‘ಪ್ರೇಮ’ದ ಹೆಸರಿನಲ್ಲಿ ಭೀಕರ ಹತ್ಯೆ: ಮಹಿಳೆಯ ಮೇಲೆ 18 ಬಾರಿ ಇರಿತ, ಸ್ಕ್ರೂಡ್ರೈವರ್‌ನಿಂದ ಕೊಲೆ

ಲಖೋ : ಕಳೆದ ಶನಿವಾರ (ಮೇ-31) ದನಗಳಿಗೆ ಮೇವು ತರಲು ಮನೆಯಿಂದ ಹೋಗಿದ್ದ ಮಹಿಳೆಯೊಬ್ಬರು ಮನೆಗೆ ವಾಪಸ್ ಬರಲೇ ಇಲ್ಲ. ಏನಾಯ್ತು ಆ ಮಹಿಳೆಗೆ ಎಂದು ಹುಡುಕುತ್ತಾ ಹೋದವರಿಗೆ ಕಂಡಿದ್ದು ಭೀಕರ ದೃಶ್ಯ.

ಭಾನುವಾರ ಉತ್ತರ ಪ್ರದೇಶದ ಮೊರಾದಾಬಾದ್‌ನಲ್ಲಿನ ಹಳ್ಳಿಯೊಂದರ ಜಮೀನಿನಲ್ಲಿ ಓರ್ವ ಮಹಿಳೆಯ ರಕ್ತಸಿಕ್ತ ಮೃತದೇಹ ಪತ್ತೆಯಾಗಿತ್ತು.
ಆಕೆಯನ್ನು ಪ್ರೀತಿಸುತ್ತಿದ್ದೇನೆ ಎಂದು ಹೇಳಿಕೊಂಡಿದ್ದ ವ್ಯಕ್ತಿ ಸ್ಕ್ರೂಡ್ರೈವರ್‌ನಿಂದ ಚಿತ್ರಹಿಂಸೆ ನೀಡಿ ಕೊಂದಿದ್ದ.
ಘಟನೆ ಏನು ?
ದನಗಳಿಗೆ ಮೇವು ತರಲು ಹೊರಟ ಮಹಿಳೆ ಸಾಯಿರಾ ಸಂಜೆಯವರೆಗೂ ಮನೆಗೆ ಹಿಂತಿರುಗದಿದ್ದಾಗ, ಆಕೆಯ ಕುಟುಂಬ ಎಲ್ಲೆಡೆ ಹುಡುಕಿದೆ. ಮರುದಿನ ಮೊರಾದಾಬಾದ್‌ನ ಕೊಟ್ವಾಲಿ ಮೈನಾಥರ್‌ನಲ್ಲಿರುವ ಜಮೀನಿನಲ್ಲಿ ಮೃತದೇಹ ಪತ್ತೆಯಾಗಿದೆ. ಆಕೆಯ ಖಾಸಗಿ ಅಂಗಗಳಿಂದ ರಕ್ತಸ್ರಾವವಾಗುತ್ತಿದ್ದಿದ್ದು ಗಮನಿಸಿದ್ರೆ, ಕೊಲೆಗೆ ಮುನ್ನ ಅತ್ಯಾಚಾರ ನಡೆದಿದೆ ಎಂಬುದು ಖಾತ್ರಿಯಾಗಿತ್ತು. ಆದರೆ, ಆಕೆಯ ಮೇಲೆ ಅತ್ಯಾಚಾರ ನಡೆದಿಲ್ಲ ಎಂದು ಮರಣೋತ್ತರ ಪರೀಕ್ಷೆ ಹೇಳುತ್ತಿತ್ತು. ಆದರೆ ಸಾಯಿರಾಗೆ ಹರಿತವಾದ ಆಯುಧದಿಂದ ಇರಿದಿರುವುದು ಖಚಿತವಾಗಿತ್ತು.
ಪ್ರಕರಣದ ಜಾಡು ಹಿಡಿದು ಹೊರಟ ಪೊಲೀಸರು ತನಿಖೆಯ ವೇಳೆ, ಸಾಯಿರಾ ಮೊಬೈಲ್ ಫೋನ್‌ನಲ್ಲಿ ಐದು ಮಿಸ್ಡ್ ಕಾಲ್ ಬಂದಿದ್ದನ್ನು ಪತ್ತೆ ಹಚ್ಚಿದ್ದರು. ಆಕೆಗೆ ಅದೇ ಗ್ರಾಮದ ರಫಿ ಎಂಬಾತ ಪದೇ ಪದೇ ಕರೆ ಮಾಡಿದ್ದು ಖಾತ್ರಿಯಾಗಿತ್ತು.
ನಂತರ ಪೊಲೀಸರು ರಫಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದರು. ವಿಚಾರಣೆಯ ವೇಳೆ, ಸಾಯಿರಾಳನ್ನು ತಾನೇ ಕೊಂದಿರುವುದಾಗಿ ರಫಿ ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾನೆ.
‘ಕೊಲೆ ಮಾಡಿ, ಸ್ನಾನ ಮಾಡಿ ಮಲಗಿಬಿಟ್ಟೆ’
‘ಸಾಯಿರಾಳನ್ನು ಪ್ರೀತಿಸುತ್ತಿರುವುದಾಗಿ ರಫಿ ಹೇಳಿದ್ದರೂ, ಆಕೆ ಪ್ರೀತಿ ಒಪ್ಪಿಕೊಂಡಿರಲಿಲ್ಲ. ಬದಲಿಗೆ ಇನ್ನೊಬ್ಬ ವ್ಯಕ್ತಿಗೆ ಹೇಳಿ ನನ್ನನ್ನು ಥಳಿಸಿದ್ದಳು ಎಂದು ರಫಿ ಹೇಳಿದ್ದಾನೆ. ಅಲ್ಲದೇ ತನ್ನನ್ನು ಥಳಿಸಿದ ವ್ಯಕ್ತಿಯೊಂದಿಗೆ ಸಾಯಿರಾ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂದು ರಫಿ ಅನುಮಾನಿಸುತ್ತಿದ್ದ.
‘ಯಾವಾಗ ಇನ್ನೊಬ್ಬನಿಗೆ ಹೇಳಿ, ತನಗೆ ಥಳಿಸಿದಳೋ, ರಫಿ ಕೆರಳಿದ್ದ. ಶನಿವಾರ, ಸಾಯಿರಾರನ್ನು ಹಿಂಬಾಲಿಸಿಕೊಂಡು ಹೋಗಿ ಸ್ಕ್ರೂಡ್ರೈವರ್‌ನಿಂದ 18 ಬಾರಿ ಇರಿದಿದ್ದ. ಸಾಯಿರಾ ನೋವಿನಿಂದ ನರಳಲು ಪ್ರಾರಂಭಿಸಿದಾಗ, ಖಾಸಗಿ ಭಾಗಗಳಿಗೆ ಚುಚ್ಚಿ ಸಾಯಿಸಿದ್ದ. ಬಳಿಕ ಮನೆಗೆ ಹೋಗಿ, ಸ್ನಾನ ಮಾಡಿ, ಬಟ್ಟೆ ಬದಲಾಯಿಸಿಕೊಂಡು ಮಲಗಿದ್ದ’ ಎಂದು ಪೊಲೀಸರು ಹೇಳಿದರು.
