಳ ಆಭರಣಗಳ ಮೇಲೆ ಕಣ್ಣಿಟ್ಟಿದ್ದ. ಭಾನುವಾರ (ಮೇ.11) ಭಾಸ್ಕರನ್ ಅವರ ಅಂಗಡಿಗೆ ತಂಪು ಪಾನೀಯ ಖರೀದಿಸುವ ನೆಪದಲ್ಲಿ ಬಂದ ಸಂತೋಷ್, ವೃದ್ಧನ ಮನೆ ಹಿಂಬಾಲಿಸಿ, ಸುತ್ತಿಗೆಯಿಂದ ದಂಪತಿಯನ್ನು ಬರ್ಬರವಾಗಿ ಹಲ್ಲೆಗೈದು ಕೊಲೆಗೈದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಭಾರತೀಯ ನ್ಯಾಯ ಸಂಹಿತಾದ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡ ಸೂರಮಂಗಲಂ ಪೊಲೀಸರು, ವಿಶೇಷ ತಂಡಗಳನ್ನು ರಚಿಸಿ, ಕೆಲವೇ ಗಂಟೆಗಳಲ್ಲಿ ಆರೋಪಿ ಸಂತೋಷ್ ಕುಮಾರ್ನನ್ನು ಬಂಧಿಸಿದ್ದಾರೆ. ಈತ ಬಿಹಾರದ ಕಾರ್ಮಿಕನಾಗಿದ್ದು, ಕಳೆದ ಹತ್ತು ವರ್ಷಗಳಿಂದ ಸೇಲಂನಲ್ಲಿ ನೆಲೆಸಿದ್ದಾನೆ ಎಂದು ವರದಿಯಾಗಿದೆ,
